ಮೇಷ ರಾಶಿ
ಮೇಷ ರಾಶಿಯಲ್ಲಿ ಜನಿಸಿದವರು ಈ ದಿನ ಮಿಶ್ರ ಫಲವನ್ನು ಅನುಭವಿಸುವಿರಿ. ಷಷ್ಠ ಸ್ಥಾನದಲ್ಲಿ ಚಂದ್ರನ ಪ್ರಭಾವದಿಂದ ಈ ರೀತಿಯ ಫಲಗಳು ಉಂಟಾಗುವುದು. ಶುಭ ಫಲಗಳೊಂದಿಗೆ ಅಶುಭ ಫಲಗಳು ಹೆಚ್ಚಾಗಿ ಕಂಡುಬರುತ್ತದೆ. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಎಚ್ಚರವಿರಲಿ. ಭಾಗ್ಯದ ವಿಚಾರದಲ್ಲಿ ಅನುಕೂಲವಾಗುವುದು. ಧನಾತ್ಮಕ ಚಿಂತನೆಯಿಂದ ಈ ದಿನ ಒಳಿತನ್ನು ಕಾಣುವಿರಿ. ಜೀವನದಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಅರಿತು ಮುನ್ನಡೆಯಿರಿ.
ವೃಷಭ ರಾಶಿ
ವೃಷಭರಾಶಿಯಲ್ಲಿ ಜನಿಸಿದವರಿಗೆ ಅತ್ಯಂತ ಶುಭದಾಯಕವಾದ ದಿನ. ಸಂಜೆಯ ನಂತರ ಆರೋಗ್ಯದಲ್ಲಿ ಸಮಸ್ಯೆ ಕಂಡುಬರಬಹುದು. ಬಹು ಮಹತ್ವದ ವ್ಯಕ್ತಿಯೊಬ್ಬರನ್ನು ಇಂದು ಭೇಟಿ ಮಾಡಲಿದ್ದೀರಿ. ಇದರಿಂದ ನಿಮ್ಮ ದೈನಂದಿನ ವ್ಯಾಪಾರ-ವ್ಯವಹಾರಗಳಿಗೆ ಅನುಕೂಲವಾಗುವುದು. ಮಕ್ಕಳ ಸಲುವಾಗಿ ಪಡೆದ ಸಾಲವನ್ನು ತೀರಿಸುವಿರಿ ಮತ್ತು ಮಕ್ಕಳ ಮೆಚ್ಚುಗೆಗೆ ಪಾತ್ರರಾಗುವಿರಿ. ವೈಯಕ್ತಿಕ ಜೀವನವೂ ಚೆನ್ನಾಗಿರುವುದು ಆದರೆ ನಿಮ್ಮ ಹಾಗೂ ಸಂಗಾತಿಯ ಮಧ್ಯೆ ಕಲಹಗಳು ಭಿನ್ನಾಭಿಪ್ರಾಯಗಳು ಬರದಂತೆ ನೋಡಿಕೊಳ್ಳಿ.
ಮಿಥುನ ರಾಶಿ
ಕೋರ್ಟು ವಿಚಾರದಲ್ಲಿನ ಪ್ರಕರಣದಲ್ಲಿ ಗೆಲುವಿನ ದಾರಿಗಳು ಕಂಡುಬರುವುದು. ಆದರೆ ಇಂದೇ ಅಂತಿಮ ತೀರ್ಪು ಹೊರಬರುವುದಿಲ್ಲ. ಒಂದು ಹಂತದ ಗೆಲುವು ನಿಮ್ಮದಾಗುವುದರಿಂದ ಸಂತೋಷ ಉಂಟಾಗುವುದು. ಈ ದಿನ ಒಂದು ರೀತಿಯ ಆಲಸ್ಯ ಉಂಟಾಗುವುದು. ಕುಟುಂಬ ಸಂಬಧೀ ಸಮಸ್ಯೆಗಳು ನಿಮ್ಮನ್ನು ಒತ್ತಡಕ್ಕೆ ಸಿಲುಕಿಸಬಹುದು. ಆದ್ದರಿಂದ ಈ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸಲು ಪ್ರಯತ್ನಿಸಿ, ಇಲ್ಲವಾದರೆ ಮುಂದೆ ಸಮಸ್ಯೆಗಳು ಹೆಚ್ಚಾಗಬಹುದು. ಆಂಜನೇಯನ ಸ್ಮರಣೆ ಮಾಡಿದರೆ ಒಳ್ಳೆಯದು.
ಕಟಕ ರಾಶಿ
ಜೀವನದಲ್ಲಿನ ಏರು-ಪೇರುಗಳು ಮನುಷ್ಯನ ನಿಜಗುಣವನ್ನು ಹೊರ ಜಗತ್ತಿಗೆ ಪ್ರಕಟಿಸಲು ಸಹಕಾರಿಯಾಗುವುದು. ಹಾಗಾಗಿ ಈ ದಿನ ಕಷ್ಟ ಎಂದು ತಲೆಮೇಲೆ ಕೈಹೊತ್ತು ಕೂಡುವುದು ಸುಸಂಸ್ಕೃತರ ಕೆಲಸವಲ್ಲ. ನಿಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿರಿ. ಅಪಾಯಗಳನ್ನು ಸ್ವೀಕರಿಸಿ, ಧೈರ್ಯದಿಂದ ಮುನ್ನಡೆಯಿರಿ. ಇದು ಕಠಿಣವೆನಿಸಿದರೂ ಕೊನೆಯಲ್ಲಿ ನೀವು ತೆಗೆದುಕೊಳ್ಳುವ ಕ್ರಮಗಳಿಂದ ಪ್ರಯೋಜನ ಪಡೆಯುವಿರಿ. ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟಂತೆ ಶಾಂತವಾಗಿರುವುದು ಒಳ್ಳೆಯದು.ಹಣಕಾಸಿಗೆ ಸಂಬಂಧಪಟ್ಟಂತೆ ಸ್ವಲ್ಪ ಮುಗ್ಗಟ್ಟನ್ನು ಅನುಭವಿಸಿದರೂ ಇತರ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವಿರಿ.
ಸಿಂಹ ರಾಶಿ
ಉದ್ರೇಕ, ಕೋಪಗಳನ್ನು ಸೃಷ್ಟಿಸುವ ಜನರೇ ಬಹುತೇಕ ಇಂದು ನಿಮ್ಮ ಎದುರಾಗುವರು. ಆದಷ್ಟು ತಾಳ್ಮೆ ಕಳೆದುಕೊಳ್ಳದಿರಿ. ಹಿರಿಯರ ಸಕಾಲಿಕ ಹಿತನುಡಿಯಿಂದ ಈ ದಿನದ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೌಟುಂಬಿಕ ವಿಚಾರಗಳಲ್ಲಿ ಸಂತೋಷವನ್ನು ಪಡೆಯುವಿರಿ. ಇತ್ತೀಚಿನ ತಿಂಗುಳುಗಳಿಂದ ಉಂಟಾಗುತ್ತಿರುವ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕ ಸಾಮರ್ಥ್ಯವನ್ನು ಕುಗ್ಗಿಸುವುದು. ಹಾಗಾಗಿ ಈ ಒತ್ತಡದಿಂದ ದೂರವಿರಲು ವಿಶ್ರಾಂತಿ ಪಡೆಯಿರಿ. ಆಪ್ತರ ಸಲಹೆ ಪಡೆಯಲು ಹಿಂಜರಿಯಬೇಡಿ. ಈ ದಿನ ಪರಮೇಶ್ವರನ ಸ್ಮರಣೆ ಮಾಡಿ.
ಕನ್ಯಾ ರಾಶಿ
ಈ ದಿನ ಧನಲಾಭಕ್ಕೆ ಅವಕಾಶವಿದೆ. ಆ ಹಣವನ್ನು ಇಂದೇ ಉಪಯೋಗಿಸಿಕೊಳ್ಳಲು ಆಗುವುದಿಲ್ಲ. ಆದಾಗ್ಯೂ ಬಹು ದಿನದಿಂದ ಬರಬೇಕಿದ್ದ ಹಣದ ಚೆಕ್ ಈ ದಿನ ಕೈಸೇರಿ ಸಂತೋಷಗೊಳ್ಳುವಿರಿ. ಹಾಗಂತ ನಿತ್ಯ ಕಾಯಕದಲ್ಲಿ ಉಡಾಫೆ ಬೇಡ. ಎಲ್ಲಾ ಕಾರ್ಯಗಳಲ್ಲೂ ಯಶಸ್ಸನ್ನು ಪಡೆಯುವ ದಿನವಿದು. ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಯೋಚನೆ ಮಾಡಿ. ಇತರರ ಸಲಹೆ ಪಡೆದು ಮುಂದುವರಿಯುವುದು ಉತ್ತಮ. ಗೊಂದಲದ ಭಾವನೆಗಳು ಅನೇಕ ತಪ್ಪುಗಳಿಗೆ ಕಾರಣವಾಗಬಹುದು. ನಿಮ್ಮ ಸಂಯಮವನ್ನು ಬೆಳೆಸಿಕೊಳ್ಳದಿದ್ದಲ್ಲಿ ಅನುಮಾನಗಳು, ಅಭದ್ರತೆಗಳು ಕಾಡಬಹುದು. ಪರಿಸ್ಥಿತಿಯ ನಿಯಂತ್ರಣವನ್ನು ಸಂಪೂರ್ಣ ಕಳೆದುಕೊಳ್ಳಬಹುದು.
