ಮಲ್ಪೆ: ಪ್ರವಾಸಿಗರ ಆಕರ್ಷಣೆಯಲ್ಲೊಂದಾದ ಮಲ್ಪೆಯ ಫ್ಲೋಟಿಂಗ್ ಬ್ರಿಡ್ಜ್ ನ. 6ರಿಂದ ಪ್ರವಾಸಿಗರಿಗೆ ತೆರೆಯಲಾಗಿದೆ. ಇದಕ್ಕೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆತಿದೆ.
ಸಂಜೆ ಹೊತ್ತಿಗೆ ಮಲ್ಪೆ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ 4ರಿಂದ 5 ಸಾವಿರ ಪ್ರವಾಸಿಗರು ಬೀಚ್‌ಗೆ ಬರುತ್ತಿದ್ದು, ವಾರಾಂತ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಸುಮಾರು 130 ಮೀ. ಉದ್ದ, 3 ಮೀ. ಅಗಲವಿರುವ ಈ ಫ್ಲೋಟಿಂಗ್ ಬ್ರಿಡ್ಜ್ ನಲ್ಲಿ ಏಕಕಾಲಕ್ಕೆ 200ಕ್ಕೂ ಮಿಕ್ಕಿ ಪ್ರವಾಸಿಗರು ತುದಿಯಲ್ಲಿ ನಿಂತು ಸೂರ್ಯಾಸ್ತವನ್ನು ನೋಡಬಹುದು. ಸೇತುವೆಯ ಎರಡೂ ಬದಿಯಲ್ಲಿ ಪ್ರವಾಸಿಗರ ರಕ್ಷಣೆಗೆ ರೈಲಿಂಗ್ಸ್ ಅಳವಡಿಸಲಾಗಿದೆ.
ಸಮುದ್ರ ಭಾಗದಲ್ಲಿರುವ ತುದಿಯಲ್ಲಿ ಪ್ಲಾಟ್‌ಫಾರ್ಮ್ 15 ಅಡಿ ಉದ್ದ, 8 ಅಡಿ ಅಗಲವಿದೆ. ಸಮುದ್ರಕ್ಕೆ ಬರುವ ಪ್ರವಾಸಿಗರ ರಕ್ಷಣೆಗಾಗಿ 13 ಮಂದಿ ಜೀವ ರಕ್ಷಕರು, ಲೈಪ್ ಜಾಕೆಟ್, ಲೈಫ್‌ಬಾಯ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಈ ಫ್ಲೋಟಿಂಗ್ ಬ್ರಿಡ್ಜ್ ನಲ್ಲಿ 15 ನಿಮಿಷಗಳ ಅವಧಿಗೆ ಮೋಜಿಗೆ 150 ರೂ. ಶುಲ್ಕ ನಿಗದಿಪಡಿಸಲಾಗಿದೆ. ಜೊತೆಗೆ ಫ್ಲೋಟಿಂಗ್ ಬ್ರಿಡ್ಜ್ ನಲ್ಲಿ ತೆರಳುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್ ಜಾಕೆಟ್ ತೊಡಬೇಕಾಗಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…