ಪ್ರಯಾಗ್ ರಾಜ್: ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು, ಸುಭಾಶ್ಚಂದ್ರ ಬೋಸ್ ಅವರನ್ನು ದೇಶದ ಮೊದಲ ಪ್ರಧಾನಿ ಮಂತ್ರಿ ಎಂದು ಹೆಸರಿಸಬೇಕು ಹಾಗೂ ಮತಾಂತರ ಎಂಬುದು ದೇಶದ್ರೋಹ ಎಂದು ಪರಿಗಣಿಸಿ ಮರಣದಂಡನೆ ಶಿಕ್ಷೆ ವಿಧಿಸಬೇಕು.ಇದು ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಾಘ ಮೇಳದಲ್ಲಿನ ಧರ್ಮ ಸಂಸತ್ ನ ಬೇಡಿಕೆಯಾಗಿದೆ.
ದೇಶಭಕ್ತ ಮುಸ್ಲಿಮರು ನಮ್ಮ ಕುಟುಂಬದ ಭಾಗವಾಗಿದ್ದು, ಹಿಂದೂ ಧರ್ಮಕ್ಕೆ ಮರಳುವ ಪ್ರಚಾರಾಂದೋಲನ (ಘರ್ ವಾಪ್ಸಿ) ಮುಂದುವರಿಯಬೇಕು ಎಂಬ ನಿರ್ಧಾರವನ್ನು ಧರ್ಮ ಸಂಸತ್ ನಲ್ಲಿ ಕೈಗೊಳ್ಳಲಾಗಿದೆ.
ಧರ್ಮ ಸಂಸತ್ ಸಮ್ಮೇಳನದ ಮುಖ್ಯ ಅತಿಥಿ, ಸುಮೇರು ಪೀಠಾಧೀಶ್ವರ್, ಜಗದ್ಗುರು ಸ್ವಾಮಿ ನರೇಂದ್ರನಂದ ಸರಸ್ವತಿ ಅವರು ಮಾತನಾಡಿ, ಕೇಂದ್ರ ಸರ್ಕಾರ ಹಿಂದೂ ದೇಶ ಎಂದು ಘೋಷಿಸದಿದ್ದಲ್ಲಿ, ಎಲ್ಲಾ ಹಿಂದೂಗಳು ದೇಶವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ :
ಇಸ್ಲಾಮಿಕ್ ಜಿಹಾದ್ ಇಡೀ ಜಗತ್ತಿಗೆ ದೊಡ್ಡ ಅಪಾಯಕಾರಿಯಾಗಿದೆ. ಇದನ್ನು ಮಟ್ಟಹಾಕಬೇಕಾಗಿದ್ದು, ಭಾರತ ಚೀನಾದ ನಿಯಮವನ್ನು ಅನುಸರಿಸುವ ಮೂಲಕ ಭಯೋತ್ಪಾದನೆಯನ್ನು ನಿಗ್ರಹಿಸಬೇಕಾಗಿದೆ ಎಂದು ನರೇಂದ್ರನಂದ ಸರಸ್ವತಿ ಹೇಳಿದರು.
ಮಹಾತ್ಮ ಗಾಂಧಿ ರಾಷ್ಟ್ರಪಿತ ಅಲ್ಲ, ರಾಷ್ಟ್ರಪುತ್ರ ಆಗಬಹುದೇ ಹೊರತು ರಾಷ್ಟ್ರಪಿತ ಆಗಲಾರರು ಎಂದ ಸ್ವಾಮಿ ನರೇಂದ್ರನಂದ, ಜವಾಹರಲಾಲ್ ನೆಹರು ದೇಶದ ಮೊದಲ ಪ್ರಧಾನಿ ಅಲ್ಲ, ದೇಶದ ಮೊದಲ ಪ್ರಧಾನಿ ಸುಭಾಶ್ಚಂದ್ರ ಬೋಸ್, ಅವರ ನಾಯಕತ್ವವನ್ನು ಜಗತ್ತಿನ ಹಲವಾರು ದೇಶಗಳು ಒಪ್ಪಿಕೊಂಡಿದೆ. ಇತಿಹಾಸಕಾರರ ತಪ್ಪು ಮಾಹಿತಿ ಇಂದು ಯುವಜನಾಂಗವನ್ನು ಗೊಂದಲಕ್ಕೆ ದೂಡಿದೆ ಎಂದು ತಿಳಿಸಿದರು.
ಇದನ್ನೂ ಓದಿ :
ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…
ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…
ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…
ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…
ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…