ತುಲಾ ರಾಶಿ
ಮನಸ್ಸಿನ ನೆಮ್ಮದಿ ಕೆಡಿಸುವ ಸಹೋದ್ಯೋಗಿಗಳು ಇಲ್ಲವೆ ಸಂಗಾತಿಯ ಪ್ರಶ್ನೆಗಳಿಗೆ ಸಾವಧಾನದಿಂದ ಉತ್ತರಿಸಿ. ಕೋಪವು ಅನರ್ಥಕ್ಕೆ ದಾರಿ ಎಂಬುದು ಈ ಹಿಂದೆ ಹಲವು ಬಾರಿ ನಿಮಗೆ ಮನವರಿಕೆ ಆಗಿರುವುದು. ತಾಳ್ಮೆಯಿಂದಿರಿ. ನೀವು ಕಷ್ಟಪಟ್ಟು ಮಾಡುವ ಕೆಲಸಕ್ಕೆ ಈ ದಿನ ಪ್ರತಿಫಲವನ್ನು ಪಡೆಯುವಿರಿ. ತುಲಾ ರಾಶಿಯಲ್ಲಿ ಜನಿಸಿದವರು ಈ ದಿನ ಹನುಮಂತನ ಸ್ಮರಣೆ ಮಾಡಿ. ಕೆಲವೊಂದು ತೊಂದರೆಗೆ ಸಿಲುಕಿಸುವಂತ ಸನ್ನಿವೇಶಗಳು ಎದುರಾಗಬಹುದು, ನೀವು ಶಾಂತವಾಗಿದ್ದು ಈ ಸಮಸ್ಯೆಗಳನ್ನು ನಿರ್ವಹಿಸಲು ಪ್ರಯತ್ನಿಸಿ.
ವೃಶ್ಚಿಕ ರಾಶಿ
ವ್ಯವಹಾರದ ವಿಚಾರದಲ್ಲಿ ಅವಸರ ತೋರಬೇಡಿ. ಸಾವಧಾನದ ಹೆಜ್ಜೆಗಳನ್ನು ಇಡುವುದರಿಂದ ಯಶಸ್ವಿ ಉದ್ಯಮಿ ಆಗುವಿರಿ. ಸಮಾಜದಲ್ಲಿ ಕೀರ್ತಿ ಗೌರವಗಳು ಕಂಡು ಬರುವುದು. ಕುಲದೇವರ ಸ್ಮರಣೆ ಮಾಡಿರಿ. ಈ ದಿನ ವೃಥಾ ತಿರುಗಾಟದ ಜೊತೆಗೆ ದೇಹಾಲಸ್ಯವೂ ನಿಮ್ಮನ್ನು ಕಾಡುವುದು. ಈ ದಿನದ ಪರಿಸ್ಥಿತಿಗಳು ಆತ್ಮಾವಲೋಕನ ಮಾಡಿಕೊಳ್ಳಲು ಸೂಕ್ತವಾಗಿದೆ. ನಿಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸಿ. ಯಾವುದೇ ಅಡೆತಡೆಯಿಲ್ಲದೇ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಬೇಕೆಂದರೆ ಗುರುವಿನ ಸ್ಮರಣೆಯನ್ನು ಮಾಡಿ.
ಧನಸ್ಸು ರಾಶಿ
ಆತ್ಮಸ್ಥೈರ್ಯದಿಂದ ಮಾಡುವ ಕೆಲಸ ಕಾರ್ಯಗಳಿಂದ ಯಶಸ್ಸನ್ನು ಹೊಂದುವಿರಿ. ನಿಮ್ಮ ಆತ್ಮವಿಶ್ವಾಸವು ಈ ದಿನ ಹೆಚ್ಚಾಗುವುದರ ಜೊತೆಗೆ ವ್ಯಕ್ತಿಗಳ ಮೇಲೆ ಕೆಲವೊಂದು ವಿಷಯಗಳ ಮೇಲೆ ಸಕಾರಾತ್ಮಕ ಭಾವನೆಯನ್ನು ಹೊಂದುವಿರಿ. ಸ್ನೇಹಿತರು ನಿಮ್ಮನ್ನು ಸಂದರ್ಶಿಸುವರು. ಮನೆಯ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಆರ್ಥಿಕ ಸ್ಥಿತಿ ಉತ್ತಮ. ಈ ದಿನ ನಿಮಗೆ ಲಾಭದಾಯಕವಾಗಿರುತ್ತದೆ. ಎಲ್ಲಾ ವಿಚಾರದಲ್ಲೂ ಯಶಸ್ಸು ಹಾಗೂ ಏಳಿಗೆಯನ್ನು ಕಾಣುವಿರಿ. ಶುಭದಾಯಕವಾದ ದಿನ ನಿಮ್ಮದಾಗಿರುತ್ತದೆ. ಈ ದಿನ ಹನುಮಂತನ ಸ್ಮರಣೆ ಮಾಡಿದರೆ ಶುಭವಾಗುವುದು.
