Featured

ಮಹಾ ಮಳೆಗೆ ಕೊಚ್ಚಿ ಹೋಗುತ್ತಿದೆ ಕೊಡಗು ; ಪ್ರವಾಹ, ಭೂಕುಸಿತದಿಂದ ಕೊಡವರ ಜನ ಜೀವನ ಅಸ್ತವ್ಯಸ್ತ

ಕೊಡಗು, : ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿದ್ದ ರೌದ್ರ ಮಳೆ ಮತ್ತೆ ತನ್ನ ಅಬ್ಬರ ಮುಂದುವರಿಸಿದೆ. ಪರಿಣಾಮ, ಜಿಲ್ಲೆಗೆ ಮುತ್ತಿಗೆ ಹಾಕಿದ ಪ್ರವಾಹ ಇನ್ನೂ ನಿಂತಿಲ್ಲ.

ಮಳೆಯ ಆರ್ಭಟದಿಂದಾಗಿ ಪ್ರವಾಹ ಉಲ್ಬಣಿಸಿದ್ದು, ಜಿಲ್ಲೆಯನ್ನು ಸಂರ್ಪಕಿಸುವ ಎಲ್ಲ ರಸ್ತೆಗಳೂ ಬಂದ್ ಆಗಿವೆ. ಮಳೆ ತಂದಿಟ್ಟ ಅವಾಂತರಕ್ಕೆ ಕೊಡಗಿನಲ್ಲಿ ಈವರೆಗೆ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮಾತ್ರವಲ್ಲ ಹಲವರು ಕಣ್ಮರೆಯಾಗಿದ್ದಾರೆ. ನಾಪತ್ತೆಯಾದವರ ದೇಹ ಇನ್ನೂ ಸಿಕ್ಕಿಲ್ಲ. ಮಾಹಿತಿಯೂ ಲಭ್ಯವಾಗಿಲ್ಲ.

ವರುಣನ ರುದ್ರ ನರ್ತನಕ್ಕೆ ಹಲವು ಮನೆಗಳು ಕುಸಿದು ಬಿದ್ದಿವೆ. ವಿದ್ಯುತ್​ ಕಂಬಗಳು ಕುಸಿದು ಬಿದ್ದಿದೆ. ಪರಿಣಾಮ, ಜಿಲ್ಲೆಯಲ್ಲಿ ವಿದ್ಯುತ್​ ಕಡಿತವಾಗಿದೆ. ಹೀಗಾಗಿ ಕೊಡಗಿನಲ್ಲಿ ಭಾಗಶಃ ಕತ್ತಲೆ ಕವಿದಿದೆ. ಮಾತ್ರವಲ್ಲ, ಮೊಬೈಲ್​ ರೀಚಾರ್ಜ್​ ಕೂಡ ಆಗದೇ ಸಂಪರ್ಕ ಕಡಿತವಾಗುತ್ತಿದೆ.

