Featured

ಮಹಿಳೆಯ ಆರೋಪಕ್ಕೆ ಸ್ಪಷ್ಟನೆ ನೀಡಿದ ಜೊಮ್ಯಾಟೊ ಡೆಲಿವರಿ ಬಾಯ್‌ -Vishwanews24

ಆಕೆಯೇ ನನ್ನ ಮೇಲೆ ಚಪ್ಪಲೆಸದರು,  ಉಂಗುರದಿಂದ ತಾನೇ ಹೊಡೆದುಕೊಂಡರು..

ಮಹಿಳೆಯ ಆರೋಪಕ್ಕೆ ಸ್ಪಷ್ಟನೆ ನೀಡಿದ ಜೊಮ್ಯಾಟೊ ಡೆಲಿವರಿ ಬಾಯ್‌ -Vishwanews24

ಬೆಂಗಳೂರು: ಕಳೆದ ಮಂಗಳವಾರದ ಮಧ್ಯಾಹ್ನದಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಜೊಮ್ಯಾಟೋ ಡಿಲಿವರಿ ಬಾಯ್ ಯುವತಿಯೊಬ್ಬಳಿಗೆ ಮೂಗು ಮುರಿಯುವಂತೆ ಗುದ್ದಿದ್ದಾಗಿ, ಆ ಯುವತಿಯೇ ಸೋಷಿಯನ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಳು ಆಕೆಯ ಮೂಗು ಮುರಿದ ಜೊಮ್ಯಾಟೊ ಡೆಲಿವರಿ ಬಾಯ್‌ನನ್ನು ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು ಬಂಧಿಸಿದ್ದಾರೆ. ಆದರೆ ದಿನ ಕಳೆದಂತೆ ಇದೀಗ ಹೊಸ ಆಯಾಮವೊಂದು ಈ ಕೇಸ್‌ಗೆ ಸಿಕ್ಕಿದೆ.

ಯುವತಿಯೇ ರಂಪಾಟ ಮಾಡಿಕೊಂಡು ಇಷ್ಟೆಲ್ಲ ಅವಾಂತರ ಮಾಡಿರುವುದಾಗಿ ಜೊಮ್ಯಾಟೊ ಡೆಲಿವರಿ ಬಾಯ್‌ ಹೇಳಿಕೊಂಡಿದ್ದಾರೆ. ಈತನ ಹೇಳಿಕೆ ಬೆನ್ನಲ್ಲೇ ಅನೇಕರು ಜೊಮ್ಯಾಟೊ ಡೆಲಿವರಿ ಬಾಯ್‌ನ ಬೆಂಬಲಕ್ಕೆ ನಿಂತಿದ್ದಾರೆ. ಜೊಮ್ಯಾಟೊ ಡೆಲಿವರಿ ಬಾಯ್‌ ಪರವಾಗಿ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ ಕೂಡ ಶುರುವಾಗಿದೆ.

ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಹೆಚ್ಚಾಾಗಿರುವ ಹಿನ್ನೆಲೆ: ಮಾ.13ಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತುಂತುರು ಮಳೆ ಸಾಧ್ಯತೆ ; ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ -Vishwanews24

ಜೊಮ್ಯಾಟೊ ಡೆಲಿವರಿ ಬಾಯ್‌ ಕಾಮ್‌ರಾಜ್‌ ಹೇಳುವುದೇನು?
ನಾನು ಯುವತಿ ಮನೆಯ ಬಾಗಿಲನ್ನು ತಲುಪಿದ ನಂತರ, ಆಕೆಗೆ ಅವರು ಆರ್ಡರ್‌ ಮಾಡಿದ ಆಹಾರವನ್ನು ಹಸ್ತಾಂತರಿಸಿದೆ. ಆಹಾರದ ಹಣ ಪಾವತಿಸುತ್ತಾರೆಂದುಕೊಂಡು ಮನೆ ಬಾಗಿಲಿನಲ್ಲಿ ಕಾಯುತ್ತಿದೆ. ಆಗ ನೀನು ಏಕೆ ಆಹಾರ ತರಲು ತಡ ಮಾಡಿದ್ದಿ ಎಂದು ಅವರು ಕೊಂಚ ಜೋರಾಗೆ ಕೇಳಿದರು.

ಇದಕ್ಕೆ ನಾನು ಟ್ರಾಫಿಕ್ ಜಾಮ್‌‌ ಹಾಗೂ ಕಾಮಗಾರಿ ನಡೆಯುತ್ತಿರುವುದರಿಂದ ತಡವಾಯಿತು ಎಂದು ವಿನಮ್ರದಿಂದ ಕ್ಷಮೆಯಾಚಿಸಿ ಕೇಳಿದೆ. ಆದರೆ ಮತ್ತೆ ಯುವತಿ 40-45 ನಿಮಿಷವೆಂದು ಹೇಳಿ ಇಷ್ಟು ಸಮಯ ತೆಗೆದುಕೊಂಡರೆ ಹೇಗೆ ಎಂದು ಮತ್ತೆ ದಬಾಯಿಸಿದರು ಎಂದು ವಿವರಿಸಿದ ಕಾಮರಾಜ್‌, ಸುಮಾರು ಎರಡು ವರ್ಷಗಳಿಂದ ನಾನು ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಈ ರೀತಿಯ ಸನ್ನಿವೇಶ ಸಂಭವಿಸಿದೆ ಎಂದು ತನ್ನ ನೋವು ತೋಡಿಕೊಂಡರು.

