ಮಿಥುನ ರಾಶಿಯಲ್ಲಿ ಕಂಕಣ ಸೂರ್ಯಗ್ರಹಣ..! ರಾಶಿ ಪರಿಹಾರ ಕ್ರಮಗಳು ಇಲ್ಲಿವೆ ನೋಡಿ..

ಗ್ರಹಣಾನಂತರ ಸೂಕ್ತ ಪರಿಹಾರ ಕ್ರಮಗಳನ್ನು ಮಾಡಿದರೆ ಗ್ರಹಣದಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಜ್ಯೋತಿಷ್ಯಶಾಸ್ತ್ರ ತಿಳಿಸುತ್ತದೆ. ಹಾಗಾದರೆ ಗ್ರಹಣದ ಪರಿಣಾಮವನ್ನು ಎದುರಿಸುವ ರಾಶಿಗಳು ಯಾವುವು? ಯಾವ ನಕ್ಷತ್ರದಲ್ಲಿ ಗ್ರಹಣ ನಡೆಯಲಿದೆ ಹಾಗೂ ಗ್ರಹಣ ಮೋಕ್ಷದ ನಂತರ ಯಾವ ಪರಿಹಾರ ಮಾಡಬೇಕು ಎನ್ನುವುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

​ಮಿಥುನ ರಾಶಿಯಲ್ಲಿ ಸೂರ್ಯಗ್ರಹಣ

ಗ್ರಹಣವು ಖಗೋಳದಲ್ಲಿ ನಡೆಯುವ ಘಟನೆಯೇ ಆದರೂ ಹಿಂದಿನಿಂದಲೂ ಪಾಲಿಸಿಕೊಂಡು ಬಂದ ನಂಬಿಕೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಸೂರ್ಯನು ಜೂನ್‌ 14 ರಂದು ಮಿಥುನ ರಾಶಿಯನ್ನು ಪ್ರವೇಶಿಸಿರುತ್ತಾನೆ. ಹಾಗಾಗಿ ಈ ಗ್ರಹಣವು ಕೂಡಾ ಮಿಥುನ ರಾಶಿ, ಮೃಗಶಿರಾ ನಕ್ಷತ್ರದಲ್ಲಿ ನಡೆಯಲಿದೆ. ಹಾಗಾಗಿ ಈ ರಾಶಿ ನಕ್ಷತ್ರದವರ ಮೇಲೆ ಗ್ರಹಣವು ಹೆಚ್ಚು ಪರಿಣಾಮ ಬೀರಲಿದೆ. ಗ್ರಹಣ ಪೂರ್ಣಗೊಂಡ ನಂತರ ಸೂರ್ಯನು ಜೂನ್‌ 21ರಂದು ರಾತ್ರಿ ಆರಿದ್ರಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಜೊತೆಗೆ ಚಿತ್ರಾ ನಕ್ಷತ್ರ, ಧನಿಷ್ಠಾ, ಆರಿದ್ರಾ ಹಾಗೂ ರೋಹಿಣಿ ನಕ್ಷತ್ರದ ಮೇಲೂ ಪರಿಣಾಮ ಬೀರುವುದು.

​ರಾಶಿಗಳ ಮೇಲೆ ಫಲಾಫಲ

ಶುಭ ಫಲ ಪಡೆಯುವ ರಾಶಿಗಳು: ಸಿಂಹ, ಕನ್ಯಾ, ಮಕರ, ಮೇಷ

ಮಿಶ್ರಫಲ ಪಡೆಯುವ ರಾಶಿಗಳು: ತುಲಾ, ಧನುಸ್ಸು, ಕುಂಭ, ವೃಷಭ

ಅಶುಭ ಫಲ ಪಡೆಯುವ ರಾಶಿಗಳು: ಮಿಥುನ, ಕಟಕ, ವೃಶ್ಚಿಕ, ಮೀನ

 

ಗ್ರಹಣದ ಸಮಯದಲ್ಲಿ ಆರು ಗ್ರಹಗಳಾದ ಗುರು, ಶನಿ, ಮಂಗಳ, ಶುಕ್ರ, ರಾಹು ಮತ್ತು ಕೇತು ವಕ್ರಿಯಾಗಿ ಚಲಿಸುತ್ತವೆ. ಅದೇ ಸಮಯದಲ್ಲಿ ಈ ಗ್ರಹಣವು ಮೇಷ, ಕನ್ಯಾ, ಮಕರ ಮತ್ತು ಸಿಂಹ ರಾಶಿಗೆ ಬಹಳ ಶುಭವಾಗಿರುತ್ತದೆ.

​ಸೂರ್ಯಗ್ರಹಣ ಸಮಯದಲ್ಲಿ ಏನು ಮಾಡಬೇಕು

ಸೂರ್ಯಗ್ರಹಣಕ್ಕೂ ಮೊದಲು ಸ್ನಾನ ಮಾಡಿ, ದೇವರನ್ನು ಪ್ರಾರ್ಥಿಸಬೇಕು. ನಿಮ್ಮ ಇಷ್ಟದೇವರ ಮಂತ್ರವನ್ನು ಭಕ್ತಿಯಿಂದ ಪಠಿಸಿದರೂ ತುಂಬಾ ಒಳ್ಳೆಯದು. ಶನಿವಾರದಂದು ರಾತ್ರಿ 10 ಗಂಟೆ 4 ನಿಮಿಷಕ್ಕೆ ಗ್ರಹಣ ಸೂತಕ ಕಾಲವು ಆರಂಭವಾಗುವುದರಿಂದ ಈ ಸಮಯದವರೆಗೂ ಆಹಾರ ಸೇವಿಸಬಹುದು. ಗ್ರಹಣ ಸ್ಪರ್ಶಕಾಲ ಬೆಳಗ್ಗೆ 10 ಗಂಟೆ 4 ನಿಮಿಷದಿಂದ ಆರಂಭವಾಗುವುದರಿಂದ ತದನಂತರ ಯಾವುದೇ ಆಹಾರ ಸೇವನೆ ಮಾಡಬಾರದು. ಆದರೆ ಗರ್ಭಿಣಿಯರಿಗೆ, ವೃದ್ಧರಿಗೆ ಹಾಗೂ ಮಕ್ಕಳಿಗೆ ಆಹಾರ ಸೇವನೆಯಲ್ಲಿ ವಿನಾಯಿತಿ ಇದೆ. ಉಳಿದಂತಹ ಆಹಾರವನ್ನು ವ್ಯರ್ಥ ಮಾಡಬಾರದೆಂದಿದ್ದರೆ ತುಳಸಿ ದಳವನ್ನು ಹಾಕಿಡಬಹುದು. ಮಕ್ಕಳು ಮತ್ತು ಗರ್ಭಿಣಿಯರು ಮನೆಯಿಂದ ಹೊರಬರದಿರುವುದೇ ಕ್ಷೇಮ. ಜೊತೆಗೆ ಯಾರೂ ಕೂಡಾ ಬರಿಗಣ್ಣಿನಿಂದ ಗ್ರಹಣವನ್ನು ನೋಡುವ ಸಾಹಸ ಮಾಡದಿರಿ.

