Featured

ಮೀನುಗಾರರ ಸಾಲಮನ್ನ ನಿರ್ಣಯ : ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನಾಡಿನ ಸಮಸ್ತ ಮೀನುಗಾರ ಬಂಧುಗಳ ವತಿಯಿಂದ ಅಭಿನಂದನೆ ಸಲ್ಲಿಸಿದ ಯಶಪಾಲ ಸುವರ್ಣ -Vishwanews24

ಉಡುಪಿ: ಮೀನುಗಾರರ ಸಾಲಮನ್ನದ ನಿರ್ಣಯವನ್ನು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಕೈಗೊಂಡಿರುವುದು ಕೈಗೊಂಡಿರುವುದು ಮೀನುಗಾರರ ಮೇಲೆ ಅವರಿಗಿರುವ ಕಾಳಜಿಯನ್ನು ವ್ಯಕ್ತಪಡಿಸುತ್ತದೆ ಎಂದು ಮೀನುಗಾರ ಮುಖಂಡ ಯಶಪಾಲ ಸುವರ್ಣ ತಿಳಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳು ಕಳೆದ ಬಾರಿ ಚುನಾವಣಾ ಸಮಯದಲ್ಲಿ ಕರಾವಳಿಗರಿಗೆ ಕೊಟ್ಟ ಮಾತನ್ನು ನೆನಪಿಟ್ಟುಕೊಂಡು ಈಗ ಪೂರೈಸಿದ್ದಾರೆ ಅವರಿಗೆ ನಾಡಿನ ಸಮಸ್ತ ಮೀನುಗಾರ ಬಂಧುಗಳ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ.

ಕರಾವಳಿಯ ಬಹುತೇಕ ಮೀನುಗಾರರು ಸ್ಥಳೀಯ ಸಹಕಾರಿ ಸಂಘಗಳಲ್ಲಿ ಸಂಘಗಳಲ್ಲಿ ಸಾಲ ಮಾಡಿರುತ್ತಾರೆ ಸುಮಾರು 70ಕ್ಕೂ ಅಧಿಕ ಸಹಕಾರಿ ಸಂಘಗಳು ಮೀನುಗಾರರ ಶ್ರೇಯೋಭಿವೃದ್ಧಿಗೆ ದುಡಿಯುತ್ತಿವೆ ಇದೀಗ ಕೇವಲ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ವಷ್ಟೇ ಮನ್ನಾ ಮಾತ್ರ ಘೋಷಣೆಯಾಗಿದ್ದು,ಮಾನ್ಯ ಮುಖ್ಯಮಂತ್ರಿಗಳು ಸಹಕಾರಿ ಸಂಘಗಳ ಸಾಲವನ್ನೂ ಕೂಡ ಮನ್ನಾ ಮಾಡಬೇಕು ಎಂದು ಅವರು ವಿನಂತಿಸಿದ್ದಾರೆ.

ಕರಾವಳಿಯ ಮೀನುಗಾರ ಸಮುದಾಯದ ವ್ಯಕ್ತಿಗಳೇ ಮಂತ್ರಿ ಸ್ಥಾನವನ್ನು ಅಲಂಕರಿಸಿ ಅಧಿಕಾರವನ್ನು ಅನುಭವಿಸಿದ್ದರೂ ಮೀನುಗಾರರಿಗೆ ಅವರು ನೀಡಿದ ಕೊಡುಗೆ ದೊಡ್ಡ ಶೂನ್ಯ. ಕನಿಷ್ಠಪಕ್ಷ ಮೀನುಗಾರರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನವೂ ಅವರಿಂದ ನಡೆದಿರಲಿಲ್ಲ ಎಂದರು.

ಮೀನುಗಾರರು ಹಲವು ದಶಕಗಳಿಂದ ತಮ್ಮ ಹಲವಾರು ಸಮಸ್ಯೆಗಳ ಬಗ್ಗೆ ಮನವಿಪತ್ರಗಳನ್ನು ಕೊಡುತ್ತಾ ಬಂದಿದ್ದರೂ ಅದರಲ್ಲಿ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಮಾನ್ಯ ಯಡಿಯೂರಪ್ಪ ಅವರು ಮೀನುಗಾರರ ಮೇಲೆ ಇರಿಸಿರುವ ಕಾಳಜಿಯನ್ನು ಕಂಡಾಗ ಈ ಬಾರಿ ನಮ್ಮ ಆಶಯಗಳು ಈಡೇರ ಬಹುದು ಎಂಬ ಆಶಾಭಾವನೆ ಮೂಡಿದೆ. ಕೂಡಲೆ ನಮ್ಮ ಮೀನುಗಾರರ ನಿಯೋಗ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಗ್ರ ಮೀನುಗಾರಿಕಾ ನೀತಿಯ ಬಗ್ಗೆ ಚರ್ಚಿಸಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Vishwa News 24

Recent Posts

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ – vishwanews24

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ ಉಡುಪಿ :…

2 hours ago

ಆರೆಸ್ಸೆಸ್ ಅನ್ನು ಹಿಂದೂ ಧರ್ಮಕ್ಕೆ ಹೋಲಿಸಿರುವುದು ಖಂಡನೀಯ: ಬಿ.ಕೆ. ಹರಿಪ್ರಸಾದ್ – vishwanews24

"ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್…

2 hours ago

ಕೊಕ್ಕಡ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕೊಕ್ಕಡ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಕೊಕ್ಕಡ,: ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ…

2 hours ago

NEET (UG) Re-Exam 2026:  ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ – vishwanews24

NEET (UG) Re-Exam 2026:  ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ ನವದೆಹಲಿ: ನೀಟ್ (NEET-UG 2026) ಮರು ಪರೀಕ್ಷೆಯನ್ನು ಸಂಪೂರ್ಣ…

2 hours ago

NEET (UG) Re-Exam 2026:  ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ – vishwanews24

NEET (UG) Re-Exam 2026:  ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ ನವದೆಹಲಿ: ನೀಟ್ (NEET-UG 2026) ಮರು ಪರೀಕ್ಷೆಯನ್ನು ಸಂಪೂರ್ಣ…

3 hours ago

ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜೂ. 19 ರಂದು ರಾಹುಲ್ ಗಾಂಧಿ ಜನ್ಮದಿನಾಚರಣೆ – vishwanews24

ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜೂ. 19 ರಂದು ರಾಹುಲ್ ಗಾಂಧಿ ಜನ್ಮದಿನಾಚರಣೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾಂಗ್ರೆಸ್…

3 hours ago