Featured

ಮಹಿಳೆಗೆ ಹೊಡೆದ ಘಟನೆ ಉದ್ದೇಶ ಪೂರ್ವಕವಾಗಿರದೆ ಕ್ಷಣಿಕ ಸಿಟ್ಟಿನಿಂದ ಘಟಿಸಿದ್ದು  : ಮಲ್ಪೆ ಮೀನುಗಾರರ ಸಂಘ ಸ್ಪಷ್ಟನೆ – vishwanews24

ಮಹಿಳೆಗೆ ಹೊಡೆದ ಘಟನೆ ಉದ್ದೇಶ ಪೂರ್ವಕವಾಗಿರದೆ ಕ್ಷಣಿಕ ಸಿಟ್ಟಿನಿಂದ ಘಟಿಸಿದ್ದು  : ಮಲ್ಪೆ ಮೀನುಗಾರರ ಸಂಘ ಸ್ಪಷ್ಟನೆ

ರಾಜಿ ಪಂಚಾಯಿತಿಗೆ ಸಹಿ ಹಾಕಲೆಂದು ಕರೆಸಿ ಸತ್ಯಾಸತ್ಯತೆಯನ್ನು ಅರಿಯದೇ ಬಂಧಿಸಲಾಗಿದೆ..

ಘಟನೆಯ ಒಂದು ಮುಖವನ್ನು ಮಾತ್ರ ತೋರಿಸಿ ಮೀನುಗಾರರ ಮೇಲೆ ಕಳಂಕ ಬರುವಂತೆ ಮಾಡಿದ್ದಾರೆ..

ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ಬಗ್ಗೆ ಮಾ. 22ರಂದು ಮಲ್ಪೆ  ಬಂದರಿನಲ್ಲಿ  ಮೀನುಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟನೆ

ಮಲ್ಪೆ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮೀನು ಹೊರುವ ಮಹಿಳೆಗೆ ಹೊಡೆದ ಘಟನೆ ಉದ್ದೇಶ ಪೂರ್ವಕವಾಗಿರದೆ ಕ್ಷಣಿಕ ಸಿಟ್ಟಿನಿಂದ ಘಟಿಸಿದ್ದು ಎಂದು ಮಲ್ಪೆ ಮೀನುಗಾರರ ಸಂಘ ಸ್ಪಷ್ಟಪಡಿಸಿದೆ.

ನಾವು ಈ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದಿರುವ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಪ್ರತಿ ದಿನ ಸಾವಿರಾರು ಕುಟುಂಬಗಳು ಜಾತಿ, ಮತ, ಪಂಗಡ, ಭೇದವಿಲ್ಲದೆ ಹೊರರಾಜ್ಯ, ಜಿಲ್ಲೆಯ ಜನರು ಮೀನುಗಾರಿಕೆಯಲ್ಲಿ ದುಡಿದು ಜೀವನ ಸಾಗಿಸುತ್ತಿವೆ. ಆದರೆ ಸ್ಥಳೀಯ ನಮ್ಮ ಮೀನುಗಾರರ ಸಂಘಟನೆಗಳು ಸೌಹಾರ್ದಯುತವಾಗಿ ನ್ಯಾಯ ಕೊಡುವಲ್ಲಿ ಬದ್ಧ ಎಂದು ತಿಳಿಸಿದ್ದಾರೆ.

ಘಟನೆ ಗಮನಕ್ಕೆ ಬಂದ ಕೂಡಲೇ ಮಲ್ಪೆಯ ಠಾಣಾಧಿಕಾರಿಯ ಗಮನಕ್ಕೆ ತಂದು ಎರಡೂ ಕಡೆಯವರನ್ನು ಮೀನುಗಾರ ಮುಖಂಡರ ಸಮಕ್ಷಮದಲ್ಲಿ ವಿಚಾರಿಸಲಾಗಿದ್ದು ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಈ ಬಗ್ಗೆ ಠಾಣಾಧಿಕಾರಿಯವರು 2 ಕಡೆಯವರಿಂದ ತಪ್ಪೊಪ್ಪಿಗೆ ಹಿಂಬರಹವನ್ನು ಬರೆಸಿಕೊಂಡು ಇತ್ಯರ್ಥಗೊಳಿಸಿದ್ದರು ಎಂದಿದ್ದಾರೆ.

ಸಹಿ ಹಾಕಲೆಂದು ಕರೆಸಿ ಬಂಧಿಸಿದ್ದರು

ದಿನಾಲೂ ಸಾವಿರಾರು ಜನರು ಸೇರುವ ಬಂದರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಅದನ್ನು ಇಲ್ಲಿನ ಮೀನುಗಾರಿಕೆ ಸಂಘಟನೆಗಳು ಚರ್ಚಿಸಿ ಪರಿಹರಿಸಿಕೊಳ್ಳುತ್ತಿದ್ದವು. ಈ ಘಟನೆಗೆ ಸಂಬಂಧಿಸಿ ಬೋಟಿನ ಮಾಲಕರನ್ನು ರಾಜಿ ಪಂಚಾಯಿತಿಗೆ ಸಹಿ ಹಾಕಲೆಂದು ಕರೆಸಿ ಸತ್ಯಾಸತ್ಯತೆಯನ್ನು ಅರಿಯದೇ ಬಂಧಿಸಲಾಗಿದೆ. ಈ ಬಗ್ಗೆ ವಲಯಾಧಿಕಾರಿಯನ್ನು ವಿಚಾರಿಸಿದಾಗ ಠಾಣಾಧಿಕಾರಿಯವರ ರಾಜಿ ಪಂಚಾಯಿತಿಗೆ ಮಾನ್ಯತೆ ನೀಡದೇ ನಾಲ್ವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಯ ಒಂದು ಮುಖವನ್ನು ಮಾತ್ರ ತೋರಿಸಿ ಮೀನುಗಾರರ ಮೇಲೆ ಕಳಂಕ ಬರುವಂತೆ ಮಾಡಿದ್ದಾರೆ. ಯಾರದೋ ಒತ್ತಡಕ್ಕೆ ಒಳಗಾಗಿ ಬಡ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಆಪಾದಿಸಿದ್ದಾರೆ.

ನ್ಯಾಯ ಸಿಕ್ಕಿಲ್ಲ

ಹಲವು ಸಮಯದಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಸಲಕರಣೆಗಳಾದ ಫ್ಯಾನ್‌, ಬ್ಯಾಟರಿ, ಜಿಪಿಎಸ್‌., ವಯರ್‌ಲೆಸ್‌, ಫಿಶ್‌ಫೈಂಡರ್‌, ಬಲೆ ಸಾಮಗ್ರಿಗಳು ಮತ್ತು ಮೀನುಗಳನ್ನು ಕಳವು ಮಾಡಿದ್ದರ ಬಗ್ಗೆ ಹಲವು ಬಾರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರೂ ನ್ಯಾಯ ಸಿಕ್ಕಿಲ್ಲ. ಕೂಡಲೇ ಮೀನುಗಾರಿಕೆ ಮತ್ತು ಬಂದರು ಇಲಾಖೆ, ಬಂದರು ನಿರ್ವಹಣೆಯ ಹೊಣೆ ವಹಿಸಿಕೊಂಡವರು ಷರತ್ತು ಪ್ರಕಾರ 30 ಕಾವಲು ಸಿಬಂದಿಯನ್ನು ಹಾಗೂ ಎಲ್ಲೆಡೆ ಸಿ.ಸಿ. ಕೆಮರಾ ಅಳವಡಿಸಬೇಕೆಂದು ಆಗ್ರಹಿಸಿದ್ದಾರೆ. ಎಲ್ಲ ಅಧಿಕಾರಿಗಳಿಗೆ ಮತ್ತು ಕರಾವಳಿ ಪೇ ಪಾರ್ಕಿಂಗ್‌ನವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಮಾ. 22ರಂದು ಪ್ರತಿಭಟನೆ

ಮೀನುಗಾರರ ಮೇಲೆ ಕಳಂಕ ಬರುವಂತೆ ಬಿಂಬಿಸಿರುವ, ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ಬಗ್ಗೆ ಮಾ. 22ರಂದು ಬೆಳಗ್ಗೆ 9 ಕ್ಕೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರರು ಸ್ವ ಇಚ್ಛೆಯಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ನಡೆಸುವರು. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಘದವರು ಮನವಿ ಸಲ್ಲಿಸುವರು.

Vishwa News 24

Recent Posts

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ -vishwanews24

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…

3 hours ago

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ -vishwanews24

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…

3 hours ago

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ -vishwanews24

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…

3 hours ago

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

6 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

7 hours ago

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…

7 hours ago