ಮಾಟ- ವಾಮಾಚಾರ ಅಂದರೆ ಏನು…ಇದು ನಿಜವಾಗ್ಲೂ ಇದ್ಯಾ ..? ಅದರ ಲಕ್ಷಣಗಳು ಯಾವುದು ಇಲ್ಲಿದೆ ಓದಿ vishwanews24

ವಾಮಾಚಾರ ಪ್ರಯೋಗ ಎಂಬ ಪದವೇ ದಿಗಿಲು ಹುಟ್ಟಿಸುವಂಥದ್ದು. ಏಕೆಂದರೆ ಹೀಗೆ ವಾಮಾಚಾರ ಮಾಡಿದರೆ ಸಮಸ್ಯೆಗಳು ಹೇಗಾಗುತ್ತವೆ ಅಂದರೆ, ಕೆನ್ನೆ ಮೇಲೆ ಪೆಟ್ಟು ಬಿದ್ದ ಅನುಭವ ಆಗುತ್ತದೆ. ಆದರೆ ಹೊಡೆದವರು ಯಾರು ಎಂಬುದು ಕಣ್ಣಿಗೆ ಕಾಣಲ್ಲ. ಎದುರು ನಿಂತು ಬಡಿದಾಡುವ ಶತ್ರುವಾದರೆ ಹೇಗೋ ಎದುರಿಸಬಹುದು. ಆದರೆ ಹೀಗೆ ಕಣ್ಣಿಗೆ ಕಾಣದ ಸಮಸ್ಯೆ ಎದುರಿಸುವುದು ಹೇಗೆ?

ದುಷ್ಟಶಕ್ತಿ ಪ್ರಯೋಗ, ವಾಮಾಚಾರ ಪ್ರಯೋಗ ಇವೆಲ್ಲವನ್ನೂ ನಂಬದವರು ಹೆಚ್ಚು. ಆದರೆ ಕೆಲವು ಸಲ ಜ್ಯೋತಿಷ್ಯದಲ್ಲಿ ಸಮಸ್ಯೆ ಏನು ಎಂಬುದನ್ನು ಪತ್ತೆ ಮಾಡಲು ಆಗುವುದಿಲ್ಲ. ಹೆಚ್ಚು ಸ್ಪಷ್ಟವಾಗಿ ಹೇಳಬೇಕೆಂದರೆ, ಜಾತಕದಲ್ಲಿ ಯಾವುದೇ ಗ್ರಹದೋಷ- ಗೃಹ ವಾಸ್ತು ದೋಷ ಇಲ್ಲದಿದ್ದರೂ ತೊಂದರೆ ಆಗುತ್ತಿರುತ್ತದೆ. ಅದಕ್ಕೆ ಕೃತ್ರಿಮ ಪ್ರಯೋಗ ಆಗಿರುವ ಸಾಧ್ಯತೆ ಇರುತ್ತದೆ.ಬಹಳ ಜನಕ್ಕೆ ತಮ್ಮ ಮೇಲೆ ಪ್ರಯೋಗ ಆಗಿದೆ ಎಂಬ ಅನುಮಾನ ಮೂಡಿದರೂ ಹೇಳಿಕೊಳ್ಳಲು ಎಂಥದ್ದೋ ನಾಚಿಕೆ ಅಥವಾ ಸಂಕೋಚ ಇರುತ್ತದೆ. ಆದ್ದರಿಂದ ಈ ಲೇಖನದಲ್ಲಿ ಕೆಲವು ಲಕ್ಷಣಗಳನ್ನು ತಿಳಿಸಲಾಗುವುದು.ಇಂಥ ಸಮಸ್ಯೆ ಜಾತಕದಲ್ಲಿ ಗೊತ್ತಾಗುವುದಿಲ್ಲ ಎಂದು ಈಗಾಗಲೇ ಹೇಳಿಯಾಗಿದೆ. ಪ್ರಶ್ನಶಾಸ್ತ್ರದ ಮೂಲಕ ಅದನ್ನು ತಿಳಿದುಕೊಂಡು ಶಾಶ್ವತವಾದ ಪರಿಹಾರ ಮಾಡಬೇಕಾಗುತ್ತದೆ. ಇರಲಿ, ಮೊದಲಿಗೆ ವಾಮಾಚಾರ ಪ್ರಯೋಗ ಆಗಿರಬಹುದಾದ ಲಕ್ಷಣಗಳನ್ನು ತಿಳಿದುಕೊಳ್ಳಿ.

ಮುಖದಲ್ಲಿ ವಿಕಾರತೆ ವಾಮಾಚಾರ ಪ್ರಯೋಗ ಆಗಿದೆ ಅಂದರೆ ದೈಹಿಕ ಬದಲಾವಣೆಗಳು ಮೊದಲ ಹಂತದಲ್ಲೇ ಗೋಚರವಾಗುತ್ತದೆ. ವಿಪರೀತ ಕೂದಲು ಉದುರುತ್ತದೆ. ಮುಖದಲ್ಲೊಂದು ವಿಕಾರತೆ ಕಾಣಿಸುತ್ತದೆ. ನಿತ್ಯವೂ ಗಮನಿಸುವವರಿಗೆ ಈ ಬದಲಾವಣೆ ಬಹಳ ಬೇಗ ಗೊತ್ತಾಗುತ್ತದೆ. ಜೀವ ಕಳೆ ಅಂತ ಏನು ಹೇಳ್ತೀವಿ ಅದು ಇಲ್ಲದಂತಾಗುತ್ತದೆ.

ಮನೆಯಲ್ಲಿ ಬಳಕೆಯಾಗದ ಸ್ಥಳದಲ್ಲಿ ಪೊಟ್ಟಣ ಕಟ್ಟಿರುವಂತೆ ಕುಂಕುಮ, ಅರಿಶಿನ, ನಿಂಬೆಹಣ್ಣು, ಗೊಂಬೆ, ಭಸ್ಮ, ದಾರ ಸುತ್ತಿಟ್ಟ ಮಡಿಕೆ, ಸೂಜಿ ಚುಚ್ಚಿದ ವಸ್ತು, ಮೊಟ್ಟೆ, ಮೆಣಸಿನಕಾಯಿ ಪದೇಪದೇ ಸಿಕ್ಕರೆ ಖಂಡಿತಾ ಈ ಬಗ್ಗೆ ಒಂದು ಅನುಮಾನ ಮೂಡಬೇಕು. ಏಕೆಂದರೆ ಇವೆಲ್ಲ ವಸ್ತುಗಳು ಕೃತ್ರಿಮ ಪ್ರಯೋಗದ ಮುನ್ಸೂಚನೆಗಳು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago