ಮಂಗಳೂರು: ಕರಾವಳಿ ಮೂಲದ ಚೆಲುವೆ ಆಡ್ಲಿನ್ ಕ್ಯಾಸ್ಟೆಲಿನೋ ಈ ಬಾರಿಯ ಮಿಸ್ ಯೂನಿವರ್ಸ್ 2020 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಮಿಸ್ ದಿವಾ 2020 ಇದರ ಎಂಟನೇ ಆವೃತ್ತಿ ಮುಂಬೈನ ಅಂಧೇರಿಯಲ್ಲಿ ನಡೆದಿತ್ತು. 20 ಮಂದಿ ಹೆಸರಾಂತ ಮಾಡೆಲ್‍ಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ಕಳೆದ ಬಾರಿಯ ಚಾಂಪಿಯನ್ ವರ್ತಿಕಾ ಸಿಂಗ್ ವಿಜಯಿಯೆಂದು ಘೋಷಣೆಯಾದ ಬಳಿಕ ಆಡ್ಲಿನ್‍ಗೆ ಕಿರೀಟ ತೊಡಿಸಿದರು. ವರ್ತಿಕಾ ಸಿಂಗ್ 2019ರ ಸಾಲಿನ ಮಿಸ್ ಯೂನಿವರ್ಸ್ ಇಂಡಿಯಾ ಆಗಿ ಆಯ್ಕೆಯಾಗಿದ್ದರು.
ಕರಾವಳಿ ಮೂಲದ ಆಡ್ಲಿನ್ ಕ್ಯಾಸ್ಟೆಲಿನೋ ಕಳೆದೆರಡು ವರ್ಷದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಜಯ ಗಳಿಸಿದ್ದ ಮಾಡೆಲ್‍ಗಳ ಪರಸ್ಪರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯ ಸುತ್ತಿನಲ್ಲಿ ಆಡ್ಲಿನ್ ಅವರನ್ನು ವಿಜಯಿಯೆಂದು ಘೋಷಿಸಲಾಯಿತು.
ಆವಿತ್ರಿ ಚೌಧರಿ ಮಿಸ್ ದಿವಾ 2020 ಆಗಿ ಆಯ್ಕೆಯಾಗಿದ್ದು, ಮಿಸ್ ಸುಪ್ರನ್ಯಾಷನಲ್ 2020 ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. 2019ರಲ್ಲಿ ಶೆಫಾಲಿ ಸೂದ್ ಸುಪ್ರನ್ಯಾಷನಲ್ ಇಂಡಿಯಾ ಆಗಿ ಮೂಡಿ ಬಂದಿದ್ದರು. ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ 2016ರಲ್ಲಿ ಮಿಸ್ ಸುಪ್ರನ್ಯಾಷನಲ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.
ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ ಈ ಮಾಡೆಲಿಂಗ್ ಸ್ಪರ್ಧೆಯಲ್ಲಿ ಬಾಲಿವುಡ್ ನಟರಾದ ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್, ಮಿಸ್ ಯೂನಿವರ್ಸ್ 2000 ಲಾರಾ ದತ್ತಾ, ಡಿಸೈನರ್ ಗಳಾದ ಶಿವನ್ ಮತ್ತು ನರೇಶ್, ಮಿಸ್ ಸುಪ್ರಾ ನ್ಯಾಶನಲ್ 2014 ಆಶಾ ಭಟ್, ಮಿಸ್ ಯೂನಿವರ್ಸ್ ಶ್ರೀಲಂಕಾ 2006 ಜಾಕ್ವೇಲಿನ್ ಫೆರ್ನಾಂಡಿಸ್, ಡಿಸೈನರ್ ನಿಕಿಲ್ ಮೆಹ್ರಾ, ಗ್ಯಾವಿನ್ ಮಿಗೆಲ್ ತೀರ್ಪುಗಾರರ ತಂಡದಲ್ಲಿದ್ದರು. ನಟಿ ಮಲೈಕಾ ಅರೋರಾ ಫೈನಲ್ ಸ್ಪರ್ಧೆಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು.
ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ ಸಮುದ್ರಪಾಲಾದ ಘಟನೆ ಉತ್ತರ…
ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…
ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…
ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…
ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…