ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಭಾರಿ ಸುದ್ದಿ ಮಾಡುತ್ತಿದ್ದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್ ಈ ಬಾರಿ ಪ್ರಸಾರವಾಗಲ್ಲ. ಖಚಿತ ಮಾಹಿತಿಯ ಪ್ರಕಾರ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಬಿಗ್‍ಬಾಸ್ ಆರಂಭವಾಗಲ್ಲ ಎಂದು ಹೇಳಲಾಗುತ್ತಿದೆ.
ಈಗಾಗಲೇ ತೆಲುಗಿನಲ್ಲಿ ಬಿಗ್‍ಬಾಸ್ ಸೀಸನ್ 4 ಆರಂಭವಾಗಿದೆ. ಹಿಂದಿಯಲ್ಲಿ ಹೊಸ ಆವೃತ್ತಿಗೆ ಎಲ್ಲ ತಯಾರಿ ನಡೆಯುತ್ತಿದ್ದು, ಅಕ್ಟೋಬರ್‌ನಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಆದರೆ ಕನ್ನಡದಲ್ಲಿ ಈ ವರ್ಷ ಅಂದರೆ 2020ರಲ್ಲಿ ಬಿಗ್‍ಬಾಸ್ ನಡೆಯುವುದಿಲ್ಲ ಎಂಬ ಸುದ್ದಿ ಪ್ರಕಟವಾಗಿದೆ.
ಖಾಸಗಿ ವಾಹಿನಿಯಲ್ಲಿ ಪ್ರತಿವರ್ಷ ಸೆಪ್ಟೆಂಬರ್ ತಿಂಗಳಿನಿಂದ ಬಿಗ್‍ಬಾಸ್ ಆರಂಭವಾಗುತ್ತಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳಲ್ಲಿ ಬಿಗ್‍ಬಾಸ್ ಸೀಸನ್ 8 ಆರಂಭವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಶೋ ಶುರು ಮಾಡಲು ಸಾಧ್ಯವಾಗಿಲ್ಲ.
ಮಾಹಿತಿ ಪ್ರಕಾರ, ಇನ್ನು ಆರು ತಿಂಗಳು ತಡವಾಗಿ ಬಿಗ್‍ಬಾಸ್ ಶುರುವಾಗಲಿದೆ ಎನ್ನಲಾಗುತ್ತಿದೆ. ಅಂದರೆ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಬಿಗ್‍ಬಾಸ್ ಸೀಸನ್ 8 ಶುರುವಾಗಲಿದೆ. ಹೀಗಾಗಿ ಸದ್ಯಕ್ಕೆ 2020ರಲ್ಲಿ ಬಿಗ್‍ಬಾಸ್ ಶೋ ಪ್ರಸಾರವಾಗಲ್ಲ. ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದ ಬಿಗ್‍ಬಾಸ್ ಶೋ ತುಂಬಾ ಜನಮನ್ನಣೆ ಗಳಿಸಿತ್ತು. ಆದರೆ ಈಗ ಬಿಗ್‍ಬಾಸ್ ಪ್ರಿಯರಿಗೆ ಇದರಿಂದ ಬೇಸರವಾಗುವ ಸಾಧ್ಯತೆಯಿದೆ.
ಸದ್ಯದ ಸಿನಿಮಾ ಶೂಟಿಂಗ್, ಧಾರಾವಾಹಿ ಚಿತ್ರೀಕರಣ, ರಿಯಾಲಿಟಿ ಶೋ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ. ಹಾಗಾಗಿ ಬಿಗ್‍ಬಾಸ್ ಸಹ ಆರಂಭವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ವರ್ಷ ಬಿಗ್‍ಬಾಸ್ ನಡೆಯಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಇತ್ತ ಬಿಗ್ ಬಾಸ್ ಶೋ ನಿರೂಪಣೆ ಮಾಡುತ್ತಿದ್ದ ಕಿಚ್ಚ ಸುದೀಪ್ ಸಹ ಸಿನಿಮಾ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಹೈದರಾಬಾದ್‍ನಲ್ಲಿ ‘ಫ್ಯಾಂಟಮ್’ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಮತ್ತೊಂದೆಡೆ ‘ಕೋಟಿಗೊಬ್ಬ 3’ ಸಿನಿಮಾ ಕೂಡ ರಿಲೀಸ್‍ಗೆ ರೆಡಿಯಾಗಿದೆ.
‘ಬಿಗ್‍ಬಾಸ್ ಸೀಸನ್ 7’ರಲ್ಲಿ ನಟ ಶೈನ್ ಶೆಟ್ಟಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಬಿಗ್‍ಬಾಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಹಾಸ್ಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಬಿಗ್‍ಬಾಸ್ ಸೀಸನ್ 7 ರಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್‍ಬಾಸ್ ವೇದಿಕೆಯಲ್ಲಿ ನಟ ಕಿಚ್ಚ ಸುದೀಪ್ ತಮ್ಮ ಎಡಗಡೆ ನಿಂತಿದ್ದ ಶೈನ್ ಶೆಟ್ಟಿ ಕೈಯನ್ನು ಎತ್ತಿ ವಿಜೇತರೆಂದರು ಘೋಷಿಸಿದ್ದರು.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…