Featured

ಮುಂದಿನ ದಿನಗಳಲ್ಲಿ ನಿಜವಾದ ರಾಜಕಾರಣ ಆರಂಭವಾಗಲಿದೆ : ನಿಖಿಲ್ ಕುಮಾರಸ್ವಾಮಿ -Vshwanews24

ಮುಂದಿನ ದಿನಗಳಲ್ಲಿ ನಿಜವಾದ ರಾಜಕಾರಣ ಆರಂಭವಾಗಲಿದೆ : ನಿಖಿಲ್ ಕುಮಾರಸ್ವಾಮಿ -Vshwanews24

ಬೆಂಗಳೂರು: ರಾಜ್ಯದಲ್ಲಿ ಇಲ್ಲಿಯವರೆಗೂ ಒಂದು ರೀತಿಯ ರಾಜಕಾರಣ ನಡೆಯಿತು. ಇನ್ನು ಮುಂದಿನ ದಿನಗಳಲ್ಲಿ ನಿಜವಾದ ರಾಜಕಾರಣ ಆರಂಭವಾಗಲಿದೆ. ಪಕ್ಷದ ಯಾರೊಬ್ಬರೂ ನಿರುತ್ಸಾಹಿಗಳಾಗದೆ ಕೆಲಸ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಕ್ಷದ ಯುವ ಸಂಘಟನಾ ಸಭೆಯಲ್ಲಿ ಮಾತನಾಡಿದ ನಿಖಿಲ್, ಜೆಡಿಎಸ್ ಪಕ್ಷದ ಬಗ್ಗೆ ಹಲವು ರೀತಿಯ ಚರ್ಚೆಗಳಾಗುತ್ತಿವೆ. ಯಾವುದೇ ಕಾರಣಕ್ಕೂ ಪಕ್ಷವನ್ನ ವಿಲೀನ ಮಾಡುವ ಸಂದರ್ಭ ಬರುವುದಿಲ್ಲ. ಯಾವ ಪಕ್ಷದ ಜೊತೆಗೂ ನಮ್ಮ ಪಕ್ಷವನ್ನ ವಿಲೀನ ಮಾಡುವುದಿಲ್ಲ. ಇದನ್ನ ನಾನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ ಎಂದರು.

ಯಾರೂ ಉತ್ಸಾಹ ಕಳೆದುಕೊಳ್ಳಬೇಡಿ. ನಾವು ನಿಮ್ಮ ಜೊತೆ ಇದ್ದೇವೆ. ತಳಮಟ್ಟದಲ್ಲಿ ಪಕ್ಷ ಸಾಕಷ್ಟು ಸದೃಢವಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆಯೇ ಇದಕ್ಕೆ ಸಾಕ್ಷಿ ಎಂದು ನಿಖಿಲ್ ಹೇಳಿದರು.

ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ಬರುವ ಚುನಾವಣೆಗಳಲ್ಲಿ ಯುವಕರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ. ಮತ್ತೊಮ್ಮೆ ಕುಮಾರಣ್ಣ ಸಿಎಂ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ‌ ಶ್ರಮವಹಿಸಿ ‌ಪಕ್ಷ ಸಂಘಟಿಸಬೇಕಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಮುಂಬರುವ ಚುನಾವಣೆಗಳಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು ಎಂದ ಅವರು, ಮತ್ತೊಮ್ಮೆ ಕುಮಾರಣ್ಣ ಸಿಎಂ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ‌ ಶ್ರಮವಹಿಸಿ ‌ಪಕ್ಷ ಸಂಘಟಿಸಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಮಂಡ್ಯದಲ್ಲಿ ನಾನು ಸೋತ್ತಿದ್ರೂ ಅಲ್ಲಿನ ಜನರು ನಮ್ಮ ಕೈ ಬಿಟ್ಟಿಲ್ಲ ಇದಕ್ಕೆ ಉದಾಹರಣೆ ಅಲ್ಲಿನ ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಎಂದು ಹೇಳಿದರು.

JDS ನಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ, ಸೋಷಿಯಲ್ ಮೀಡಿಯಾದ ಪರಿಣಾಮಕಾರಿ ಬಳಕೆ ಬಗ್ಗೆ ಸಹ ಚರ್ಚೆ ಮಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

http://ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತೇ. ಇದರಲ್ಲಿ ಯಾವುದೇ ಅನುಮಾನ ಬೇಡ : ಸಿದ್ದರಾಮಯ್ಯ -Vishwanews24

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

24 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

24 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

2 days ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

2 days ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

2 days ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

2 days ago