ಕೊರೋನಾ 2ನೇ ಅಲೆ ಭೀತಿ : ಬೆಂಗಳೂರಿನಲ್ಲಿ ಮಾರ್ಚ್ 31ರವರೆಗೆ ನೈಟ್ ಪಾರ್ಟಿ ಬ್ಯಾನ್ -Vishwanews24

“ನಾನು ಹಣ ನೀಡುವಂತೆ ಯುವತಿ ಬಳಿ ಮನವಿ ಮಾಡಿದದೆ. ಆದರೆ ಯುವತಿ ಹಣ ಕೊಡುವುದಿಲ್ಲ ಬದಲಾಗಿ ಜೊಮ್ಯಾಟೊ ಕಸ್ಟಮರ್‌ ಸಪೋರ್ಟರ್‌ ಹತ್ತಿರ ಮಾತನಾಡುತ್ತೇನೆ ಎಂದಿದ್ದಾಳೆ. ನಂತರ ಕಸ್ಟಮರ್‌ ಕೇರ್‌ಗೆ ಕರೆ ಕನೆಕ್ಟ್‌ ಆಗಿದೆ. ಆತ ಫುಡ್‌ ಹಿಂದಿರುಗಿಸುವಂತೆ ಯುವತಿಗೆ ಹೇಳಿದ್ದಾರೆ. ಹೀಗಾಗಿ ನಾನು ಮತ್ತೆ ಮೇಡಂ ಫುಡ್‌ ವಾಪಸ್‌ ಕೊಡಿ ಎಂದು ಕೇಳಿದೆ. ಆದರೆ ಮಹಿಳೆ ಆಹಾರ ವಾಪಸ್‌ ನೀಡಲು ಹಿಂದೇಟು ಹಾಕಿದ್ದಾರೆ.

ಅಲ್ಲದೇ ನನಗೆ ಬೈಯಲು ಆರಂಭಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಆಹಾರದ ಪೊಟ್ಟಣ ಅಲ್ಲೇ ಬಿಟ್ಟು ವಾಪಸ್‌ ಹೋಗಲು ನಾನು ಮುಂದಾದೆ. ಈ ವೇಳೆ ಯುವತಿ ಆಕೆಯ ಚಪ್ಪಲನ್ನು ನನ್ನ ಮೇಲೆ ಎಸೆದಳು. ಹಿಂದಿಯಲ್ಲಿ ಅವಾಚ್ಯವಾಗಿ ಬೈದಳು. ನಂತರ ನನಗೆ ಹೊಡೆದಳು. ಹೀಗೆ ಆಕೆ ತನ್ನ ಕೈನಿಂದ ಹೊಡೆಯುವಾಗು ನಾನು ಅದರಿಂದ ತಪ್ಪಿಸಿಕೊಳ್ಳಲು ಮುಂದಾದೆ.

ಈ ವೇಳೆ ಆಕೆ ಹೊಡೆಯುವ ರಭಸದಲ್ಲಿ ಆಕೆಯ ಕೈಯಲ್ಲಿದ್ದ ಉಂಗುರದಿಂದ ಆಕೆಯ ತನ್ನ ಮೂಗಿಗೆ ಹೊಡೆದುಕೊಂಡಿದ್ದಾಳೆ ಎಂದು ಕಾಮ್‌ರಾಜ್‌ ಸ್ಪಷ್ಟನೆ ನೀಡಿದ್ದಾರೆ. ಪೆಟ್ಟು ಬಿದ್ದ ತಕ್ಷಣ ಮೂಗಿನಿಂದ ರಕ್ತ ಬರಲು ಆರಂಭವಾಯ್ತು, ನಾನು ಅಲ್ಲಿಂದ ಭಯದಲ್ಲಿ ಓಡಿ ಹೋದೆ. ನಂತರ ಜೊಮ್ಯಾಟೋ ಕಸ್ಟಮರ್‌ ಸಪೋರ್ಟರ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದೆ ಎಂದು ಕಾಮ್‌ರಾಜ್‌ ಅಳಲು ತೋಡಿಕೊಂಡಿದ್ದಾರೆ.ಘಟನೆ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಅಶ್ವತ್ಥನಾರಾಯಣರ ಪದವಿ ಮುಂದಿರುವ ‘ಉಪʼ ಹೋಗಿ ಆದಷ್ಟು ಬೇಗ ‘ಮುಖ್ಯಮಂತ್ರಿʼ ಎಂಬ ಪದನಾಮ ಬರುವಂತಾಗಲಿ : ಡಿ.ವಿ.ಸದಾನಂದಗೌಡ -Vishwanews24

 

Vishwa News 24

Recent Posts

ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ : ರಘುಪತಿ ಭಟ್ – vishwanews24

ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ  .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…

2 hours ago

ಉಡುಪಿ: ಕಾಮಗಾರಿ ಹಿನ್ನೆಲೆ ; ಸಂಚಾರಕ್ಕೆ ಬದಲಿ ಮಾರ್ಗ – vishwanews24

ಉಡುಪಿ:  ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…

2 hours ago

ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ – vishwanews24

   ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಶಾಂಭವಿ ಹೋಟೇಲ್ ಎದುರು ರಸ್ತೆಯಲ್ಲಿ…

3 hours ago

ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ ; ಅರ್ಜಿ ಆಹ್ವಾನ – vishwanews24

ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ ಉಡುಪಿ, : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನ ಆರ್ಥಿಕವಾಗಿ…

3 hours ago

ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’  – vishwanews24

ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’  ವಿನಯ್ ಕುಮಾರ್ ಸೊರಕೆ ಮಾರ್ಗದರ್ಶನದಲ್ಲಿ…

3 hours ago

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ -vishwanews24

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…

17 hours ago