ಬೆಂಗಳೂರು: ಇನ್ನೆರಡು ದಿನದಲ್ಲಿ 2019ನೇ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮೈಮರೆಯುವ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ. ಯಾಕೆಂದರೆ ನೀವು ಈ ವರ್ಷ ಬರೆಯುವ ದಿನಾಂಕದಲ್ಲಿ ಸ್ವಲ್ಪ ಯಾಮಾರಿದರೂ ವಂಚಕರಿಗೆ ಹಬ್ಬವಾಗಿ ಪರಿಣಮಿಸಬಹುದು.
ಬ್ಯಾಂಕಿನ ವ್ಯವಹಾರ ಅಥವಾ ಪ್ರಮುಖ ದಾಖಲೆ ಪತ್ರಗಳಲ್ಲಿ ಸಹಿ ಹಾಕುವ ಸಂದರ್ಭ ಎಲ್ಲರೂ ಹೆಚ್ಚಾಗಿ ಅಂದಿನ ದಿನಾಂಕ ಬರೆಯುವುದು ಸಹಜ ಮತ್ತು ಕೆಲವೊಮ್ಮೆ ಅನಿವಾರ್ಯ ಕೂಡಾ. ಈ ವೇಳೆ ಅನೇಕರು ಮಾಡುವ ಸಾಮಾನ್ಯ ವಾಗಿ ವರ್ಷವನ್ನು ಶಾರ್ಟ್ ಕಟ್‌ನಲ್ಲಿ ಬರೆಯುತ್ತಾರೆ. ಉದಾಹರಣೆಗೆ 28/12/2019ರ ದಿನಾಂಕವನ್ನು 28/12/19 ಎಂದು ಬರೆಯುತ್ತಾರೆ. ಆದರೆ ಇನ್ಮುಂದೆ ಈ ಅಭ್ಯಾಸ ಬದಲಾಯಿಸುವುದು ಓಳಿತು. ಯಾಕೆಂದರೆ 2020ರ ವರ್ಷವನ್ನು 20 ಎಂದು ಶಾರ್ಟ್‌ಕರ್ಟ್ ಬರೆದರೆ ತೊಂದರೆಗೆ ಸಿಲುಕಬಹುದು.
2020ರಲ್ಲಿ ದಿನಾಂಕವನ್ನು ಉದಾಹರಣೆಗೆ, 31.01.2020 ಎಂದು ಪೂರ್ಣವಾಗಿ ಬರೆಯಬೇಕು. 31.01.20 ಎಂದು ಬರೆಯಬಾರದು.
ಯಾಕೆಂದರೆ ಒಂದುವೇಳೆ ನೀವು 01-01-20 ಎಂದು ಬರೆದಿರಿ ಎಂದಿಟ್ಟುಕೊಳ್ಳಿ ಆವಾಗ 20ರ ಎದುರು ಯಾವ ಇಸವಿಯನ್ನಾದರೂ ನಮೂದಿಸಲು ಸಾಧ್ಯವಿರುತ್ತದೆ. 01-01-20ನ್ನು ತಿದ್ದಿ 2000 ನೇ ಇಸವಿಯಿಂದ 2019ರವರೆಗೆ ಅಥವಾ 2020ರಿಂದ 2099ರವರೆಗೆ ಯಾವ ಇಸವಿಯನ್ನು ಬೇಕಾದರೂ ಬರೆದುಕೊಳ್ಳಲು ಅವಕಾಶವಿರುತ್ತದೆ. ಆದ್ದರಿಂದ 2020 ನ್ನು ಪೂರ್ಣವಾಗಿ ನಮೂದಿಸಿದರೆ ಸುರಕ್ಷಿತವಾಗಿರಬಹುದು..
ಹಾಗಾಗಿ ಚೆಕ್ ಗಳಲ್ಲಿ, ಒಪ್ಪಂದ ಪತ್ರಗಳಲ್ಲಿ ಅಥವಾ ಇನ್ಯಾವುದೇ ಪ್ರಮುಖ ದಾಖಲೆಗಳಲ್ಲಿ ಮುಂದಿನ ವರ್ಷ ಇಸವಿ ಬರೆಯುವಾಗ ಎಚ್ಚರಿಕೆಯಿಂದಿರಿ ಮತ್ತು ಪೂರ್ಣ ಇಸವಿಯನ್ನು ಬರೆಯುವುದು ಕಾನೂನು ಸಹಿತ ಎಲ್ಲಾ ದೃಷ್ಟಿಯಿಂದಲೂ ಸುರಕ್ಷಿತ.
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…