ನರಗುಂದ : ಮಾತು ಬಾರದ, ಕಿವಿಯೂ ಕೇಳದ ಯುವಕನನ್ನು ಪದವೀಧರ ಯುವತಿ ವರಿಸಿದ್ದಾರೆ.
ನರಗುಂದ ಪಟ್ಟಣದ ದಂಡಾಪುರ ಬಡಾವಣೆಯ ಲಾಲಮಹಮ್ಮದ್, ಆರೀಫಾಭಾನು ದಂಪತಿ ಪುತ್ರ ಮಹಮ್ಮದ್ ಸಾಧಿಕ್ ಹಾಗೂ ಗದುಗಿನ ಗಂಗಿಮಡಿ ಬಡಾವಣೆಯ ಮಲೀಕಸಾಬ್-ಮಮತಾಜ್‌ಬೇಗಂ ಪಲ್ಲೇದ ದಂಪತಿ ಪುತ್ರಿ ಸುಮಯ್ಯಾ ಭಾನುವಾರ ನವಜೀವನಕ್ಕೆ ಕಾಲಿಟ್ಟರು. ಸೋಮವಾರ ಪಟ್ಟಣದಲ್ಲಿ ವಲೀಮಾ ನಡೆಯಿತು.
ನರಗುಂದದ ನಿವಾಸಿ ವರ ಮಹಮ್ಮದ್ ಸಾಧಿಕ್ ನರೇಗಲ್‌ನ ಶ್ರೀಅನ್ನದಾನೇಶ್ವರ ಕಿವುಡ ಮತ್ತು ಮೂಕರ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪೊರೈಸಿದ್ದಾರೆ. ನಂತರ ಮೈಸೂರಿನ ಜೆಎಸ್‍ಎಸ್ ಕಾಲೇಜ್‍ನಲ್ಲಿ ಪಿಯುಸಿ ಓದಿ, ಆಟೋ ಇಲೆಕ್ಟ್ರೀಷಿಯನ್ ಆಗಿ ಸ್ವಂತ ಉದ್ಯೋಗದಲ್ಲಿದ್ದಾರೆ. ವರನಿಗೆ ದೂರದ ಸಂಬಂಧಿ ಆಗಿರುವ ವಧು ಸುಮಯ್ಯಾ ನರಗುಂದದ ಶಾರದಾಂಬಾ ಶಾಲೆಯಲ್ಲಿ 1 ರಿಂದ 10ನೇ ತರಗತಿ ಓದಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ವರ್ಷ ಕಲಾ ಶಿಕ್ಷಣ ಪಡೆದಿದ್ದಾರೆ. ಬಳಿಕ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.
‘ದೇವರ ಸದಿಚ್ಛೆಯಂತೆ ನಮ್ಮ ಮಗಳಿಗೆ ವರ ಸಿಕ್ಕಿದ್ದಾನೆ. ಗುರು, ಹಿರಿಯರ ಆಶೀರ್ವಾದದಿಂದ ಸಮಾಜಕ್ಕೆ ಮಾದರಿಯಾಗುವಂತೆ ಇವರಿಬ್ಬರೂ ಸುಂದರವಾದ ಜೀವನವನ್ನು ನಡೆಸಲಿ’ ಎಂದು ವಧುವಿನ ತಂದೆ ಮಲೀಕಸಾಬ್ ಪಲ್ಲೇದ ಹಾರೈಸಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…