Featured

ಮುಂದಿನ ವರ್ಷ ನೀವು 2020ನೇ ಇಸವಿ ಬರೆಯುವ ಮುನ್ನ ಎಚ್ಚರ !! Vishwanews24

ಬೆಂಗಳೂರು: ಇನ್ನೆರಡು ದಿನದಲ್ಲಿ 2019ನೇ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮೈಮರೆಯುವ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ. ಯಾಕೆಂದರೆ ನೀವು ಈ ವರ್ಷ ಬರೆಯುವ ದಿನಾಂಕದಲ್ಲಿ ಸ್ವಲ್ಪ ಯಾಮಾರಿದರೂ ವಂಚಕರಿಗೆ ಹಬ್ಬವಾಗಿ ಪರಿಣಮಿಸಬಹುದು.

ಬ್ಯಾಂಕಿನ ವ್ಯವಹಾರ ಅಥವಾ ಪ್ರಮುಖ ದಾಖಲೆ ಪತ್ರಗಳಲ್ಲಿ ಸಹಿ ಹಾಕುವ ಸಂದರ್ಭ ಎಲ್ಲರೂ ಹೆಚ್ಚಾಗಿ ಅಂದಿನ ದಿನಾಂಕ ಬರೆಯುವುದು ಸಹಜ ಮತ್ತು ಕೆಲವೊಮ್ಮೆ ಅನಿವಾರ್ಯ ಕೂಡಾ. ಈ ವೇಳೆ ಅನೇಕರು ಮಾಡುವ ಸಾಮಾನ್ಯ ವಾಗಿ ವರ್ಷವನ್ನು ಶಾರ್ಟ್ ಕಟ್‌ನಲ್ಲಿ ಬರೆಯುತ್ತಾರೆ. ಉದಾಹರಣೆಗೆ 28/12/2019ರ ದಿನಾಂಕವನ್ನು 28/12/19 ಎಂದು ಬರೆಯುತ್ತಾರೆ. ಆದರೆ ಇನ್ಮುಂದೆ ಈ ಅಭ್ಯಾಸ ಬದಲಾಯಿಸುವುದು ಓಳಿತು. ಯಾಕೆಂದರೆ 2020ರ ವರ್ಷವನ್ನು 20 ಎಂದು ಶಾರ್ಟ್‌ಕರ್ಟ್‌ ಬರೆದರೆ ತೊಂದರೆಗೆ ಸಿಲುಕಬಹುದು.

2020ರಲ್ಲಿ ದಿನಾಂಕವನ್ನು ಉದಾಹರಣೆಗೆ, 31.01.2020 ಎಂದು ಪೂರ್ಣವಾಗಿ ಬರೆಯಬೇಕು. 31.01.20 ಎಂದು ಬರೆಯಬಾರದು.

ಯಾಕೆಂದರೆ ಒಂದುವೇಳೆ ನೀವು 01-01-20 ಎಂದು ಬರೆದಿರಿ ಎಂದಿಟ್ಟುಕೊಳ್ಳಿ ಆವಾಗ 20ರ ಎದುರು ಯಾವ ಇಸವಿಯನ್ನಾದರೂ ನಮೂದಿಸಲು ಸಾಧ್ಯವಿರುತ್ತದೆ. 01-01-20ನ್ನು ತಿದ್ದಿ 2000 ನೇ ಇಸವಿಯಿಂದ 2019ರವರೆಗೆ ಅಥವಾ 2020ರಿಂದ 2099ರವರೆಗೆ ಯಾವ ಇಸವಿಯನ್ನು ಬೇಕಾದರೂ ಬರೆದುಕೊಳ್ಳಲು ಅವಕಾಶವಿರುತ್ತದೆ. ಆದ್ದರಿಂದ 2020 ನ್ನು ಪೂರ್ಣವಾಗಿ ನಮೂದಿಸಿದರೆ ಸುರಕ್ಷಿತವಾಗಿರಬಹುದು..

ಹಾಗಾಗಿ ಚೆಕ್ ಗಳಲ್ಲಿ, ಒಪ್ಪಂದ ಪತ್ರಗಳಲ್ಲಿ ಅಥವಾ ಇನ್ಯಾವುದೇ ಪ್ರಮುಖ ದಾಖಲೆಗಳಲ್ಲಿ ಮುಂದಿನ ವರ್ಷ ಇಸವಿ ಬರೆಯುವಾಗ ಎಚ್ಚರಿಕೆಯಿಂದಿರಿ ಮತ್ತು ಪೂರ್ಣ ಇಸವಿಯನ್ನು ಬರೆಯುವುದು ಕಾನೂನು ಸಹಿತ ಎಲ್ಲಾ ದೃಷ್ಟಿಯಿಂದಲೂ ಸುರಕ್ಷಿತ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago