ಮುಂಬೈ: ಕಳೆದ ಮೂರು ದಿನಗಳಿಂದ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರ, ರೈಲು ಸೇವೆ ಮತ್ತು ದೈನಂದಿನ ಬದುಕಿನ ಮೇಲೆ ಮಳೆಯ ಪರಿಣಾಮ ತೀವ್ರವಾಗಿದೆ.
ಈ ದುರ್ಘಟನೆಗಳ ನಡುವೆ ಭಿವಂಡಿಯಲ್ಲಿ ಮನಕಲಕುವ ಘಟನೆ ನಡೆದಿದೆ. ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ 13 ವರ್ಷದ ಬಾಲಕ ಮುಹಮ್ಮದ್ ಅಬೂಝರ್ ಕೊಚ್ಚಿಹೋಗಿದ್ದಾನೆ. ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ನೀರಿನ ರಭಸಕ್ಕೆ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:
ಕಳೆದ ಆರು ದಿನಗಳಲ್ಲಿ ಮುಂಬೈ ನಗರದಲ್ಲಿ ಮಳೆಯ ಅವಾಂತರಕ್ಕೆ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರಿ ಮಳೆಯ ಕಾರಣ ಹಲವೆಡೆ ಭೂಕುಸಿತ, ನೀರು ನಿಲ್ಲುವುದು ಮತ್ತು ಅಪಘಾತಗಳು ಹೆಚ್ಚಾಗಿವೆ.
ಮಳೆಯ ಹೊಡೆತಕ್ಕೆ ರೈಲು ಸಂಚಾರ ತೀವ್ರವಾಗಿ ಹದಗೆಟ್ಟಿದೆ. ಇಂದು ಕೂಡ ಸೆಂಟ್ರಲ್ ಮತ್ತು ವೆಸ್ಟರ್ನ್ ರೈಲ್ವೆ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಕೂಡ 43 ರೈಲುಗಳ ಸಂಚಾರವನ್ನ ರದ್ದುಗೊಳಿಸಲಾಗಿದೆ. ಇದರಲ್ಲಿ ಸೆಂಟ್ರಲ್ ರೈಲ್ವೆಯ 27 ಮತ್ತು ವೆಸ್ಟರ್ನ್ ರೈಲ್ವೆಯ 16 ರೈಲುಗಳು ಸೇರಿವೆ.
ಇದನ್ನೂ ಓದಿ:
ಲೋನಾವಾಲಾ-ಕರ್ಜತ್ ಘಾಟ್ ವಿಭಾಗದಲ್ಲಿ ಭೂಕುಸಿತ ಸಂಭವಿಸಿರುವುದರಿಂದ ರೈಲು ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಿದೆ. ಪಾಲ್ಘರ್ ಜಿಲ್ಲೆಯಲ್ಲಿ 300 ಮಿಲಿ ಮೀಟರ್‌ಗೂ ಹೆಚ್ಚು ಮಳೆಯಾಗಿದ್ದು, ನಲಸೋಪಾರಾ ಭಾಗದಲ್ಲಿ ಭಾರಿ ಜಲಾವೃತ ಉಂಟಾಗಿದೆ. ಇದರ ಪರಿಣಾಮವಾಗಿ ವಸಾಯಿ ಮತ್ತು ವಿರಾರ್ ನಡುವಿನ ಉಪನಗರ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…
ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…
ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…
ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…
25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…
ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ [gallery columns="1" size="large" ids="117027,117028,117029,117030,117031"]