Featured

ಮುಂಬೈ : ಅಧಿಕಾರಕ್ಕಾಗಿ ಅಲ್ಲ , ಹಿಂದುತ್ವದ ಸಿದ್ಧಾಂತ ಮತ್ತು ಮಹಾರಾಷ್ಟ್ರದ ಅಭಿವೃದ್ಧಿಗೆ ಬಿಜೆಪಿ ನಮ್ಮ ಜೊತೆ ಕೈ ಜೋಡಿಸಿದೆ : ನೂತನ ಮುಖ್ಯಮಂತ್ರಿ ಏಕನಾಥ್‌ ಶಿಂಧೆ – Vishwanews24

ಮುಂಬೈ : ಬಿಜೆಪಿ ಅಧಿಕಾರಕ್ಕಾಗಿ ಅಲ್ಲ ಹಿಂದುತ್ವದ ಸಿದ್ಧಾಂತ ಮತ್ತು ಮಹಾರಾಷ್ಟ್ರದ ಅಭಿವೃದ್ಧಿಗೆ ನಮ್ಮ ಜೊತೆಗೆ ಕೈ ಜೋಡಿಸಿದೆ : ನೂತನ ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಮುಂಬೈ: ಬಿಜೆಪಿ ಅಧಿಕಾರಕ್ಕಾಗಿ ಅಲ್ಲ ಹಿಂದುತ್ವದ ಸಿದ್ಧಾಂತ ಮತ್ತು ಮಹಾರಾಷ್ಟ್ರದ ಅಭಿವೃದ್ಧಿಗೆ ನಮ್ಮ ಜೊತೆಗೆ ಕೈ ಜೋಡಿಸಿದೆ, ಬಿಜೆಪಿ ನಮಗೆ ಬೆಂಬಲ‌ ನೀಡಿದ ಕಾರಣದಿಂದಲೇ ನಾವು ಸರ್ಕಾರ ರಚಿಸುವಂತಾಯಿತು ಎಂದು ನೂತನ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹೇಳಿದ್ದಾರೆ.

ಪ್ರಮಾಣ ವಚನ ಸ್ವೀಕಾರದ ಬಳಿಕ ನೀಡಿದ ಮೊದಲ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮಹಾವಿಕಾಸ್ ಅಘಾಡಿ ಸರ್ಕಾರದಲ್ಲಿ ಶಿವಸೇನಾ ಶಾಸಕರು ಕೆಲಸ ಮಾಡಲು ಕಷ್ಟಪಡುತ್ತಿದ್ದರು. ಕಾಂಗ್ರೆಸ್ ಮತ್ತು ಎನ್‌ಸಿಪಿ ಪ್ರಾಬಲ್ಯ ಸಾಧಿಸಿತ್ತು. ಉದ್ದವ್ ಠಾಕ್ರೆ ಹಿಂದುತ್ವದ ವಿಚಾರಣದಲ್ಲಿ ಮೊದಲಿನಂತಿರಲಿಲ್ಲ.

ಹಿಂದುತ್ವಕ್ಕೆ ಶಿವಸೇನಾ ಸೇರಿ ಪಕ್ಷೇತರ ಶಾಸಕರು ಮನ್ನಣೆ ನೀಡಿದರು. ಬಿಜೆಪಿ ಬರೀ ಅಧಿಕಾರಕ್ಕಾಗಿ ಇದನ್ನೆಲ್ಲ ಮಾಡದೇ ಅಭಿವೃದ್ಧಿ ಮತ್ತು ಹಿಂದುತ್ವಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಶಾಸಕರು ಬೆಂಬಲ ನೀಡಿದ್ದಾರೆ. ನನ್ನ ಸಿಎಂ ಮಾಡುವ ಮೂಲಕ ಜನರಿಗೆ ಅಧಿಕಾರ ಮುಖ್ಯವಲ್ಲ ಎಂದು ಸಾಬೀತುಪಡಿಸಿದೆ.

ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯಿರಿ, ಅಭಿವೃದ್ಧಿಯತ್ತ ಕೊಂಡೊಯ್ಯಿರಿ, ಹೊಸ ಕಾರ್ಯಗಳನ್ನು ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಮಹಾರಾಷ್ಟ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬೆಂಬಲ ಇರಲಿದೆ ಎಂದು ಅವರು ಹೇಳಿದ್ದಾರೆ.

ಇದು ಬಹಳ ದೊಡ್ಡ ವಿಷಯ, ಕೇಂದ್ರ ಸರ್ಕಾರ ನಮ್ಮ ಜೊತೆಗೆ ಇದೆ. ಮುಖ್ಯವಾಗಿ ಯಾವುದೇ ತಪ್ಪು ಮಾಡಿಲ್ಲ. ಚುನಾವಣೆ ಪೂರ್ವದಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಇತ್ತು. ನಾವು ಈಗ ಅದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು 200 ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದ ಅವರು, ಫಡ್ನವಿಸ್ ಡಿಸಿಎಂ ಆಗಿರುವುದು ದೊಡ್ಡ ಮನಸ್ಸು ಎಂದಿದ್ದಾರೆ.

