Featured

ಮಾಜಿ ಉಡುಪಿ ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್ ಬೈಲೂರು ಇವರಿಂದ ದಿ. ಡಾ ವಿ.ಎಸ್ ಆಚಾರ್ಯರ ಬಗ್ಗೆ ಮನದ ಮಾತು‌- “ರಾಜಕೀಯದ ದೇವರಿಗೆ ನನ್ನ ನಮನಗಳು”

ಮಾಜಿ ಉಡುಪಿ ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್ ಬೈಲೂರು ಇವರಿಂದ ದಿ. ಡಾ ವಿ.ಎಸ್ ಆಚಾರ್ಯರ ಬಗ್ಗೆ ಮನದ ಮಾತು‌

“ರಾಜಕೀಯದ ದೇವರಿಗೆ ನನ್ನ ನಮನಗಳು”

ಡಾ|| ವಿ.ಎಸ್.ಆಚಾರ್ಯ ಸಾರ್ವಜನಿಕ ಜೀವನದಲ್ಲಿ ಒಬ್ಬ ರಾಜಕಾರಣಿ ಯಾವ ರೀತಿ ಇರಬೇಕೆನ್ನುವುದಕ್ಕೆ ಸ್ಪಷ್ಟ ಉದಾಹರಣೆ. ಯಾವುದೇ ಅಭಿವೃದ್ಧಿ ವಿಷಯ ಬಂದಾಗ ಅದರ ಬಗ್ಗೆ ಸರಿಯಾದ ಅಧ್ಯಯನ ಮತ್ತು ಆಳಕ್ಕೆ ಹೋಗಿ ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳಬಲ್ಲ ಏಕೈಕ ರಾಜಕಾರಣಿ. ಎಂದೂ ತನ್ನ ನಿಲುವಲ್ಲಿ ರಾಜಿ ಮಾಡದೆ ಎಲ್ಲರನ್ನೂ ಒಪ್ಪಿಸಬಲ್ಲ ಪ್ರಬುದ್ದತೆ ಅವರಲ್ಲಿ ಇತ್ತು. ರಾಜಕಾರಣದಲ್ಲಿ ಪ್ರತಿಯೊಬ್ಬರ ಏಳಿಗೆಯನ್ನು ಕಂಡು ಸಂತೋಷ ಪಡುತಿದ್ದರು. ಉತ್ತಮ ಕೆಲಸಕ್ಕೆ ಪ್ರಶಂಶಿಸುವುದನ್ನು ಮರೆಯುತಿರಲಿಲ್ಲ. ನಗರಸಭೆಯ ಅಧ್ಯಕ್ಷ ಗಾದಿಯಿಂದ ಹಿಡಿದು ಸಚಿವರಾಗುವವರೆಗೆ ಬಹುಷ ಯಾವುದೇ ಅಹಂ ಇಲ್ಲದೆ ಎಲ್ಲಾ ಸಮಾಜದವರೊಂದಿಗೆ ಅವರ ಸಮಸ್ಯೆಗೆ ಸ್ಪಂದಿಸಿದ ಏಕೈಕ ರಾಜಕಾರಣಿ ಎಂದರೂ ತಪ್ಪಾಗಲಾರದು. ಹಿಂದುಳಿದ ವರ್ಗಕ್ಕೆ ಅವರು ಸರಕಾರದಿಂದ ಬಹಳಷ್ಟು ಸಹಕಾರ ಸಹಾಯ ಮಾಡಿರುತ್ತಾರೆ. ಉತ್ತಮ ಮಾರ್ಕ್ ಪಡೆದು ಉನ್ನತ ವ್ಯಾಸಾಂಗಕ್ಕೆ ಸೀಟು ಸಿಗದಿದ್ದಾಗ ತಾನೇ ಖುದ್ದು ಫೋನಾಯಿಸಿ ನಾನು ಡಾ|| ವಿ.ಎಸ್ ಆಚಾರ್ಯ ಮಾತಾಡ್ತಿದ್ದೇನೆ ಅಂದ್ರೆ ಆಕಡೆಯ ವ್ಯಕ್ತಿ ಎದ್ದು ನಿಂತು `ನಮಸ್ತೆ ಸಾರ್` ಅನ್ನುವಷ್ಟರ ಮಟ್ಟಿಗೆ ಗೌರವ ಹೊಂದಿದ್ದರು. ಮಾತ್ರವಲ್ಲ ಸಮಸ್ಯೆ ಹಿಡಿದುಕೊಂಡು ಬಂದವರಿಗೆ ನ್ಯಾಯ ಕೂಡ ಕೊಡುತಿದ್ದರು. ಎಂದೂ ತನ್ನಲ್ಲಿಗೆ ಬರುವವನ ಜಾತಿ, ಅಂತಸ್ತು ನೋಡೇ ಇಲ್ಲ. ನಮಗೆ ಅರ್ಹತೆ ಇದ್ದುದು ಕಂಡರೆ ಅದಕ್ಕೆ ಖಂಡಿತವಾಗಿ ನ್ಯಾಯ ದೊರಕಿಸುತಿದ್ದಂತಹ ಅಪರೂಪದ ರಾಜಕಾರಣಿ. ಸ್ಥಳೀಯ ಸಂಸ್ಥೆಯ ಕಾರ್ಯವೈಖರಿ ಯಾವ ರೀತಿ ಇರಬೇಕೆನ್ನುವುದರ ಬಗ್ಗೆ ಅವರಲ್ಲಿ ಸ್ಪಷ್ಟವಾದ ಯೋಚನೆಗಳು ಇದ್ದವು. ರಸ್ತೆ ಅಗಲೀಕರಣ , ಕಸ ಮುಕ್ತ ನಗರ, ನೀರು ಸರಬರಾಜು ಹಾಗೂ ಇತರ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದರು. ಯಾವುದೇ ಅಧಿಕಾರಿಗಳನ್ನು ತನ್ನ ಮಾತಿನಲ್ಲಿ ನೋವು ಮಾಡದೆ ಅವರಿಂದ ಕೆಲಸ ಮಾಡಿಸುವ ಮ್ಯಾಜಿಕ್ ಅವರಲಿತ್ತು. ಇದಕ್ಕೆ ಉದಾಹರಣೆ ರಸ್ತೆ ಅಗಲೀಕರಣ ಮತ್ತು ಮಣಿಪಾಲದ ಜಿಲ್ಲಾ ಸಂಕೀರ್ಣ. ಅವರು ಯಾವ ಸಚಿವರಾಗುತಿದ್ದರೋ ಆ ಸ್ಥಾನಕ್ಕೆ ನ್ಯಾಯ ಒದಗಿಸುತಿದ್ದರು. ಗೃಹ ಸಚಿವ ಸ್ಥಾನದಿಂದ ನಿರ್ಗಮಿಸುವಾಗ ಗೃಹ ಇಲಾಖೆಯ ಉನ್ನತ ಅಧಿಕಾರಿಗಳು ಕಣ್ಣೀರು ಹಾಕಿರುವುದು ಅವರೆಷ್ಟು ಸ್ನೇಹಜೀವಿಯಾಗಿದ್ದರು ಅನ್ನುವುದನ್ನು ತೋರಿಸುತ್ತದೆ. ಬಹುಷಃ ಅಪರೂಪದ ವ್ಯಕ್ತಿತ್ವ. ನಡೆದಾಡುವ ವಿಶ್ವ ವಿದ್ಯಾಲಯ ಎಂದು ಬಹಳಷ್ಟು ಮಂದಿ ಕರೆಯುವುದುಂಟು. ಸರಕಾರದ ಬೇಡಿಕೆಯನ್ನು ದಿಲ್ಲಿಯಲ್ಲಿ ಮಂಡಿಸಲು ಸಮರ್ಥರಾಗಿದ್ದವರು ಆಚಾರ್ಯರು. ಹುದ್ದೆಗಾಗಿ ಲಾಭಿ ಮಾಡದೆ ಕೊಟ್ಟದನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲರಲ್ಲೂ ಭೇಷ್ ಅನಿಸಿಕೊಂಡ ನಾಯಕ. ಪಕ್ಷಾತೀತವಾಗಿ ಜಾತ್ಯಾತೀತವಾಗಿ ಸಾರ್ವಜನಿಕ ಸೇವೆ ಮಾಡಿ ತನ್ನ ಬಿಳಿ ಬಟ್ಟೆಗೆ ಎಂದೂ ಕಪ್ಪುಕಲೆ ಸೋಂಕದೆ ಕಳಂಕ ರಹಿತವಾಗಿ ರಾಜಕಾರಣ ಮಾಡಿದ ವ್ಯಕ್ತಿ. ಇಂತಹ ಅಪರೂಪದ ನಿರಂತರ ಸಾರ್ವಜನಿಕ ಜೀವನದಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲರಿಗೂ ಪ್ರೇರಣಾ ಶಕ್ತಿಯಾಗಿ ನನ್ನಂತಹ ಬಹಳಷ್ಟು ಮಂದಿಗೆ ರಾಜಕೀಯದ ದಾರಿದೀಪವಾಗಿ ನಮ್ಮನ್ನು ಬೆಳೆಸಿದ ನನ್ನ ರಾಜಕೀಯದ ದೇವರಿಗೆ ನನ್ನ ನಮನಗಳು
ಡಾ|| ಆಚಾರ್ಯರಿಗೆ .

ಕಿರಣ್ ಕುಮಾರ್ ಬೈಲೂರು

ಮಾಜಿ ಅಧ್ಯಕ್ಷರು- ಉಡುಪಿ ನಗರ ಸಭೆ

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago