Featured

ಮಳೆಹಾನಿ ಸಮೀಕ್ಷೆ ಹಾಗೂ ಪರಿಹಾರ ಕಾರ್ಯ ಭರದಿಂದ ಸಾಗಿದೆ : ಮುಖ್ಯಮಂತ್ರಿ – Vishwanews24

ಮಳೆಹಾನಿ ಸಮೀಕ್ಷೆ ಹಾಗೂ ಪರಿಹಾರ ಕಾರ್ಯ ಭರದಿಂದ ಸಾಗಿದೆ : ಮುಖ್ಯಮಂತ್ರಿ

ಮೈಸೂರು: ‘ಮಳೆಯಿಂದ ಪ್ರಾಣಹಾನಿ, ಭೂ ಕುಸಿತ , ಬೆಳೆಹಾನಿ ಉಂಟಾಗಿದ್ದು, ಸಮೀಕ್ಷೆ ಹಾಗೂ ಪರಿಹಾರ ಕಾರ್ಯ ಭರದಿಂದ ಸಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೊಡಗು, ಕರಾವಳಿ ಜಿಲ್ಲೆಗಳ ಪ್ರವಾಸ ಕೈಗೊಳ್ಳಲು ಮಂಗಳವಾರ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ₹ 739 ಕೋಟಿ ಬಿಡುಗಡೆಯಾಗಿದೆ. ಪರಿಹಾರ ಕ್ರಮಕ್ಕೆ ಹಣದ ಕೊರತೆಯಿಲ್ಲ. ನದಿ ಪಾತ್ರದಲ್ಲಿ ಸಂಭವಿಸುವ ಪ್ರವಾಹ ಹಾನಿ ತಡೆಗೆ ಶಾಶ್ವತ ಪರಿಹಾರಕ್ಕಾಗಿ‌ ಹಾಗೂ ಮನೆಗಳನ್ನು ಸ್ಥಳಾಂತರಿಸಲು ತಜ್ಞರ ಅಭಿಪ್ರಾಯ ಕೇಳಲಾಗಿದೆ’ ಎಂದರು.

‘ಈ ಬಾರಿಯ ಮಳೆಗಾಲದಲ್ಲಿ ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭೂ ಕುಸಿತವುಂಟಾಗಿದೆ. ಕೊಡಗಿನಲ್ಲಿ ಲಘು ಭೂಕಂಪ,‌ ಕರಾವಳಿಯಲ್ಲಿ ಕಡಲ ಕೊರೆತ ಹಾಗೂ ಉತ್ತರ ಕರ್ನಾಟಕದ ನದಿ ಪಾತ್ರಗಳಲ್ಲಿ ಪ್ರವಾಹ ಹಾನಿಯಾಗಿದೆ‌. ಭೂ ಕುಸಿತ ಸಂಭವಿಸುತ್ತಿರುವ ಸೂಕ್ಷ್ಮ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಲ್ಲಿ ನೆಲೆಸುವಂತೆ ಮಾಡಲು ಮನವೊಲಿಸಲಾಗುವುದು’ ಎಂದು ತಿಳಿಸಿದರು.

‘ಉಡುಪಿ, ಮಂಗಳೂರು, ಕೊಡಗು ಹಾಗೂ ಉತ್ತರ ಕನ್ನಡ ಸೇರಿದಂತೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇಡೀ ಸರ್ಕಾರ ಮಳೆಹಾನಿ, ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ.‌ ವಿಪತ್ತು ಸಂಭವಿಸುತ್ತಿದ್ದರೂ ಸರ್ಕಾರ ಸಕ್ರಿಯವಾಗಿಲ್ಲವೆಂಬುದು ಸುಳ್ಳು’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಿಗಮ ಮಂಡಳಿಯಲ್ಲಿ ಒಂದೂವರೆ ವರ್ಷ ಸೇವೆ ಸಲ್ಲಿಸಿದವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಲು ಈಗಾಗಲೇ ತೀರ್ಮಾನ ಮಾಡಲಾಗಿದ್ದು, ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ’ ಎಂದೂ ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಇದ್ದರು.

Vishwa News 24

Recent Posts

ತಾಂತ್ರಿಕ ದೋಷ: ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡಿಂಗ್ – vishwanews24

ತಪ್ಪಿದ ಭಾರಿ ದುರಂತ: 4 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಟ ; ಹುಬ್ಬಳ್ಳಿ ತಲುಪಬೇಕಿದ್ದ ವಿಮಾನ ಬೆಂಗಳೂರಲ್ಲಿ ಲ್ಯಾಂಡ್ ಹುಬ್ಬಳ್ಳಿ:…

5 hours ago

ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ಪ್ರಾರಂಭ ಮಾಡ್ತೇನೆ: ಯತ್ನಾಳ್ – vishwanews24

ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ಪ್ರಾರಂಭ ಮಾಡ್ತೇನೆ: ಯತ್ನಾಳ್ ವಿಜಯಪುರ: ಮುಂದಿನ ತಿಂಗಳು ಒಳ್ಳೆಯ ಮುಹೂರ್ತ…

5 hours ago

ನಾವು ಮಹಿಳಾ ಮೀಸಲಾತಿ ಪರ ಇದ್ದೇವೆ; ಆದರೆ ಮೋದಿ ಅವರ ಹೇಳಿಕೆಯನ್ನ ವಿರೋಧಿಸುತ್ತೇವೆ : ಖರ್ಗೆ – vishwanews24

ನಾವು ಮಹಿಳಾ ಮೀಸಲಾತಿ ಪರ ಇದ್ದೇವೆ; ಆದರೆ ಮೋದಿ ಅವರ ಹೇಳಿಕೆಯನ್ನ ವಿರೋಧಿಸುತ್ತೇವೆ : ಖರ್ಗೆ ಬೆಂಗಳೂರು: ನಾವು ಮಹಿಳಾ…

6 hours ago

ಉಡುಪಿ: ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಕೆ. ಶಾಂತಾರಾಮ ಸೂಡ ಆಯ್ಕೆ – vishwanews24

ಉಡುಪಿ: ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಕೆ. ಶಾಂತಾರಾಮ ಸೂಡ ಆಯ್ಕೆ ಉಡುಪಿ: ಮಹತೋಭಾರ ಪೆರ್ಡೂರು ಅನಂತಪದ್ಮನಾಭ…

6 hours ago

ಎರ್ಮಾಳು: ಗೂಡ್ಸ್ ವಾಹನಕ್ಕೆ ರಾಂಗ್ ಸೈಡ್‌ನಿಂದ ಬಂದ ಸ್ಕೂಟಿ ಢಿಕ್ಕಿ ; ಸವಾರ ಸಾವು – vishwanews24

ಎರ್ಮಾಳು: ಗೂಡ್ಸ್ ವಾಹನಕ್ಕೆ ರಾಂಗ್ ಸೈಡ್‌ನಿಂದ ಬಂದ ಸ್ಕೂಟಿ ಢಿಕ್ಕಿ ; ಸವಾರ ಸಾವು ಪಡುಬಿದ್ರಿ : ರಾಂಗ್ ಸೈಡ್‌ನಿಂದ…

7 hours ago

ಪುತ್ತೂರು: ಡಿವೈಡರ್‌ ಗೆ ಬೈಕ್‌ ಡಿಕ್ಕಿ ;  ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು: ಡಿವೈಡರ್‌ ಗೆ ಬೈಕ್‌ ಡಿಕ್ಕಿ ;  ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ನಗರದ ಪಡೀಲ್ ಬಳಿ ಎರಡು ಬೈಕ್‌ಗಳ…

2 days ago