ಉಡುಪಿ: ನೈಜೀರಿಯಾದಿಂದ ಅಕ್ರಮವಾಗಿ ನುಸುಳು ಕೋರರಿಂದ ಎರಡು ಕೆಜಿ ಕೊಕೇನ್ ವಶ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಅನಧಿಕೃತವಾಗಿ ಪ್ಲಾಟ್ ಬಾಡಿಗೆ ಕೊಟ್ಟ ಮಣಿಪಾಲದ ಬಾರ್ ಮಾಲೀಕ, ಹೆರ್ಗ ನಿವಾಸಿಯನ್ನು ಎನ್.ಸಿ.ಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ವ್ಯಕ್ತಿ ಶೀಲ್ ಮೀರಾ ರೋಡ್ ಶಾಹಿ ಹೋಟೆಲ್ ಮೇಲಿರುವ ಶೀತಲ್ ಸಾಯಿ ಸೊಸೈಟಿಯಲ್ಲಿ ಮಾದಕ ವಸ್ತು ಪತ್ತೆ ಪ್ರಕರಣದ ಆರೋಪಿಗಳಿಗೆ ವಾಸ್ತವ್ಯಕ್ಕೆ ಅಕ್ರಮವಾಗಿ ಮನೆ ನೀಡಿದ್ದ ಆರೋಪದಲ್ಲಿ ಮಣಿಪಾಲದ ಹೋಟೆಲ್ ಉದ್ಯಮಿ ದಿನೇಶ್ ಭಾಸ್ಕರ್ ಶೆಟ್ಟಿ ಅವರನ್ನು ಎನ್‌ಸಿಬಿ ಪೊಲೀಸರು ಬಂಧಿಸಿದ್ದರು.
ಬಾರ್ ಮಾಲೀಕ ತನ್ನ ಬಾರ್‌ಗಳಿಗೆ ಡ್ರಗ್ಸ್ ಗಳನ್ನು ಕೂಡ ಇದೇ ಬಂಧಿತ ವ್ಯಕ್ತಿಗಳಿಂದ ಮಣಿಪಾಲಕ್ಕೆ ತರಿಸಿಕೊಂಡು ಅವ್ಯಾಹತವಾಗಿ ಮಾರಾಟ ಮಾಡಿದ್ದಾಗಿ ಎನ್‌ಸಿಬಿ ತನಿಖೆಯಿಂದ ಹೊರಬಂದಿದೆ.
ಸದ್ಯ ಬಾರ್ ಮಾಲೀಕ ಮುಂಬಯಿಯ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಡ್ರಗ್ಸ್ ಪೆಡ್ಲರ್ ಅವರ ಬ್ಯಾಂಕ್ ಖಾತೆಯಲ್ಲಿ ಬಾರ್ ಮಾಲೀಕ ಲಕ್ಷಾಂತರ ರೂ ವಹಿವಾಟು ನಡೆಸಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ದಿನೇಶ್ ಭಾಸ್ಕರ್ ಶೆಟ್ಟಿ ಅವರ ಮನೆಯಲ್ಲಿ ಮಾದಕ ವಸ್ತು ಕಳ್ಳಸಾಗಣೆದಾರರೊಬ್ಬ ಹಲವು ವರ್ಷಗಳಿಂದ ಒಪ್ಪಂದವಿಲ್ಲದೆ ವಾಸವಾಗಿದ್ದರು. ಮಾದಕ ವಸ್ತು ಕಳ್ಳಸಾಗಣೆದಾರರಿಂದ 4 ನಕಲಿ ಪಾಸ್‌ಪೋರ್ಟ್‌ಗಳು ಮತ್ತು ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…