Featured

ಮಲ್ಪೆ : ಬಾರಿ ದೊಡ್ಡ ಪ್ರಮಾಣದಲ್ಲಿ ಬಲೆಗೆ ಬೀಳುತ್ತಿವೆ ಕಾರ್ಗಿಲ್ ಮೀನು, ಮೀನುಗಾರರಲ್ಲಿ ಆತಂಕ -Vishwanews24

ಉಡುಪಿ: ತಿನ್ನಲು ಯೋಗ್ಯವಲ್ಲದ, ಅಪರೂಪದ ಕಾರ್ಗಿಲ್ ಮೀನುಗಳೇ ಹೆಚ್ಚಾಗಿ ಮಲ್ಪೆ ಮೀನುಗಾರರ ಬಲೆಗೆ ಬೀಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸಮಾನ್ಯವಾಗಿ ಸ್ವಲ್ಪ ಪ್ರಮಾಣದಲ್ಲಿ ಅಪರೂಪಕ್ಕೆ ಬಲೆಗೆ ಬೀಳುವ ಮೀನು ಈ ಬಾರಿ ದೊಡ್ಡ ಪ್ರಮಾಣದಲ್ಲಿ ಬಲೆಗೆ ಬೀಳುತ್ತಿವೆ ಎನ್ನುತ್ತಾರೆ ಮಲ್ಪೆಯ ಮೀನುಗಾರರು.

ಸಮುದ್ರದಲ್ಲಿ ಕಾರ್ಗಿಲ್‌ ಮೀನುಗಳು ಹೇರಳವಾಗಿ ಕಂಡು ಬಂದರೆ ಇತರ ಜಾತಿಯ ಮೀನಿನ ಸಂತತಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ಮೀನುಗಾರರಲ್ಲಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈ ಬಾರಿ ಬಂಗುಡೆ, ಬೂತಾಯಿ ಅಂತಹ ಕೆಲವೊಂದು ಜಾತಿಯ ಮೀನುಗಳು ತೀರಾ ಕಡಿಮೆಯಾಗುತ್ತಿದೆ. ಮಲ್ಪೆ ಬಂದರಿನಲ್ಲಿ ಆಳಸಮುದ್ರ ಬೋಟುಗಳಿಗೆ 5ರಿಂದ 30ಟನ್‌ಗಳಷ್ಟು ಮೀನುಗಳು ಬಲೆಗೆ ಬೀಳುತ್ತಿದೆ.

ಸಣ್ಣ ದೋಣಿ ಮೀನುಗಾರಿಕೆಗೆ ಈ ಮೀನು ಲಭಿಸುತ್ತಿಲ್ಲ, ಸಮುದ್ರ ತೀರ ಪ್ರದೇಶ ಮತ್ತು ದೂರದ ಆಳದ ಪ್ರದೇಶವಲ್ಲದ ಮಧ್ಯಭಾಗದಲ್ಲಿ ಈ ಮೀನುಗಳು ಹೆಚ್ಚಾಗಿ ಸಿಗುತ್ತಿವೆ. ಹತ್ತು, ಹನ್ನೆರಡು ದಿನಕ್ಕೆ ಬರುವ ಆಳ ಸಮುದ್ರ ಮತ್ತು ನಾಲ್ಕೈದು ದಿನ ಮೀನುಗಾರಿಕೆ ನಡೆಸುವ ಕೆಲವು ಬೋಟುಗಳಿಗೆ ಸರಾಸರಿ 20-25 ಟನ್‌ಗಳಷ್ಟು ಈ ಕಾರ್ಗಿಲ್ ಫಿಶ್ ಸಿಗುತ್ತಿದೆ. ಸಮುದ್ರದಲ್ಲಿ ಇಳುವರಿ ಇಲ್ಲದೆ ತತ್ತರಿಸಿರುವ ಮೀನುಗಾರರಿಗೆ ಈ ಕಾರ್ಗಿಲ್ ಮೀನುಗಳು ತಲೆನೋವಾಗಿ ಪರಿಣಮಿಸಿವೆ.

