Featured

ಮಲ್ಪೆ: ಸಂವಿಧಾನದ ಬುಡಕ್ಕೆ ಕೈಹಾಕಿದರೆ ನಿಮ್ಮನ್ನು ಸುಟ್ಟು ಬೂದಿ ಮಾಡುವ ದಲಿತರ ದಂಡು ಸಿದ್ದವಿದೆ : ಜಯನ್ ಮಲ್ಪೆ ಎಚ್ಚರಿಕೆ – vishwanews24

ಮಲ್ಪೆ: ಸಂವಿಧಾನದ ಬುಡಕ್ಕೆ ಕೈಹಾಕಿದರೆ ನಿಮ್ಮನ್ನು ಸುಟ್ಟು ಬೂದಿ ಮಾಡುವ ದಲಿತರ ದಂಡು ಸಿದ್ದವಿದೆ : ಜಯನ್ ಮಲ್ಪೆಎಚ್ಚರಿಕೆ

ಮಲ್ಪೆ, : ಧಾರ್ಮಿಕತೆಯೆಂದು ಜಾತಿಯತೆ ಬೋಧಿಸುವ ಧರ್ಮ ದಲಿತರನ್ನು ಕ್ರೂರವಾಗಿ ಹಿಂಸೆ ಮಾಡಿದೆ. ಸಹಾನುಭೂತಿ, ಸಮಾನತೆ ಮತ್ತು ಸ್ವಾತಂತ್ರ್ಯ ಈ ಮೂರು ಅಂಶಗಳಿಲ್ಲದ ಧರ್ಮದ ಹೆಸರಿನಲ್ಲಿ ಸಂವಿಧಾನದ ಬುಡಕ್ಕೆ ಕೈಹಾಕಿದರೆ ನಿಮ್ಮನ್ನು ಸುಟ್ಟು ಬೂದಿ ಮಾಡುವ ದಲಿತರ ದಂಡು ಸಿದ್ದವಿದೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆಎಚ್ಚರಿಕೆ ನೀಡಿದ್ದಾರೆ.

ಅಂಬೇಡ್ಕರ್ ಯುವಸೇನೆಯ ಜಿಲ್ಲಾ ಘಟಕದ ವತಿಯಿಂದ ಮಲ್ಪೆ ಗಾಂಧಿ ಶತಾಬ್ಧಿ ಶಾಲಾ ಮೈದಾನದಲ್ಲಿ ಶುಕ್ರವಾರ ಮಕ್ಕಳ ಜೊತೆ ಆಯೋಜಿಸಲಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ವರ 68ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಧರ್ಮ ಇರುವುದು ಮನುಷ್ಯನಿಗಾಗಿ, ಮನುಷ್ಯನಿರುವುದು ಧರ್ಮಕ್ಕಲ್ಲ. ನಿಮ್ಮ ಧರ್ಮದಲ್ಲಿರುವ ಅಸಮಾನತೆ ಜಗತ್ತಿನ ಯಾವ ಧರ್ಮದಲ್ಲೂ ಸಿಗುವುದಿಲ್ಲ ಎಂದ ಜಯನ್ ಮಲ್ಪೆ ಇಂದಿನ ನಿಮ್ಮ ಧರ್ಮಕ್ಕೆ ದೇವರು, ನೀತಿ ಎರಡೂ ಇಲ್ಲ. ಇಂತಹ ಸ್ಥಿತಿ ಕೇವಲ ಮಾನವನ ಮನಸ್ಸಿನ ಪತನಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.

ಹಿರಿಯ ದಲಿತ ಮುಖಂಡ ಕೆ.ಕರುಣಾಕರ ಮಾಸ್ತರ್ ಮಾತನಾಡಿ, ಸಂವಿಧಾನ ಉಳಿದರೆ ಮಾತ್ರ ನಮ್ಮ ಬದುಕು. ಮಕ್ಕಳು ಅಂಬೇಡ್ಕರ್ ಚಿಂತನೆ ಯೊಂದಿಗೆ ಸಾಮಾಜಿಕ ಹೋರಾಟದಿಂದ ಜಾಗೃತಿ ಮಾಡಬೇಕು ಎಂದು ತಿಳಿಸಿದರು.

