Featured

ಮಸೀದಿಗಳಲ್ಲಿ ಪ್ರಾರ್ಥಿಸಲು ಮಹಿಳೆಯರಿಗೆ ಅವಕಾಶ : ಮುಸ್ಲಿಂ ಮಂಡಳಿ – Vishwanews24

ಮಸೀದಿಗಳಲ್ಲಿ ಪ್ರಾರ್ಥಿಸಲು ಮಹಿಳೆಯರಿಗೆ ಅವಕಾಶ ..

ಆದರೆ ಮಸೀದಿಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಇರುವಂತಿಲ್ಲ

ಹೊಸದಿಲ್ಲಿ: ಇಸ್ಲಾಂನಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಲಿಂಗ ತಾರತಮ್ಯ ಇಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಮುಸ್ಲಿಂ ಮಹಿಳೆಯರು ಕೂಡ ಮಸೀದಿಗಳಿಗೆ ಪ್ರವೇಶಿಸಿ ನಮಾಜ್ ಸಲ್ಲಿಸಲು ಅವಕಾಶವಿದೆ. ಆದರೆ ಮಸೀದಿಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಇರುವಂತಿಲ್ಲ ಎಂದು ಅದು ಹೇಳಿದೆ.

ಮಸೀದಿಗಳಲ್ಲಿ ಸಹ- ಪ್ರಾರ್ಥನೆಗೆ ಅವಕಾಶ ನೀಡುವುದು ಇಸ್ಲಾಮಿಕ್ ಗ್ರಂಥಗಳು ಮತ್ತು ತತ್ವಗಳಲ್ಲಿ ಅನುಸರಣೆಯ ನಿಯಮಗಳಲ್ಲಿ ಇಲ್ಲ ಎಂದು ಮಂಡಳಿ ಪ್ರತಿಪಾದಿಸಿದೆ.

“ಧಾರ್ಮಿಕ ಗ್ರಂಥಗಳು, ಬೋಧನೆಗಳು ಮತ್ತು ಇಸ್ಲಾಂ ಅನುಯಾಯಿಗಳ ಧಾರ್ಮಿಕ ನಂಬಿಕೆಗಳನ್ನು ಪರಿಗಣಿಸಿದಾಗ, ಮಸೀದಿಗಳ ಒಳಗೆ ನಮಾಜ್ ಸಲ್ಲಿಸಲು ಮಹಿಳೆಯರು ಮಸೀದಿ ಪ್ರವೇಶಿಸುವುದಕ್ಕೆ ಅನುಮತಿ ಇದೆ. ಹೀಗಾಗಿ, ಮುಸ್ಲಿಂ ಮಹಿಳೆಯರು ಪ್ರಾರ್ಥನೆಗಾಗಿ ಮಸೀದಿ ಪ್ರವೇಶಿಸುವುದಕ್ಕೆ ಮುಕ್ತರಾಗಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಲಭ್ಯವಿರುವ ಅಂತಹ ಸೌಲಭ್ಯದ ಹಕ್ಕನ್ನು ಬಳಸಿಕೊಳ್ಳುವುದು ಆಕೆಯ ಆಯ್ಕೆಗೆ ಬಿಟ್ಟ ವಿಷಯ” ಎಂದು ಮಂಡಳಿ ಪರವಾಗಿ ವಕೀಲ ಎಂಆರ್ ಶಂಷದ್ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೇಳಲಾಗಿದೆ.

“ಮುಸ್ಲಿಂ ಪುರುಷರಿಗೆ ನಿಯಮಗಳಿದ್ದರೂ, ಮುಸ್ಲಿಂ ಮಹಿಳೆಯರು ಸಾಮೂಹಿಕವಾಗಿ ಐದು ಬಾರಿ ಪ್ರಾರ್ಥನೆಗೆ ಸೇರಬೇಕು ಎಂದು ಇಸ್ಲಾಂನಲ್ಲಿ ಕಡ್ಡಾಯವಾಗಿ ಹೇಳಿಲ್ಲ. ಹಾಗೆಯೇ ಶುಕ್ರವಾರದಂದು ನಡೆಯುವ ವಾರದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ಕೂಡ ಮಹಿಳೆಯರಿಗೆ ಕಡ್ಡಾಯವಾಗಿಲ್ಲ. ಮುಸ್ಲಿಂ ಮಹಿಳೆಯರಿಗೆ ವಿಭಿನ್ನ ಸ್ಥಾನ ನೀಡಲಾಗಿದೆ, ಏಕೆಂದರೆ ಇಸ್ಲಾಂ ಬೋಧನೆಗಳ ಪ್ರಕಾರ ಆಕೆಗೆ ಮಸೀದಿ ಅಥವಾ ಮನೆ ಇರಲಿ, ತನ್ನ ಇಚ್ಛೆಗೆ ತಕ್ಕಂತೆ ಎಲ್ಲಿ ಪ್ರಾರ್ಥನೆ ಸಲ್ಲಿಸಿದರೂ ಅದೇ ಧಾರ್ಮಿಕ ಕೃಪೆಗಳನ್ನು ಪಡೆಯಲು ಆಕೆ ಅರ್ಹಳಾಗಿರುತ್ತಾಳೆ” ಎಂದು ಅಫಿಡವಿಟ್ ತಿಳಿಸಿದೆ.

ಮೆಕ್ಕಾ ಮತ್ತು ಮದೀನಾಗಳಲ್ಲಿ ಮಹಿಳೆಯರು, ಪುರುಷ ಯಾತ್ರಾರ್ಥಿಗಳ ಜತೆಗೇ ಹಜ್ ಯಾತ್ರೆ ನಡೆಸಲು ಅವಕಾಶವಿದೆ. ಹೀಗಿರುವಾಗ ಮಸೀದಿಗಳಲ್ಲಿ ಕೂಡ ಪುರುಷರ ಜತೆ ಮಹಿಳೆಯರು ಕೂಡ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದು ಕೆಲವು ಅರ್ಜಿದಾರರು ವಾದಿಸಿದ್ದರು. ಇದನ್ನು ನಿರಾಕರಿಸಿರುವ ಮಂಡಳಿ, ಮೆಕ್ಕಾ ಮತ್ತು ಮದೀನಾ ಪವಿತ್ರ ತಾಣಗಳಿಗೆ ಇಸ್ಲಾಂನಲ್ಲಿ ಬೇರೆಯದೇ ಸ್ಥಾನವಿದೆ ಎಂದು ಹೇಳಿದೆ.

“ಯಾವುದೇ ಧಾರ್ಮಿಕ ಗ್ರಂಥವು ಯಾವುದೇ ಮಸೀದಿಗಳಲ್ಲಿ ಮಹಿಳೆಯರು ಮತ್ತು ಪುರುಷರು ಮುಕ್ತವಾಗಿ ಬೆರೆಯಲು ಅಧಿಕಾರ ನೀಡುವುದಿಲ್ಲ. ಮದೀನಾದ ಆನ್- ನಬಾವಿ ಮಸೀದಿಯು ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳ/ ಕೋಣೆಗಳನ್ನು ಹೊಂದಿದೆ. ಅಷ್ಟಲ್ಲದೆ, ಆನ್ ನಬಾವಿ ಮಸೀದಿಯಲ್ಲಿ ರಾವ್ದಾಹ್‌ಗೆ ಕೂಡ ಪ್ರತ್ಯೇಕ ವ್ಯವಸ್ಥೆ ಇದೆ. ಅದು ಜಿಯಾರತ್ ಮಾಡಲು ಪುರುಷರು ಹಾಗೂ ಮಹಿಳೆಯರಿಗೆ ಬೇರೆ ಬೇರೆ ಸಮಯಗಳನ್ನು ನಿಗದಿ ಮಾಡಲಾಗಿರುತ್ತದೆ” ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಾದಿಸಿದೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

4 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

4 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

4 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

4 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

4 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

4 days ago