ಸಾವಿರಾರು ರೂಪಾಯಿ ಡಿಸೇಲ್‌ ವ್ಯಯಿಸಿ ಮೀನುಗಾರಿಕೆ ತೆರಳಿದ ಮೀನುಗಾರರು ಬರಿಗೈಯಲ್ಲಿ ಹಿಂದಿರುಗಲಾಗದೆ ಸಿಕ್ಕಿದ ಕಾರ್ಗಿಲ್‌ ಮೀನನ್ನೆ ಹೊತ್ತು ತರುತ್ತಿದ್ದಾರೆ. ಟನ್‌ಗಟ್ಟಲೆ ಸಿಕ್ಕದರೂ ಇದರಿಂದ ಸಿಗುವ ಆದಾಯ ವೆಚ್ಚವನ್ನು ಸರಿದೂಗಿಸಲು ಆಗುತ್ತಿಲ್ಲ. ಒಟ್ಟಿನಲ್ಲಿ ಅಪರೂಪದ ಕಾರ್ಗಿಲ್‌ ಮೀನು ಕಡಲಲ್ಲಿ ಕಾಣಿಸಿಕೊಳ್ಳುವ ಮೂಲಕ ಮೀನುಗಾರರಲ್ಲಿ ನಷ್ಟ ಆತಂಕ ಹುಟ್ಟಿಕೊಂಡಿದೆ.

ಕಾರ್ಗಿಲ್‌ ಮೀನು : ಅತ್ಯಂತ ವಾಸನೆ ಬೀರುವ ಈ ಮೀನನ್ನು ತಿನ್ನಲು ಆಗುವುದಿಲ್ಲ. ಕಪ್ಪಗಿನ ದಪ್ಪ ಚರ್ಮದ ಈ ಮೀನು ಹೆಚ್ಚಾಗಿ ಆಫ್ರಿಕಾ, ಇಂಡೋನೇಷ್ಯಾ ಶ್ರೀಲಂಕದ ಮತ್ತು ಭಾರತದ ಲಕ್ಷದ್ವೀಪದಲ್ಲಿ ಕಾಣಸಿಗುತ್ತದೆ. ಚಂಡಮಾರುತ ಉಂಟಾದಾಗ ಇದು ತನ್ನ ಪಥವನ್ನು ಬದಲಾಯಿಸುತ್ತದೆ. ಈ ಮೀನು ಹೆಚ್ಚಾಗಿ ಕಂಡು ಬರುವ ಪ್ರದೇಶದಲ್ಲಿ ಉತ್ತಮ ಜಾತಿಯ ಮೀನುಗಳ ಸಂತತಿ ಕ್ಷೀಣವಾಗುತ್ತಿದೆ. ಇತರ ಮೀನುಗಳನ್ನು ತಿನ್ನುತ್ತದೆ ಅಥವಾ ಕಚ್ಚಿ ಗಾಯಗೊಳಿಸುತ್ತದೆ.ಲಕ್ಷಾಂತರ ರೂ.ವ್ಯಯಿಸಿ ಮೀನುಗಾರಿಕೆ ತೆರಳುವ ಮೀನುಗಾರರ ಆದಾಯಕ್ಕೂ ಇದರಿಂದ ದೊಡ್ಡ ಹೊಡೆತ ಬಿದ್ದಿದೆ. ಬರಿಗೈನಲ್ಲಿ ಹಿಂತಿರುಗಿ ಬರಲಾಗದೆ ಕಾರ್ಗಿಲ್ ಫಿಶ್‌ಗಳನ್ನು ಫಿಶ್‌ಮಿಲ್, ಕಟ್ಟಿಂಗ್‌ಗೆ ಮಾರಾಟ ಮಾಡಬೇಕಾಗುತ್ತಿದೆ. ಕೆ.ಜಿ.ಗೆ 12ರಿಂದ 15 ರೂ.ದರವಿದೆ. ಇದರ ಮಂಡೆ ಬಾಲ ಕತ್ತರಿಸಿ, ಹೊಟ್ಟೆಯೊಳಗಿನ ಕರಳು ತೆಗೆದು ಮಾಂಸವನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ.

 

 

 

Vishwa News 24

Recent Posts

ಕುಂದಾಪುರ: ಹೋಂಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ – vishwanews24

ಕುಂದಾಪುರ: ಹೋಂ ಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…

11 hours ago

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

15 hours ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

15 hours ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

16 hours ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

2 days ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

2 days ago