ದಲಿತ ಹಕ್ಕುಗಳ ಹೋರಾಟ ಸಮಿತಿಯ ಸಜೀವ ಬಳ್ಕೂರು ಮಾತನಾಡಿ, ಅಂಬೇಡ್ಕರರ ಮೀಸಲಾತಿಯ ಲಾಭ ಪಡೆದ ಬಹುತೇಕ ವಿದ್ಯಾವಂತರು, ದಲಿತ ನೌಕರರು, ಅಧಿಕಾರಿಗಳ, ರಾಜಕಾರಣಿಗಳ ದೊಡ್ಡ ವರ್ಗವಿದ್ದರೂ ದಲಿತ ಸಮಾಜ ವಿಘಟನೆಗೊಂಡಿರುವುದು ಅಂಬೇಡ್ಕರ್‌ಗೆ ಎಸಗಿದ ದ್ರೋಹ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಬೇಡ್ಕರ್ ಯುವಸೇನೆಯ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ, ಸತಿ ಪದ್ಧತಿ, ದೇವದಾಸಿ ಪದ್ಧತಿ, ವಿಧವಾ ಪದ್ಧತಿ, ಶಿಶುಹತ್ಯೆ ಗಳಂತಹ ಘೋರ ಕೃತ್ಯಗಳು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಕಟ್ಟು ಪಾಡಿನ ವಿರುದ್ಧ ಮತ್ತು ಮಹಿಳೆಯರಿಗೆ ಶಿಕ್ಷಣ ಹಾಗೂ ಆಸ್ತಿಯ ಹಕ್ಕು ನೀಡಿದ ಅಂಬೇಡ್ಕರ್ ಮಹಿಳಾ ವಿಮೋಚನೆಗಾಗಿ ಶ್ರಮಿಸಿದ ನಾಯಕ ಎಂದು ತಿಳಿಸಿದರು.

ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿದರು. ದಲಿತ ಮುಖಂಡರಾದ ಸಂತೋಷ್ ಕಪ್ಪೆಟ್ಟು, ರವಿ ಲಕ್ಷ್ಮೀನಗರ, ಸುಮಿತ್ ನೆರ್ಗಿ, ದಯಾಕರ್ ಮಲ್ಪೆ, ಸಾಧು ಚಿಟ್ಪಾಡಿ, ವಿನಯ ಕೊಡಂಕೂರು, ಜಯ ಸಾಲ್ಯಾನ್, ಪ್ರಸಾದ್ ಮಲ್ಪೆ, ಅನಂತ ಕುಂದರ್ ನೆರ್ಗಿ, ಈಶ್ವರ್ ಗದಗ, ಗುಣವಂತ ತೊಟ್ಟಂ, ಬಿ.ಎನ್.ಪ್ರಶಾಂತ್, ಸುಶೀಲ್ ಕುಮಾರ್, ದೀಪಕ್ ಕೊಡವೂರು, ಮಿಥುನ್ ಲಕ್ಷ್ಮೀನಗರ, ಅರುಣ್ ಸಾಲ್ಯಾನ್, ಮೋಹನ್ ಗುಜ್ಜರಬೆಟ್ಟು, ಶಶಿಕಲಾ ತೊಟ್ಟಂ, ಸಂಕಿ ತೊಟ್ಟಂ, ಶಕಿ ಕಪ್ಪೆಟ್ಟು, ಕಿರಣ, ಸತೀಶ್ ಬೈಲಕೆರೆ, ಹರೀಶ್ ತೊಟ್ಟಂ, ಶಿಕ್ಷಕ ರಕ್ಷಕ ಸಂಘದ ರವಿರಾಜ್, ಅಶೋಕ್ ಕೋಟ್ಯಾನ್, ಮುಖೋಪದ್ಯಾಯರಾದ ಪ್ರೇಮಾನಂದ, ವೇದಾವತಿ, ಪೂರ್ಣಿಮ ಮೊದಲಾದವರು ಉಪಸ್ಥಿತರಿದ್ದರು.

ವಾದಿರಾಜ್ ಪಾಳೆಕಟ್ಟೆ ಸ್ವಾಗತಿಸಿದರು. ಸತೀಶ್ ಕಪ್ಪೆಟ್ಟು ವಂದಿಸಿದರು.

