ಉಡುಪಿ : ಉಡುಪಿ ಪ್ರಸಿದ್ದ ಪ್ರವಾಸಿ ತಾಣ ಮಲ್ಪೆ ಬೀಚ್ ನಲ್ಲಿ ಕಳೆದ ಎರಡು ದಿನಗಳಿಂದ ಬೀಚಿನಲ್ಲಿ ಸಮುದ್ರಕ್ಕೆ ಇಳಿದವರಿಗೆ ತೊರಕೆ ಮೀನು ಅಥವಾ ಸ್ಟಿಂಗ್ ರೇ ಇಂಜೆಕ್ಷನ್ ರುಚಿ ತೋರಿಸಿದೆ.
ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಕಂಡು ಬರುವ ಈ ಮೀನು ಈ ಅವಧಿಗೆ ಸಂತಾನೋತ್ಪತ್ತಿಗಾಗಿ ಕಡಲ ತಡೆಗೆ ಬರುತ್ತದೆ. ಅದರಂತೆ ಈ ವರ್ಷವೂ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳು ತೀರ ಸೇರಿವೆ .ಇನ್ನು ಒಂದು ವಾರದವರೆಗೆ ಈ ಮೀನುಗಳು ಸಮುದ್ರ ಕಿನಾರೆಯಲ್ಲಿ ಇರುತ್ತವೆ ಎಂದು ಹೇಳಲಾಗಿದೆ .
ಸಂತಾನೋತ್ಪತ್ತಿಗಾಗಿ ಕಡಲ ಕಿನಾರೆಗೆ ಆಗಮಿಸುವ ಸಂದರ್ಭದಲ್ಲಿ ಈ ತೊರಕೆ ಮೀನುಗಳು ತೀರಾ ಆಕ್ರಮಣಕಾರಿಯಾಗಿದ್ದು, ಸಮುದ್ರದಲ್ಲಿ ಈಜಲು ನೀರಿಗಿಳಿಯುವ ಪ್ರವಾಸಿಗರಿಗೆ ಇದರ ಚೂಪಾದ ಬಾಲದ ಇಂಜೆಕ್ಷನ್ ಭಾಗ್ಯ ಲಭಿಸಿದೆ.
ಕಳೆದ ಶುಕ್ರವಾರದಿಂದ ಮಲ್ಪೆ ಬೀಚ್ ನಲ್ಲಿ ಈ ತೊರಕೆ ಮೀನಿನ ದಾಳಿಯ ಸುಮಾರು 12 ಪ್ರಕರಣಗಳು ವರದಿಯಾಗಿದೆ. ದಾಳಿಗೆ ಒಳಗಾದ ಪ್ರವಾಸಿಗರು ಇಲ್ಲಿರುವ ಲೈಫ್ ಗಾರ್ಡ್ ಗಳ ಬಳಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚು ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮಲ್ಪೆ ಬೀಚ್ ನಲ್ಲಿ ತೊರಕೆ ಪ್ರತಾಪ ಕಳೆದ 7 ರಿಂದ 8 ವರ್ಷಗಳಿಂದ ನಡೆಯುತ್ತಿದೆ. ಮಳೆಗಾಲ ಕಳೆಯುತ್ತಿದಂತೆ ಸಮುದ್ರ ನೀರು ತಂಪಾಗುತ್ತದೆ. ಈ ಹಿನ್ನಲೆಯಲ್ಲಿ ಸಮುದ್ರ ತೀರಕ್ಕೆ ಮೊಟ್ಟೆ ಇಡಲು ತೊರೆಕೆಗಳು ಆಗಮಿಸುತ್ತವೆ. ಈ ಹಾವಳಿ ಇನ್ನೂ 10 ದಿನ ಮುಂದುವರೆಯುವ ಸಾಧ್ಯತೆ ಇದ್ದು. ಪ್ರವಾಸಿಗರು ಮಲ್ಪೆ ಬೀಚ್ ನಲ್ಲಿ ಸಮುದ್ರಕ್ಕೆ ಇಳಿಯುವ ಮೊದಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ.
ಚೂಪಾದ ಬಾಲದಿಂದ ದಾಳಿ :ತೊರಕೆ ಮೀನು ಬಾಲದ ಮುಳ್ಳಿನಿಂದ ಚುಚ್ಚಿದಾಗ ವಿಪರೀತ ರಕ್ತ ಸ್ರಾವವಾಗುತ್ತದೆ ಹಾಗೂ ತುಂಬಾ ನೋವು ಕೂಡಾ ಉಂಟಾಗುತ್ತದೆ. ತೊರಕೆ ಮೀನಿನ ಮುಳ್ಳು ನಂಜಿನ ಗುಣವುಳ್ಳದ್ದರಿಂದ ಮೀನಿನ ಮುಳ್ಳು ಚುಚ್ಚಿದ ಬಳಿಕ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಕಣ್ಣಿಗೆ ಕಾಣಿಸುವುದಿಲ್ಲ ಎರಡು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ತೊರಕೆ ಮೀನುಗಳು ಪ್ರವಾಸಿಗರಿಗೆ ಮುಳ್ಳು ಚುಚ್ಚಿ ಗಾಯಗೊಳಿಸಿದ್ದವು. ಈ ತೊರಕೆ ಮೀನುಗಳ ಬಣ್ಣ ಹಾಗೂ ಮರಳಿನ ಬಣ್ಣ ಒಂದೇ ರೀತಿ ಗೋಚರಿಸುವ ಕಾರಣ ನೀರಿಗಿಳಿದು ಆಟವಾಡುವ ಪ್ರವಾಸಿಗರು ಕಾಲಿನಡಿಯಲ್ಲಿ ಸಂಚರಿಸುವ ತೊರಕೆ ಮೀನಿನ ಅರಿವಿಲ್ಲದೆ ಮೆಟ್ಟಿ ಮುಳ್ಳನ್ನು ಚುಚ್ಚಿಸಿಕೊಳ್ಳುತಿದ್ದಾರೆ. ತೊರಕೆ ಮೀನಿನ ಮುಳ್ಳು ಚುಚ್ಚಿದ ಬಳಿಕ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.ಈ ಹಿನ್ನೆಲೆಯಲ್ಲಿ ಕರಾವಳಿಯ ಕಡಲ ತಡಿಗೆ ಬರುವ ಪ್ರವಾಸಿಗರು ಮುಂಜಾಗ್ರತೆ ವಹಿಸಬೇಕಾಗಿದೆ.
ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ ಸಮುದ್ರಪಾಲಾದ ಘಟನೆ ಉತ್ತರ…
ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…
ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…
ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…
ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…