ನವದೆಹಲಿ: ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ನಾಳೆ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಪಡಿಸಬೇಕೆಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು. ನ್ಯಾಯಾಧೀಶರು ಬಿಹಾರ ಮತ್ತು ಉತ್ತರಾಖಂಡ ತೀರ್ಪುಗಳನ್ನು ಉಲ್ಲೇಖಿಸಿದರು. ತಕ್ಷಣವೇ ಹಂಗಾಮಿ ಸ್ಪೀಕರ್ ನೇಮಕವಾಗಬೇಕು. ವಿಶ್ವಾಸಮತ ಸಾಬೀತು ಮಾಡುವ ದೃಶ್ಯಗಳನ್ನು ಚಿತ್ರೀಕರಿಸಬೇಕು. ಬಹುಮತದ ಸಂಪೂರ್ಣ ಪ್ರಕ್ರಿಯೆಯನ್ನು ಹಂಗಾಮಿ ಸ್ಪೀಕರ್ ನೋಡಿಕೊಳ್ಳಬೇಕು. ಬಹುಮತ ಸಾಬೀತು ಪ್ರಕ್ರಿಯೆ ನೇರಪ್ರಸಾರ ಆಗಬೇಕು ಮತ್ತು ಗೌಪ್ಯ ಮತದಾನಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಭಾನುವಾರ ಸಲ್ಲಿಕೆಯಾದ ರಿಟ್ ಅರ್ಜಿ ಸತತ ಎರಡು ದಿನಗಳ ವಿಚಾರಣೆ ನಡೆದಿದೆ. ಸೋಮವಾರ ವಾದ – ಪ್ರತಿವಾದ ಕೊನೆಯಾಗಿ ಜಸ್ಟೀಸ್ ಎನ್.ವಿ ರಮಣ್ ನೇತೃತ್ವದ ಪೀಠ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇದಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು ಇಂದು 10.30ಕ್ಕೆ ಪ್ರಕಟ ಮಾಡಿದ್ದಾರೆ.
ಇದೇ ವೇಳೆ ನ್ಯಾಯಪೀಠ ನಾಳೆ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತಿಗೆ ಆದೇಶ ನೀಡಿದೆ. ಇದೇ ವೇಳೆ ನ್ಯಾಯಾಪೀಠ ಬಹುಮತ ಸಾಬೀತು ಮಾಡುವ ವೇಳೆ ಗುಪ್ತಮತದಾನವಾಗಬಾರದು ಇದಲ್ಲದೇ ಎಲ್ಲವೂ ನೇರಪ್ರಸಾರವಾಗಬೇಕು ಅಂತ ‘ಸುಪ್ರೀಂಕೋರ್ಟ್ ಹೇಳಿದೆ.
ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅಣ್ಣಾಮಲೈ ಉಡುಪಿ: ಮಾಜಿ ಐಪಿಎಸ್ ಅಧಿಕಾರಿ…
‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…
ವೋಟರ್ ಲಿಸ್ಟ್ನಿಂದ ತಮ್ಮ ಹೆಸರು ಕೈಬಿಡಲಾಗಿದೆ : ನಟ ಪ್ರಕಾಶ್ ರಾಜ್ ಆರೋಪಕ್ಕೆ ಚುನಾವಣಾಧಿಕಾರಿ ಸ್ಪಷ್ಟನೆ ಬೆಂಗಳೂರು: ಮತದಾರರ ಪಟ್ಟಿಯಿಂದ…
ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ…
ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ ಹೊಸದಿಲ್ಲಿ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು…
ಉಡುಪಿ: ಆ.14 ರಂದು ನೇರ ಸಂದರ್ಶನ ಉಡುಪಿ: ನಗರದ ನಿಟ್ಟೂರು ರಾ.ಹೆ 66 ರ ಆಭರಣ ಮೋಟಾರ್ಸ್ ಪ್ರೆöÊವೇಟ್ ಲಿ.ನಲ್ಲಿ…