​ಗ್ರಹಣ ದೋಷ ನಿವಾರಣಾ ಕ್ರಮಗಳು

ಗ್ರಹಣ ಮೋಕ್ಷವಾದ ನಂತರ ಮನೆಯನ್ನು ಶುದ್ಧಿ ಮಾಡಿ, ಸ್ನಾನ ಮಾಡಿದ ನಂತರ ಪೂಜಾ ಕೋಣೆಯನ್ನೂ ಗಂಗಾಜಲದಿಂದ ಶುದ್ಧಗೊಳಿಸಬೇಕು. ಸ್ನಾನ ಮಾಡುವ ನೀರಿಗೆ ಪಟಿಕದ ಪುಡಿ, ಚಿಟಿಕೆಯಷ್ಟು ಕಲ್ಲುಪ್ಪು ಹಾಗೂ ಒಂದು ಚಿಟಿಕೆ ಅರಿಶಿಣ ಹಾಕಿ ಸ್ನಾನ ಮಾಡಿದರೆ ಗ್ರಹಣದಿಂದ ದೇಹದ ಮೇಲೆ ಉಂಟಾದ ಕೆಟ್ಟ ಪರಿಣಾಮಗಳು ದೂರವಾಗುವುದು.

ದುರ್ಗಾ ದೇವಿಯು ದುಷ್ಟಶಕ್ತಿಗಳನ್ನು ನಿವಾರಿಸುವುದರಿಂದ ದುರ್ಗಾದೇವಿಯನ್ನು ದೀಪ ಬೆಳಗಿಸಿ ಆರಾಧಿಸಿದರೆ ಒಳ್ಳೆಯದು. ಗ್ರಹಣ ಮೋಕ್ಷವಾದ ನಂತರ ಶಿವದೇವಾಲಯಕ್ಕೆ ಭೇಟಿ ನೀಡಿ, ಎಣ್ಣೆಯನ್ನು ಅಥವಾ ಗೋಧಿಯನ್ನು ದಾನ ಮಾಡಿದರೆ ಉತ್ತಮ.

ಮೊದಲೇ ತಿಳಿಸಿದಂತೆ ಗರ್ಭಿಣಿ ಮಹಿಳೆಯರು ಮನೆಯಿಂದ ಹೊರಗೆ ಬರಬಾರದು. ಆಹಾರ ಸೇವಿಸಬಾರದು ಎಂಬ ನಿಯಮವಿದೆಯಾದರೂ, ನಿರ್ಜಲೀಕರಣ, ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದಾದ್ದರಿಂದ ದ್ರವಾಹಾರ, ಎಳನೀರು, ಹಣ್ಣುಗಳು ಸೇರಿದಂತೆ, ಕುದಿಸಿ ಆರಿಸಿದ ಉಗುರು ಬೆಚ್ಚನೆಯ ನೀರು ಕುಡಿದರೆ ಉತ್ತಮ.

ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಗ್ರಹಣದ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು. ಯಾಕೆಂದರೆ ಗ್ರಹಣವು ಅಶುಭವೆಂದು ಪರಿಗಣಿಸಲಾಗುವುದರಿಂದ, ಈ ಸಮಯದಲ್ಲಿ ಗರ್ಭಧಾರಣೆಯಾದರೆ ಜನಿಸಿದ ಮಗುವಿಗೆ ತೊಂದರೆಯಾಗಬಹುದು ಎಂಬ ನಂಬಿಕೆ ಇದೆ. ಗ್ರಹಣದ ಸಮಯದಲ್ಲಿ ಆಹಾರ ಸೇವನೆಯೂ ನಿಷಿದ್ಧವಾಗಿರುವ ಕಾರಣ, ಈ ಸಮಯದಲ್ಲಿ ಆಹಾರ ಸೇವನೆ ಮಾಡುವುದರಿಂದ ಅಜೀರ್ಣದ ಸಮಸ್ಯೆ ಉಂಟಾಗಬಹುದು. ಗ್ರಹಣದ ಸಮಯದಲ್ಲಿ ಮನೆಯನ್ನು ಸ್ವಚ್ಛ ಮಾಡಬೇಡಿ. ಗ್ರಹಣ ಮೋಕ್ಷದ ನಂತರವೇ ಮನೆಯನ್ನು ಸ್ವಚ್ಛಮಾಡಿ.

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

2 days ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

2 days ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

2 days ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

2 days ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

2 days ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

2 days ago