ಮುಂಬಯಿ: ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಹಿಳೆಯರು ಏನೇನೆಲ್ಲಾ ಮಾಡಿಕೊಳ್ಳುತ್ತಾರೆ, ಇದರಿಂದ ಕೆಲವರ ಸೌಂದರ್ಯ ಹೆಚ್ಚಾದರೆ ಇನ್ನು ಕೆಲವರದ್ದು ಇದ್ದ ಸೌಂದರ್ಯವೂ ಹೋಗಿ ಇನ್ನೇನೋ ಆಗಿ ಬಿಡುತ್ತದೆ, ಅದರಂತೆ ಮಹಾರಾಷ್ಟ್ರದ ಮಹಿಳೆಯೊಬ್ಬರು ತನ್ನ ಮುಖದ ಸೌಂದರ್ಯ ಹೆಚ್ಚಿಸಲು ಬರೋಬ್ಬರಿ 17,500 ಖರ್ಚು ಮಾಡಿ ಮುಖದ ಚರ್ಮ ಸುಟ್ಟಿಸಿಕೊಂಡ ಘಟನೆ ನಡೆದಿದೆ.
ಕೆಲವೊಮ್ಮೆ ನಾವು ಹಚ್ಚಿಕೊಳ್ಳುವ ಸೌಂದರ್ಯ ವರ್ಧಕಗಳು ನಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತವೆ ಅದೇ ರೀತಿ ಮಹಾರಾಷ್ಟ್ರದ ಮಹಿಳೆಯ ಮುಖಕ್ಕೆ ಮಾಡಿದ ಫೇಷಿಯಲ್ ನಿಂದ ಮಹಿಳೆಯ ಮುಖದ ಚರ್ಮವೇ ಸುಟ್ಟು ಹೋಗಿದೆ.
ಘಟನೆಯ ವಿವರ:
ಜೂನ್ 17 ರಂದು ಮಹಿಳೆಯೊಬ್ಬರು ಅಂಧೇರಿಯ ಕಾಮಧೇನು ಶಾಪಿಂಗ್ ಸೆಂಟರ್‌ನಲ್ಲಿರುವ ಗ್ಲೋ ಲಕ್ಸ್ ಸಲೂನ್ ಗೆ ತೆರಳಿ 17,500 ರೂಪಾಯಿ ಮೌಲ್ಯದ ಹೈಡ್ರಾಫೇಶಿಯಲ್ ಚಿಕಿತ್ಸೆ ಪಡೆದುಕೊಂಡಿದ್ದರು ಚಿಕಿತ್ಸೆ ಪಡೆದು ಮನೆಗೆ ಬಂದ ಮಹಿಳೆಗೆ ಮುಖದಲ್ಲಿ ತುರಿಕೆಯ ಅನುಭವಾಗಿದೆ ಅಲ್ಲದೆ ಕೆಲವೇ ಹೊತ್ತಿನಲ್ಲಿ ಮುಖದ ಚರ್ಮ ಸುಟ್ಟು ಹೋಗಿ ವಿರೂಪಗೊಂಡಿದೆ.
ಹೈಡ್ರಾಫೇಶಿಯಲ್ ಎಂಬುದು ವೈದ್ಯಕೀಯ – ದರ್ಜೆಯ ರಿಸರ್ಫೇಸಿಂಗ್ ಚಿಕಿತ್ಸೆಯಾಗಿದ್ದು ಪರವಾನಗಿ ಪಡೆದ ವೈದ್ಯಕೀಯ ವೃತ್ತಿಪರರು, ಪ್ರಮಾಣೀಕೃತ ಹೈಡ್ರಾಫೇಶಿಯಲ್ ಸೌಂದರ್ಯಶಾಸ್ತ್ರಜ್ಞರು ಲಭ್ಯವಿರುವಲ್ಲಿ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ ಆದರೆ ಈ ಬ್ಯೂಟಿ ಪಾರ್ಲರ್ ನಲ್ಲಿ ನುರಿತ ತಜ್ಞರಿಂದಲೇ ಚಿಕಿತ್ಸೆ ನೀಡಲಾಗಿತ್ತೆ ಎಂಬುದು ಪ್ರಶ್ನೆಯಾಗಿದೆ.
ಮಹಿಳೆ ತನ್ನ ಸುಂದರವಾದ ಮುಖದ ಕಳೆಯನ್ನು ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲದೆ ಚಿಕಿತ್ಸೆ ನೀಡಿದ ಬ್ಯೂಟಿ ಪಾರ್ಲರ್ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…