Vishwa News 24

Recent Posts

ಬೆಂಗಳೂರು: ಯಾವುದೇ ಕಾರಣಕ್ಕೂ ಫುಟ್‌ಪಾತ್ ತೆರವು ಕಾರ್ಯಾಚರಣೆ ನಿಲ್ಲಲ್ಲ : ಸಚಿವ ಕೃಷ್ಣ ಬೈರೇಗೌಡ ಖಡಕ್‌ ಸೂಚನೆ – vishwanews24

ಬೆಂಗಳೂರು: ಫುಟ್‌ಪಾತ್ ತೆರವು ಕಾರ್ಯಾಚರಣೆ ನಿಲ್ಲಲ್ಲ : ಸಚಿವ ಕೃಷ್ಣ ಬೈರೇಗೌಡ ಖಡಕ್‌ ಸೂಚನೆ ಬೆಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಬೆಂಗಳೂರು…

42 minutes ago

ಬೆಳಗಾವಿ: ಅಣಬೆ ಸೇವಿಸಿ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ – vishwanews24

ಅಣಬೆ ಬೆಳೆದಿದ್ದ ಹೊಲಕ್ಕೆ ಅದರ ಮಾಲೀಕರಿಂದ ಕ್ರಿಮಿನಾಶಕ ಔಷಧಿ ಸಿಂಪಡಿಕೆ.. ಕೀಟನಾಶಕದ ಅಂಶ ಅಣಬೆಯೊಳಗೆ ಸೇರಿ ವಿಷವಾಗಿ ಮಾರ್ಪಟ್ಟು ಇಡೀ…

1 hour ago

ಉಡುಪಿ: ವಂಚನೆ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣ ; ಆರೋಪಿ ಝೀನತ್ ವಿರುದ್ಧ ಮತ್ತೆರಡು ಹೊಸ ಪ್ರಕರಣ ದಾಖಲು – vishwanews24

ಉಡುಪಿ: ವಂಚನೆ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣ ; ಆರೋಪಿ ಝೀನತ್ ವಿರುದ್ಧ ಮತ್ತೆರಡು ಹೊಸ ಪ್ರಕರಣ ದಾಖಲು ಉಡುಪಿ:ಬಹುಕೋಟಿ ವಂಚನೆ…

2 hours ago

ಆಗುಂಬೆ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ – ಮಹತ್ವದ ತೀರ್ಪು ನೀಡಿದ ಶಿವಮೊಗ್ಗ ನ್ಯಾಯಾಲಯ – vishwanews24

ಆಗುಂಬೆ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ - ಮಹತ್ವದ ತೀರ್ಪು ನೀಡಿದ ಶಿವಮೊಗ್ಗ ನ್ಯಾಯಾಲಯ ತೀರ್ಥಹಳ್ಳಿ: ಲೈಂಗಿಕ ದೌರ್ಜನ್ಯಕ್ಕೆ…

3 hours ago

ಅಯೋಧ್ಯೆ ಪ್ರಕರಣದ ಹಿನ್ನೆಲೆ : ರಾಜ್ಯದ ಎಲ್ಲಾ ಮುಜುರಾಯಿ ದೇಗುಲಗಳಲ್ಲಿ ಕಡ್ಡಾಯ ಸಿಸಿಟಿವಿ ಅಳವಡಿಕೆಗೆ ಸಿಎಂ ಆದೇಶ – vishwanews24

ರಾಮ ಮಂದಿರದಲ್ಲಿ ನಡೆದ ಘಟನೆ ಅವಮಾನಕರ; ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ :ಸಿಎಂ  ಡಿ.ಕೆ. ಶಿ ಬೆಳಗಾವಿ: ಮುಜರಾಯಿ…

3 hours ago

ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 10 ಲಕ್ಷ ರೂ.ವಂಚನೆ ಪ್ರಕರಣ: ಮಹಿಳೆ ಬಂಧನ – vishwanews24

ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 10 ಲಕ್ಷ ರೂ.ವಂಚನೆ ಪ್ರಕರಣ: ಮುಂಬಯಲ್ಲಿ ಉಡುಪಿ ಮೂಲದ ಮಹಿಳೆ ಬಂಧನ ಮುಂಬೈ,: ಷೇರು…

3 hours ago