Vishwa News 24

Recent Posts

ಅರಿಶಿಣ ಪುಡಿ, ಮಸಾಲೆ ಪುಡಿಗಳಲ್ಲಿ ಸೀಸದ ಅಂಶ ಪತ್ತೆ: ಅಧಿಕೃತ ಪರೀಕ್ಷೆಗೆ ಸರ್ಕಾರ ಆದೇಶ – vishwanews24

ಅರಿಶಿಣಪುಡಿ, ಮಸಾಲೆ ಪುಡಿಗಳಲ್ಲಿ ಸೀಸದ ಅಂಶ ಪತ್ತೆ: ಅಧಿಕೃತ ಪರೀಕ್ಷೆಗೆ ಸರ್ಕಾರ ಆದೇಶ ಬೆಂಗಳೂರು: ದಿನನಿತ್ಯ ಬಳಸುವ ಅರಿಶಿಣಪುಡಿ ಹಾಗೂ…

6 hours ago

ಸಿಎಂ ಅಧಿಕಾರದಲ್ಲಿ ಮುಂದುವರಿಯಲು ಸಿದ್ಧ, ಪದತ್ಯಾಗಕ್ಕೂ ಸಿದ್ಧ:  ಕೆ. ಎನ್ ರಾಜಣ್ಣ ಸ್ಫೋಟಕ ಹೇಳಿಕೆ – vishwanews24

ಸಿಎಂ ಅಧಿಕಾರದಲ್ಲಿ ಮುಂದುವರಿಯಲು ಸಿದ್ಧ, ಪದತ್ಯಾಗಕ್ಕೂ ಸಿದ್ಧ:  ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ ಬೆಂಗಳೂರು: ಮೇ 15ರ ಒಳಗಡೆ ಕಾಂಗ್ರೆಸ್‌…

7 hours ago

ಉಡುಪಿ ಪೊಲೀಸರ ವಿಶೇಷ ಕಾರ್ಯಾಚರಣೆ: ಜಿಲ್ಲೆಯಲ್ಲಿ ಒಟ್ಟು 32 ಅಕ್ರಮ ಹೋಂ ಸ್ಟೇಗಳು ಪತ್ತೆ – vishwanews24

ಉಡುಪಿ ಪೊಲೀಸರ ವಿಶೇಷ ಕಾರ್ಯಾಚರಣೆ: ಜಿಲ್ಲೆಯಲ್ಲಿ ಒಟ್ಟು 32 ಅಕ್ರಮ ಹೋಂ ಸ್ಟೇಗಳು ಪತ್ತೆ ಉಡುಪಿ: ಕೊಡಗು ಜಿಲ್ಲೆಯ ಹೋಂಸ್ಟೇಯೊಂದರಲ್ಲಿ…

7 hours ago

ಬೆಂಗಳೂರು: ರಸ್ತೆಯಲ್ಲಿ ನಿಂತು ವೇಶ್ಯವಾಟಿಕೆಗೆ ಪ್ರಚೋದನೆ : 6 ವಿದೇಶಿ ಮಹಿಳೆಯರ ಬಂಧನ – vishwanews24

ಬೆಂಗಳೂರು: ರಸ್ತೆಯಲ್ಲಿ ನಿಂತು ವೇಶ್ಯವಾಟಿಕೆಗೆ ಪ್ರಚೋದನೆ : 6 ವಿದೇಶಿ ಮಹಿಳೆಯರ ಬಂಧನ ಬೆಂಗಳೂರು: ನಗರದ ಕೋರಮಂಗಲ ಚೆಕ್‌ಪೋಸ್ಟ್‌ ಬಳಿ …

7 hours ago

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  – vishwanews24

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಕೊಲ್ಲೂರು:…

7 hours ago

ಮಹಿಳಾ ಸಬಲೀಕರಣಕ್ಕಾಗಿ ಹೋರಾಟ ಮಾಡಿದ ಇತಿಹಾಸ ಕಾಂಗ್ರೆಸ್ ನದ್ದು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ – vishwanews24

ಕಾಂಗ್ರೆಸ್ ಯಾವತ್ತೂ ಮಹಿಳಾ ವಿರೋಧಿ ಅಲ್ಲ, ಬಿಜೆಪಿಯದ್ದು ರಾಜಕೀಯ ಆಟ :ಸಚಿವೆ ಲಕ್ಷ್ಮೀ ಹೆಬ್ಬಾಳಕರ್  ಬೆಳಗಾವಿ : ಕಾಂಗ್ರೆಸ್ ಯಾವತ್ತೂ…

8 hours ago