ಹುಬ್ಬಳ್ಳಿ: ನಗರದ ಮಾಯ್ಕರ್ ಕಾಲೋನಿ ಸಿಎಂ ಕುಮಾರಸ್ವಾಮಿ ನೆಲೆಸಿದ್ದ ಮನೆಯನ್ನು ಮಾಲೀಕರು ಮಾರಾಟಕ್ಕಿಟ್ಟಿದ್ದಾರೆ.
ಹೌದು, ಸಿಎಂ ಕುಮಾರಸ್ವಾಮಿಯವರು 2016ರ ನವೆಂಬರ್ ನಲ್ಲಿ ನಗರದ ಮಾಯ್ಕರ್ ಕಾಲೋನಿಯ ನಿವಾಸವನ್ನು ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದ್ದ ಮನೆ ಮತ್ತು ಕಚೇರಿಯನ್ನು ಮಾಲೀಕರು ಇಂದು ಮಾರಾಟಕ್ಕಿಟ್ಟಿದ್ದಾರೆ.
10 ಸಾವಿರ ಚದರಡಿಯ ನಾಲ್ಕು ಬೆಡ್ ರೂಮ್, ಪೂಜಾ ಕೋಣೆ, ಜಿಮ್ ಸೇರಿದಂತೆ ಸಕಲ ಸೌಕರ್ಯಗಳಿರುವ ಸುಸಜ್ಜಿತ ಮನೆ ಹಾಗೂ ಖಾಸಗಿ ಕಚೇರಿಯ ಮಾಲೀಕರಾದ ಸುರೇಶ್ ರಾಯರೆಡ್ಡಿಯವರು ಮಾರಾಟ ಮಾಡಲು ಮುಂದಾಗಿದ್ದು, ಶೀಘ್ರವೇ ಜಾಹೀರಾತು ನೀಡಲು ಮುಂದಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮನೆಯ ಮಾಲೀಕರು, ನನ್ನ ವೈಯಕ್ತಿಕ ಕಾರಣದಿಂದಾಗಿ ಕುಮಾರಸ್ವಾಮಿಯವರು ಬಳಸುತ್ತಿದ್ದ ಮನೆ ಹಾಗೂ ಕಚೇರಿಯನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕುಮಾರಸ್ವಾಮಿಯವರು ಉತ್ತರ ಕರ್ನಾಟಕ ಜನರೊಂದಿಗೆ ನಿಕಟ ಸಂಪರ್ಕ ಬೆಳೆಸಲು ಈ ಮನೆಯನ್ನು ಆರಿಸಿಕೊಂಡಿದ್ದರು.
ಒಟ್ಟು ನಾಲ್ಕು ಕೋಟಿ ರೂ.ಗೆ ಈ ನಿವಾಸವನ್ನು ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…