ಮಲ್ಪೆ: ಮ್ಯಾಂಡಸ್ ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ನೀಡಿರುವ ಮುನ್ನೆಚ್ಚರಿಕೆಯ ಅನುಸಾರ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಹೆಚ್ಚಿನ ದೋಣಿಗಳೂ ತಟದತ್ತ ಧಾವಿಸಿವೆ.
ಮೂರ್‍ನಾಲ್ಕು ದಿನದ ಹಿಂದೆ ಉತ್ತರ ದಿಕ್ಕಿಗೆ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಮೀನುಗಾರರಿಗೆ ಯಾವ ಸಮಸ್ಯೆಯೂ ಎದುರಾಗಿಲ್ಲವಾದರೂ ದಕ್ಷಿಣದತ್ತ ಸಾಗಿದ ಬೋಟುಗಳು ಗಾಳಿಯ ಒತ್ತಡದಿಂದಾಗಿ ಮೀನುಗಾರಿಕೆ ನಡೆಸಲಾಗದೆ ಸಮೀಪದ ಬಂದರು ಪ್ರವೇಶಿಸಿವೆ.
ಇದೀಗ ಉತ್ತರದ ಕಡೆಯಲ್ಲೂ ಆಳಸಮುದ್ರದಲ್ಲಿ ಚಂಡಮಾರುತ ಪ್ರಭಾವ ಕಾಣಿಸಿಕೊಂಡಿದ್ದು ಅತ್ತ ತೆರಳಿದ್ದ ಆಳಸಮುದ್ರ ಬೋಟುಗಳ ಪೈಕಿ ಕೆಲವು ಸಮುದ್ರ ಮಧ್ಯೆ ಲಂಗರು ಹಾಕಿ ನಿಂತರೆ, ಇನ್ನು ಕೆಲವು ಸಮೀಪದ ಬಂದರನ್ನು ಆಶ್ರಯಿಸಿವೆ.
ಆಳಸಮುದ್ರದಲ್ಲಿರುವ ಬೋಟುಗಳು ಗಾಳಿಯ ಒತ್ತಡ ಕಡಿಮೆ ಆದಾಗ ಮೀನುಗಾರಿಕೆ ಮಾಡುವ ಸಾಧ್ಯತೆ ಇದೆ. ಬಂದರು ಸೇರಿರುವ ದೋಣಿಗಳು ಹವಾಮಾನ ಇಲಾಖೆ ಸೂಚನೆಯ ಬಳಿಕ ಹೊರಡಲಿವೆ ಎಂದು ಮಲ್ಪೆ ಮೀನುಗಾರರ ಸಂಘದ ಕಾರ್ಯದರ್ಶಿ ರತ್ನಾಕರ ಸಾಲ್ಯಾನ್ ತಿಳಿಸಿದ್ದಾರೆ.
ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…
ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ…
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…
ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…
ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…
ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ…