ಮಂಗಳೂರು : ಫೇಸ್ಬುಕ್‌ನಲ್ಲಿ ಮಹಿಳೆಯರ ಹೆಸರಿನಲ್ಲಿ ಖಾತೆ ತೆರೆದು ನಗರದ ಕೆಪಿಟಿಯ ವ್ಯಕ್ತಿಯನ್ನು ವಂಚಿಸಿದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಗೋಕುಲ್ ರಾಜ್, ಪವನ್ ಬಂಧಿತ ಆರೋಪಿಗಳು. ಇವರು ಫೇಸ್ ಬುಕ್ನಲ್ಲಿ ಯುವತಿಯರ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಬಳಿಕ ಎಫ್.ಬಿ. ಫ್ರೆಂಡ್ಸ್ಗಳಿಗೆ ಯುವತಿಯರ ನಗ್ನ ಚಿತ್ರ ತಮ್ಮದೆಂದು ಕಳುಹಿಸುತ್ತಿದ್ದರು. ಬಳಿಕ ಮೆಸೇಜ್ ಮಾಡುವವರ ನಗ್ನ ಚಿತ್ರಗಳನ್ನು ಪಡೆಯುತ್ತಿದ್ದರು. ವಂಚನೆ ಮಾಡಿದ ಆರೋಪಿಗಳು ಇದೀಗ ಸಿಕ್ಕಿಬಿದ್ದಿದ್ದಾರೆ.
ಸಾಕ್ಷಿ ರಾಜ್ ಹೆಸರಿನಲ್ಲಿ ಖಾತೆ ತೆರೆದ ಆರೋಪಿಗಳು ಕೆಪಿಟಿಯ ರಾಜೇಶ್ ಎಂಬವರಿಗೆ ಮೆಸೇಜ್ ಮಾಡಿ ಮಹಿಳೆಯ ಅಶ್ಲೀಲ ಫೋಟೊಗಳನ್ನು ರವಾನಿಸಿದ್ದರು. ಅಲ್ಲದೆ, ರಾಜೇಶ್ ಅವರಲ್ಲೂ ತಮ್ಮ ಅಶ್ಲೀಲ ಫೋಟೊ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಮಹಿಳೆಯೇ ಇರಬೇಕೆಂದು ನಂಬಿ ರಾಜೇಶ್ ತನ್ನ ಅಶ್ಲೀಲ ಫೋಟೊಗಳನ್ನೂ ಫೇಸ್ಬುಕ್ ಮೆಸೆಂಜರ್ ಮೂಲಕ ರವಾನಿಸಿದ್ದಾರೆ. ನಂತರ ತನ್ನ ಅಸಲಿ ರೂಪ ತೋರ್ಪಡಿಸಿದ ಆರೋಪಿಗಳು ಫೋಟೊಗಳನ್ನು ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ರಾಜೇಶ್ ಅವರಿಂದ ಹಣ ಪೀಕಿಸಿದ್ದಾರೆ.
ಸಾಕ್ಷಿ ಕಾರ್ತಿಕ್ ಹೆಸರಿನಲ್ಲಿ ಫೇಕ್ ಫೇಸ್ ಬುಕ್ ಅಕೌಂಟ್ ಕ್ರಿಯೆಟ್ ಮಾಡಿ, ಬಳಿಕ ಅದೇ ಹೆಸರಿನಲ್ಲಿ ದೂರು ಬಂದಿದೆ ಅಂತ ಯುವಕರಿಗೆ ಕರೆ ಮಾಡಿದ್ದಾರೆ. ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರೆ. ಹೀಗೆ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ್ದಾರೆ.
ಮೋಸ ಹೋದ ಯುವಕರು ಕದ್ರಿ ಠಾಣೆಗೆ ದೂರು ನೀಡಿದ್ದು, ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.. ಪೊಲೀಸರು ಇದೀಗಾ ಬೆಂಗಳೂರು ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗೋಕುಲ್ ರಾಜ್ (20), ಪವನ್ (20) ಬಂಧಿತರು. ಸದ್ಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…
ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…
ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…
ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…
ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…