Featured

ಮಾ.31 ರಿಂದ ಎ.2 ರವರೆಗೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಮುಖ್ಯಪ್ರಾಣ ಏಕಶಿಲಾಮೂರ್ತಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ – vishwanews24

ಶ್ರೀ ಕ್ಷೇತ್ರ ಶಂಕರಪುರದಲ್ಲಿ ಮಾ.31 ರಿಂದ ಎ.2 ರವರೆಗೆ ಮುಖ್ಯಪ್ರಾಣ ಏಕಶಿಲಾಮೂರ್ತಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ್, ಶ್ರೀ ದ್ವಾರಕಾಮಾಯಿ ಮಠದಲ್ಲಿ ಸಾಯಿ ಈಶ್ವರ್‌ಗುರೂಜಿ ಮಾರ್ಗದರ್ಶನದಲ್ಲಿ 19 ಅಡಿ ಎತ್ತರದ ಕೃಷ್ಣಶಿಲೆಯ ಶ್ರೀ ಮುಖ್ಯಪ್ರಾಣ ದೇವರ ಏಕಶಿಲಾಮೂರ್ತಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾ. 31ರಿಂದ ಎ. 3ರ ವರೆಗೆ ಜರಗಲಿದೆ. ಶ್ರೀಕ್ಷೇತ್ರದ ತಂತ್ರಿ ದೇವದಾಸ್ ತಂತ್ರಿ ಮುಂಬಯಿ ನೇತೃತ್ವದಲ್ಲಿ ಮಾ. 31ರಂದು ಮಧ್ಯಾಹ್ನ ಅನ್ನಪ್ರಸಾದ, ಸಂಜೆ 6ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಎ.1ರಂದು ಬೆಳಗ್ಗೆ 7ರಿಂದ ಗಣಪತಿ ಹೋಮ, ಶ್ರೀ ಮಹಾಗಣಪತಿ, ಅಯ್ಯಪ್ಪ ಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ, ದುರ್ಗಾದೇವಿಗೆ ನವಕಾಭಿಷೇಕ, ಮಧ್ಯಾಹ್ನ 12.30ಕ್ಕೆ ಅನ್ನಪ್ರಸಾದ, ಅನಾಥಾಶ್ರಮಗಳ ಮಕ್ಕಳಿಗೆ ಸತ್ಕಾರದ ಬಾಲಭೋಜನ, ಸಂಜೆ 6ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ.

ಇದನ್ನೂ ಓದಿ:

ಎ. 2ರಂದು ಬೆಳಗ್ಗೆ 7ರಿಂದ ಶ್ರೀ ಮುಖ್ಯಪ್ರಾಣ ಶಿಲಾಮೂರ್ತಿ, ನಿತ್ಯಾನಂದ ಸ್ವಾಮಿಯ ಮೂರ್ತಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ 12.30ರಿಂದ ಮಹಾ ಅನ್ನಸಂತರ್ಪಣೆ ಜರಗಲಿದೆ. ಬೆಂಗಳೂರು ಸಿದ್ಧಿವಿನಾಯಕ ಶರಭೇಶ್ವರ ಪೀಠದ ಡಾ| ಮಹರ್ಷಿ ಜಯ ಶ್ರೀನಿವಾಸನ್ ಗುರೂಜಿ, ಶ್ರೀಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಮಂಗಳೂರು ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧಿಪೀಠದ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಉಪಸ್ಥಿತಿಯಲ್ಲಿ ಧರ್ಮ ಸಭೆ ನಡೆಯಲಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಮುಂಬಯಿ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ದೀಪ ಪ್ರಜ್ವಲನೆ ಮಾಡಲಿದ್ದಾರೆ.

ಇದನ್ನೂ ಓದಿ:

ಎ. 3ರಂದು ಬೆಳಗ್ಗೆ 7ರಿಂದ ಹನುಮಯಾಗ, ಮಧ್ಯಾಹ್ನ 12.30ಕ್ಕೆ ಅನ್ನಪ್ರಸಾದ, ಸಂಜೆ 6ರಿಂದ ಶ್ರೀ ಕಾಲಭೈರವ ಸ್ವಾಮಿ ಬಲಿ ತರ್ಪಣ ಜರಗಲಿದೆ ಎಂದು ಶ್ರೀ ಮುಖ್ಯಪ್ರಾಣ ಪ್ರತಿಷ್ಠಾಪನ ಸಮಿತಿ, ಶ್ರೀ ಸನಾತನ ಸೇವಾದಳ, ಶ್ರೀಕ್ಷೇತ್ರ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.

Vishwa News 24

Recent Posts

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು – vishwanews24

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…

8 minutes ago

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ – vishwanews24

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…

17 minutes ago

ಅಡುಗೆ ಅನಿಲದ ಅಭಾವ – ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ – vishwanews24

ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…

33 minutes ago

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ – ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ : ಪೊಲೀಸ್ ಆಯುಕ್ತ – vishwanews24

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…

42 minutes ago

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ – vishwanews24

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…

1 hour ago

ಬೆಳ್ತಂಗಡಿ: ನವವಿವಾಹಿತ ಉದ್ಯಮಿ ಆತ್ಮಹತ್ಯೆಗೆ ಶರಣು – vishwanews24

ಬೆಳ್ತಂಗಡಿ: ನವವಿವಾಹಿತ ಉದ್ಯಮಿ ಆತ್ಮಹತ್ಯೆಗೆ ಶರಣು ಬೆಳ್ತಂಗಡಿ: ಕಳೆದ ತಿಂಗಳು ಮದುವೆಯಾಗಿದ್ದ ನವವಿವಾಹಿತ ಉದ್ಯಮಿಯೊಬ್ಬರು ಪತ್ನಿಯ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ,…

1 hour ago