ದುರಾನಿ ತನ್ನ ಹಣ ಹಾಗೂ 4 ಲಕ್ಷ ಬೆಲೆಯ ಚಿನ್ನಾಭರಣವನ್ನು ಲಪಟಾಯಿಸಿದ್ದಾನೆ ಎಂದು ನಟಿ ರಾಖಿ ನೀಡಿರುವ ದೂರಿನ ಮೇರೆಗೆ ಮುಂಬೈ ಪೊಲೀಸರು ಎಫ್ ಐಆರ್ ದಾಖಲಿಸಿ ದುರಾನಿಯನ್ನು ಬಂಧಿಸಿದ್ದಾರೆ.
ಓಶಿವಾರ ಪೊಲೀಸರು ಆದಿಲ್ ದುರಾನಿ ವಿರುದ್ಧ ಐಪಿಸಿ ಸೆಕ್ಷನ್ 406 ಹಾಗೂ 420 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ನಂತರ, ಪೊಲೀಸರು ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 498 (ಎ) ಮತ್ತು 377 ಅನ್ನು ಕೂಡ ಸೇರಿಸಿದ್ದಾರೆ. ಆದಿಲ್‌ನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಆದಿಲ್ ತನ್ನ ಮೇಲೆ ಹಲ್ಲೆ ನಡೆಸಿ ತನ್ನ ಫ್ಲಾಟ್ ನಲ್ಲಿದ್ದ ಹಣ ಹಾಗೂ ಆಭರಣಗಳನ್ನು ತನಗೆ ತಿಳಿಯದಂತೆ ದೋಚಿದ್ದಾನೆ ಎಂದು ರಾಖಿ ಆರೋಪಿಸಿದ್ದಾರೆ.
ಮುಂಬೈನ ಓಶಿವಾರಾ ಪೊಲೀಸ್ ಠಾಣೆಯ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಖಿ, “ಅವನು (ಆದಿಲ್) ನನಗೆ ಹೊಡೆಯುವ ಉದ್ದೇಶದಿಂದ ಬೆಳಗ್ಗೆ ನನ್ನ ಮನೆಗೆ ಬಂದಿದ್ದ. ನಾನು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದೇನೆ,. ಆತ ಆಗಾಗ್ಗೆ ನನ್ನ ಮನೆಗೆ ಭೇಟಿ ನೀಡುತ್ತಾನೆ ಮತ್ತು ಬೆದರಿಕೆ ಹಾಕುತ್ತಾನೆ. ಇಂದೂ ಕೂಡ ನನ್ನನ್ನು ಹೊಡೆಯಲು ಆತ ಬಂದಿದ್ದಾನೆ. ಮನೆಯಲ್ಲಿ, ನಾನು ಭಯಭೀತಳಾಗಿದ್ದೇನೆ ಎಂದು ಹೇಳಿದರು.
ತಾನು ಆದಿಲ್ ನನ್ನು 2022 ರಲ್ಲಿ ವಿವಾಹವಾಗಿದ್ದೇನೆ ಎಂದು ರಾಖಿ ಕಳೆದ ತಿಂಗಳು ಬಹಿರಂಗಪಡಿಸಿದ್ದರು. Instagram ತಮ್ಮ ಮದುವೆ ಪ್ರಮಾಣಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಪ್ರಮಾಣಪತ್ರದಲ್ಲಿ ಮದುವೆಯು ಮೇ 29, 2022 ರಂದು ನಡೆದಿದೆ ಎಂದು ತೋರಿಸುತ್ತಿದೆ.
ಆದಿಲ್ ವಿವಾಹೇತರ ಸಂಬಂಧ ಹೊಂದಿರುವುದಾಗಿಯೂ ರಾಖಿ ಆರೋಪಿಸಿದ್ದಾರೆ.
ಆದಿಲ್ ತನಗೆ ಮೋಸ ಮಾಡಿದ ಕಾರಣ ಆತನಿಂದ ವಿಚ್ಛೇದನವನ್ನು ಪಡೆದುಕೊಳ್ಳುತ್ತೇನೆ ಎಂದು ನಟಿ ಹೇಳಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…