ಉಡುಪಿ

ಮಳೆರಾಯನ‌ ರೌದ್ರನರ್ತನಕ್ಕೆ ಪಣಿಯೂರು ನಾಂಜಾರು ಧರ್ಮ ಜಾರಾಂದಯ ದೈವಸ್ಥಾನಕ್ಕೆ ಮರ ಬಿದ್ದು 40 ಲಕ್ಷ ನಷ್ಟ.

ಕಾಪು : ಪಣಿಯೂರು ನಾಂಜಾರು ಧರ್ಮ ಜಾರಂದಾಯ ದೈವಸ್ಥಾನದಲ್ಲಿ ಮಂಗಳವಾರ ನಡೆದ ವಾರ್ಷಿಕ ನೇಮೋತ್ಸವದ ಸಂದರ್ಭ ಸುರಿದ ಭಾರೀ ಗಾಳಿ – ಮಳೆಗೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಶಿಲಾಮಯ ದೈವಸ್ಥಾನಕ್ಕೆ 40 ಲಕ್ಷ ರೂ. ಗೂ ಮಿಕ್ಕಿದ ಹಾನಿಯುಂಟಾಗಿದೆ. ಘಟನೆಯ ಸಂದರ್ಭ ಉಪಸ್ಥಿತರಿದ್ದ ಸಾವಿರಾರು ಮಂದಿ ಪವಾಢ ಸಧೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೈವಸ್ಥಾನದಲ್ಲಿ ಮಂಗಳವಾರ ರಾತ್ರಿ ವಾರ್ಷಿಕ ನೇಮೋತ್ಸವ ನಡೆಯುತ್ತಿದ್ದ ಸಂದರ್ಭ ಗುಡುಗು, ಮಿಂಚು ಸಹಿತ ಗಾಳಿ, ಮಳೆ ಸುರಿಯಲಾರಂಭಿಸಿತ್ತು. ಭಾರೀ ಮಳೆಯ ಕಾರಣದಿಂದಾಗಿ ದೈವದ ನೇಮವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿದ್ದು, ಮತ್ತೆ ಮುಂದುವರಿಸಲು ಯೋಚಿಸಲಾಗಿತ್ತು.
ದೈವಸ್ಥಾನದ ಆವರಣದಲ್ಲಿ ಬೆಳೆದು ನಿಂತಿದ್ದ ಸುಮಾರು 600 ವರ್ಷಗಳಿಗೂ ಹಿಂದಿನ ಬೃಹತ್ ಹಾಲೆ ಮರವು ಬುಡ ಸಮೇತವಾಗಿ ಉರುಳಿ ಬಿದ್ದಿದೆ. ದೈವಸ್ಥಾನದ ಮುಂಭಾಗದಲ್ಲಿದ್ದ ಮರ ಹಿಂಭಾಗದ ತೆಂಗಿನ ಮರಕ್ಕೆ ಬಿದ್ದು, ಆನಂತರ ದೈವಸ್ಥಾನದ ಮೇಲೆ ಬಿದ್ದು, ಬಳಿಕ ನೆಲಕ್ಕೆ ಬಿದ್ದಿತ್ತು.
ಜಾರಂದಾಯ ದೈವದ ನೇಮ ವೀಕ್ಷಿಸಲು ಬಂದಿದ್ದ ಹೆಜಮಾಡಿ ನಿವಾಸಿ ವಿಶ್ವನಾಥ್ (46) ಮರದಡಿಯಲ್ಲಿ ಸಿಲುಕಿ ಗಾಯಗೊಂಡಿದ್ದಾರೆ. ಭಾರೀ ಮಳೆ ಮತ್ತು ಗುಡುಗಿನ ನಡುವೆಯೇ ಸುಮಾರು ಒಂದೂವರೆ ಗಂಟೆಗಳ ಕಾಲ ಮರದಡಿಯಲ್ಲಿ ಸಿಲುಕಿ ಜೀವ ಭಯದಿಂದ ಒದ್ದಾಡುತ್ತಿದ್ದರು. ಸತತ ಒಂದೂವರೆ ಗಂಟೆಯ ಸತತ ಪ್ರಯತ್ನದಿಂದಾಗಿ ಎತ್ತಿ ರಕ್ಷಿಸಿ, ಅಂಬುಲೆನ್ಸ್ ಮೂಲಕ ಉಡುಪಿಗೆ ಕರೆದೊಯ್ದು, ನಂತರ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ರಕ್ಷಣೆ ಪಡೆಯಲು ಓಡಿದವರ ಪೈಕಿ ಮಕ್ಕಳು ಮತ್ತು ಹಿರಿಯರು ಪಟ್ಟದ ಕುದುರೆ ಕೊಠಡಿ, ನೇಮ ಕಟ್ಟಿದವರು ಬಂಡಿ ಕುದುರೆ ಕೊಠಡಿ ಹಾಗೂ ದೈವದ ಪಾತ್ರಿಗಳು ಮತ್ತು ಚಾಕರಿ ವರ್ಗದವರು ನೈವಬೇದ್ಯ ಕೋಣೆಯಲ್ಲಿ ಆಶ್ರಯ ಪಡೆದಿದ್ದರು. ಬಂಡಿ ಕುದುರೆ ಕೊಠಡಿಗೆ ತಾಗಿಕೊಂಡೇ ಇರುವ ಪಟ್ಟದ ಕುದುರೆ ಮತ್ತು ನೈವೇದ್ಯ ಕೋಣೆಯನ್ನು ಸವರಿಕೊಂಡು ಬೃಹತ್ ಮರ ಉರುಳಿ ಬಿದ್ದಿತ್ತು. ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನವು ಅತ್ಯಂತ ಕಾರಣಿಕ ಕ್ಷೇತ್ರವಾಗಿದ್ದು, ಇಲ್ಲಿ 2016ರಲ್ಲಿ ಸರ್ವರ ಸಹಕಾರದೊಂದಿಗೆ ಸಮಗ್ರ ಜೀರ್ಣೋದ್ಧಾರ ಕಾರ್ಯವನ್ನು ನಡೆಸಲಾಗಿತ್ತು. ಜೀರ್ಣೋದ್ಧಾರದ ಸಂದರ್ಭ ಹಾಲೆ ಮರವನ್ನು ಕಡಿಯುವ ಪ್ರಯತ್ನ ಮಾಡಲಾಗಿತ್ತಾದರೂ ದೈವದ ಅಭಯ ಮತ್ತು ಭಕ್ತರ ಅಪೇಕ್ಷೆಯಂತೆ ಮರವನ್ನು ಹಾಗೆಯೇ ಉಳಿಸಲಾಗಿತ್ತು.
ನಾಂಜಾರು ಜಾರಂದಾಯ ದೈವಸ್ಥಾನಕ್ಕೆ ಮರ ಬಿದ್ದು ಸುಮಾರು 30 ರಿಂದ 40 ಲಕ್ಷ ರೂ. ನಷ್ಟ ಉಂಟಾಗಿದ್ದು, ಶಿಲಾಮಯ ದೈವಾಲಯ ಮತ್ತು ಹಿತ್ತಾಳೆ ಮಾಡಿಗೂ ಸಂಪೂರ್ಣ ಹಾನಿಯುಂಟಾಗಿದೆ.

 

Vishwa News 24

Recent Posts

ಕುಂದಾಪುರ: ಹೋಂಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ – vishwanews24

ಕುಂದಾಪುರ: ಹೋಂ ಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…

2 days ago

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

2 days ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

2 days ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

2 days ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

3 days ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

3 days ago