ಹೊಸದಿಲ್ಲಿ, : ಸೇನೆಗೆ ಸೇರಲು ಮಹಿಳೆಯರ ಆಸಕ್ತಿ ಹೆಚ್ಚಾಗಿದೆ. 100 ಖಾಲಿ ಹುದ್ದೆಗಳಿಗೆ 2 ಲಕ್ಷ ಮಹಿಳೆಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ
ಯುದ್ಧ ವಿಮಾನ ಚಾಲನೆ ಮಾಡಲು ಆರು ಮಹಿಳಾ ಪೈಲಟ್‌ಗಳು ಇದೀಗ ತರಬೇತಿ ಪಡೆಯುತ್ತಿದ್ದು, ಇದೀಗ 15 ಲಕ್ಷ ಬಲದ ಪ್ರಬಲ ಸಶಸ್ತ್ರ ಪಡೆ ಹೊಸ ದಾಖಲೆ ಬರೆದಿದೆ. ಕಾಪ್ಸ್ ಆಫ್ ಮಿಲಿಟರಿ ಪೊಲೀಸ್ (ಸಿಎಂಪಿ) ಪಡೆಯ 100 ಖಾಲಿ ಹುದ್ದೆಗಳಿಗೆ 2 ಲಕ್ಷ ಮಹಿಳೆಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಭಾರತೀಯ ಸೇನೆ ಇದೇ ಮೊದಲ ಬಾರಿಗೆ ಪ್ರಾಂತೀಯ ಸೇನೆಯಲ್ಲಿ ಮಹಿಳಾ ಪ್ರೊವೊಸ್ಟ್ ಯುನಿಟ್ ಆರಂಭಿಸಲು ಮುಂದಾಗಿದೆ. ಇಬ್ಬರು ಅಧಿಕಾರಿಗಳು ಮೂವರು ಕಿರಿಯ ನಿಯುಕ್ತ ಅಧಿಕಾರಿಗಳು ಹಾಗೂ 40 ಸೈನಿಕರು ಈ ಘಟಕದಲ್ಲಿರುತ್ತಾರೆ.
“ಮಹಿಳಾ ಯೋಧರ (ಸಾಮಾನ್ಯ ಕರ್ತವ್ಯ) ನೇಮಕ ನಿರ್ಧಾರ ಅತ್ಯಂತ ಮಹತ್ವದ್ದು. ಎರಡು ಲಕ್ಷ ಮಹಿಳೆಯರು ಇದುವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ನೇಮಕಾತಿ ರ್ಯಾಲಿ ಈ ತಿಂಗಳ ಅಂತ್ಯಕ್ಕೆ ಬೆಳಗಾವಿಯಲ್ಲಿ ನಡೆಯಲಿದೆ” ಎಂದು ಸೇನೆಯ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಿಂತ ಕೆಳಗಿನ ಹುದ್ದೆಯಾದ ಪಿಬಿಒಆರ್ ಹುದ್ದೆಗಳಿಗೆ ಮುಂದಿನ 17 ವರ್ಷಗಳಲ್ಲಿ ಹಂತಹಂತವಾಗಿ 1,700 ಮಹಿಳೆಯರನ್ನು ನೇಮಿಸಿಕೊಳ್ಳಲು ಸೇನೆ ಉದ್ದೇಶಿಸಿದೆ.
ತರಬೇತಿಯ ನಂತರ, ಮಹಿಳಾ ಸೈನಿಕರನ್ನು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾಗದಲ್ಲಿ ಇರಿಸಲಾಗುವುದು. ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಮಹಿಳಾ ಪ್ರದರ್ಶನಕಾರರನ್ನು ತಡೆಯುವುದು ಮುಖ್ಯ ಕೆಲಸವಾಗಲಿದೆ.
ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…
ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…
ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…
ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್ ಲಕ್ನೋ: ರಾಮಭಕ್ತರ…
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…