ಮಕರ ರಾಶಿ
ವಾಹನಗಳಲ್ಲಿ ಸಂಚರಿಸುವಾಗ ರಸ್ತೆಯ ಕಡೆ ಹೆಚ್ಚಿನ ಗಮನವಿರಲಿ. ನೀವು ಸರಿಯಾಗಿ ವಾಹನ ಚಲಾಯಿಸುತ್ತಿದ್ದರೂ ಇತರೆಯವರು ವಾಹನವನ್ನು ಸರಿಯಾಗಿ ಚಲಾಯಿಸುತ್ತಾರೆಂದು ಖಾತ್ರಿ ಇಲ್ಲ. ಪ್ರಯಾಣ ಕಾಲದಲ್ಲಿ ಲಕ್ಷ್ಮೀನಾರಸಿಂಹ ದೇವರನ್ನು ನೆನೆಯಿರಿ. ಮನಸ್ಸಿನಲ್ಲಿ ಒಂದು ರೀತಿಯ ಗೊಂದಲ ಕಾಡಬಹುದು.
ಕುಂಭ ರಾಶಿ
ಪಾರ್ಟನರ್ ವ್ಯವಹಾರದಲ್ಲಿ ತೊಂದರೆಯುಂಟಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆ ಇದೆ. ನಿಮ್ಮ ಕುಲದೇವರನ್ನು ಮನಸಾ ಸ್ಮರಿಸಿರಿ. ಮನೆಯಲ್ಲಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ತಲೆದೋರುವ ಸಂಭವವಿರುತ್ತದೆ. ಭಾವನಾತ್ಮಕವಾಗಿ ಆವೇಶಕ್ಕೆ ಒಳಗಾಗದಿರಿ ಹಾಗೂ ಒತ್ತಡದಿಂದಾಗಿ ಸಮಸ್ಯೆಗಳನ್ನು ಸೃಷ್ಟಿಸಬೇಡಿ.
ಮೀನ ರಾಶಿ
ನೀವು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುವಿರಿ. ಆದರೆ ಸಾಧಾರಣ ಫಲ ನಿಮ್ಮದಾಗಿರುತ್ತದೆ. ಮಂಡಿನೋವು ಅತಿಯಾಗಿ ಬಾಧಿಸುವುದರಿಂದ ಸೂಕ್ತ ವೈದ್ಯರ ಸಲಹೆ ಪಡೆಯಿರಿ. ಸದಾ ಚಟುವಟಿಕೆಯಿಂದ ಇದ್ದಲ್ಲಿ ದೈಹಿಕ ಶ್ರಮದ ಅರಿವು ಉಂಟಾಗುವುದಿಲ್ಲ. ಈ ದಿನ ಹನುಮಂತನ ಸ್ಮರಣೆ ಮಾಡಿದರೆ ಶುಭವಾಗುವುದು.
ಗಾನಕೋಗಿಲೆ ಎಸ್.ಜಾನಕಿ ವಿಧಿವಶ ಮೈಸೂರು : ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಚಿತ್ರರಂಗದಲ್ಲಿ ಅದೆಷ್ಟೋ ಜನರ ಮನಗೆದ್ದಿದ್ದ ಹಿನ್ನಲೆ ಗಾಯಕಿ ಎಸ್.ಜಾನಕಿ…
ಬೃಹತ್ ಡ್ರಗ್ ಜಾಲ ಪತ್ತೆ ಮಾಡಿದ ಪೊಲೀಸರ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ : ಸಿಎಂ ಡಿ.ಕೆ.ಶಿವಕುಮಾರ್…
ನಾನು ಕಂಬಳ ವಿರೋಧಿಸುತ್ತಿಲ್ಲ, ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು : ಯದುವೀರ್ ಒಡೆಯರ್ ಸ್ಪಷ್ಟನೆ ಮೈಸೂರು: "ನಾನು ಕಂಬಳವನ್ನು…
ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್‌ಎಎಫ್ ರಚನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ ಉಡುಪಿ:…
ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್’ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ : ಸಚಿವ ಈಶ್ವರ್ ಖಂಡ್ರೆ ಬೆಂಗಳೂರು :ರಾಜ್ಯದಲ್ಲಿ ಬಹುನಿರೀಕ್ಷಿತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು…
ಕೇಂದ್ರದಿಂದ ಗುಡ್ ನ್ಯೂಸ್ : ಮಧುಮೇಹ ಸೇರಿ 39 ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ ನವದೆಹಲಿ: ಪ್ರತಿ ತಿಂಗಳು ಔಷಧಿಗಳಿಗೆ…