ತೀವ್ರ ತೇವಾಂಶದಿಂದಾಗಿ ಗುಡ್ಡಗಳು ಕುಸಿದು ಮನೆಗಳು ನೆಲಕ್ಕುರುಳಿದರೆ, ಹಳ್ಳಿ, ಪಟ್ಟಣಗಳನ್ನು ಸಂರ್ಪಸುವ ರಸ್ತೆಗಳೂ ಸಂಪರ್ಕ ಕಡಿದುಕೊಂಡು 500ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಸಿದ ಒಂದು ಗುಡ್ಡವನ್ನು ತೆರವು ಮಾಡುತ್ತಿರುವಾಗಲೇ ಮತ್ತೆಲ್ಲೋ ಮತ್ತೊಂದು ಗುಡ್ಡ ಜಾರಿಕೊಂಡು ಬೀಳುತ್ತಿದೆ. ಭಾಗಮಂಡಲದಲ್ಲಿ ಕಾವೇರಿ ಪ್ರವಾಹ ಪರಿಸ್ಥಿತಿ 4 ದಿನಗಳಿಂದ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಮಡಿಕೇರಿ- ವಿರಾಜಪೇಟೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ರಾಜ್ಯ ಹೆದ್ದಾರಿ 89ರಲ್ಲಿನ ಪೊಕಳತೋಡಿನಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಸೋಮವಾರಪೇಟೆ ತಾಲೂಕಿನ ಇಗ್ಗೋಡ್ಲು ಗ್ರಾಮದಲ್ಲಿ ಪಾರೇಕರೆ ಗುಡ್ಡ ಕುಸಿದಿದ್ದು, ಸ್ಥಳೀಯರು ದೇವಾಲಯದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಮಡಿಕೇರಿ ತಾಲೂಕಿನ ಮೊಣ್ಣಂಗೇರಿ ಗ್ರಾಮದಲ್ಲಿ ಗುಡ್ಡ ಕುಸಿತದಿಂದ 30 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾವೇರಿ ಪ್ರವಾಹದಿಂದಾಗಿ ಪಿರಿಯಾಪಟ್ಟಣ ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿವೆ. ದಕ್ಷಿಣ ಕಾಶಿ ನಂಜನಗೂಡು ಮತ್ತೊಮ್ಮೆ ಕಬಿನಿ ಪ್ರವಾಹಕ್ಕೆ ಸಿಲುಕಿ ಶ್ರೀ ಕಂಠೇಶ್ವರಸ್ವಾಮಿ ದೇಗುಲದ ಸಮೀಪಕ್ಕೆ ನೀರು ಬಂದಿದೆ. ಮೈಸೂರು-ನಂಜನಗೂಡು ಹೆದ್ದಾರಿ ಮತ್ತೊಮ್ಮೆ ಕಡಿತಗೊಂಡಿದೆ. ಹಾಸನ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ 150ಕ್ಕೂ ಹೆಚ್ಚು ಮನೆಗಳು, ಐತಿಹಾಸಿಕ ದೇಗುಲಗಳು ಮುಳುಗಡೆಯಾಗಿ ಹಲವು ಮನೆಗಳು ನೆಲಸಮಗೊಂಡಿವೆ.

ಪ್ರಸಕ್ತ ಮುಂಗಾರಿನಲ್ಲಿ ಕೊಡಗು ಜಿಲ್ಲೆಯಲ್ಲೇ ಅತ್ಯಧಿಕ ಮಳೆಯಾಗಿದೆ. ಜೂ.1ರಿಂದ ಆ.16ರವರೆಗೆ ಜಿಲ್ಲೆಯಲ್ಲಿ 2,848 ಮಿ.ಮೀ. ಮಳೆಯಾಗಿದ್ದು, ಶೇ.62 ಅಧಿಕ ಮಳೆಯಾಗಿದೆ. ಈ ನಡುವೆ ಕೊಡಗು ಜಿಲ್ಲೆಯಲ್ಲಿ 17 ನೆರೆ ಪರಿಹಾರ ಕೇಂದ್ರ ಸ್ಥಾಪಿಸಿ, 573 ಜನರಿಗೆ ರಕ್ಷಣೆ ನೀಡಲಾಗುತ್ತಿದೆ.

 

 

 

 

 

 

 

 

Vishwa News 24

Recent Posts

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ – vishwanews24

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…

19 hours ago

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ – vishwanews24

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…

19 hours ago

ದೇಣಿಗೆ ಕಳ್ಳತನ ವಿವಾದ: ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ – vishwanews24

ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…

19 hours ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ – vishwanews24

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ  ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…

19 hours ago

ರಾಮ ಮಂದಿರ ದೇಣಿಗೆ ಹಣದಲ್ಲಿ ಅಕ್ರಮ ಎಸಗುವವರನ್ನು ಬಿಡುವುದಿಲ್ಲ: ಯೋಗಿ ಆದಿತ್ಯನಾಥ್‌ ಎಚ್ಚರಿಕೆ – vishwanews24

ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್‌ ಲಕ್ನೋ: ರಾಮಭಕ್ತರ…

20 hours ago

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ – vishwanews24

ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…

21 hours ago