ಕಾಪು: ನಮ್ಮ ಕಾಪು ಸ್ವಚ್ಛ ಕಾಪು ಅಭಿಯಾನದಡಿ ರಾಜ್ಯಮಟ್ಟದಲ್ಲಿ ಹೆಸರು ಪಡೆದಿರುವ ಕಾಪು ಪುರಸಭೆ ಸ್ವಚ್ಛತೆಯಲ್ಲಿ ಹೆಸರು ಪಡಿದಿದೆ, ಆದರೇ ಕಾಪುವಿನ ಹೃದಯ ಭಾಗ ಸಾವಿರಾರು ಜನ ನಡೆದುಹೋಗುವ ಪೇಟೆಯ ಮಧ್ಯಭಾಗದಲ್ಲಿ ನಿರ್ಮಾಣವಾದ ಕಟ್ಟಡದ ಒಳಚರಂಡಿ ನೀರು, ಶೌಚಲಯದ ನೀರು ರಸ್ತೆಯ ಬದಿಯಲ್ಲಿ ವಿರಾಜಮಾನವಾಗಿ ಹರಿದು ಜನರನ್ನ ಮೂಗುಮುಚ್ಚಿಸಿಕೊಂಡು ನಡೆಯುವಂತೆ ಮಾಡಿದೆ.
ಹಾಗಾದರೇ ಆ ಕಟ್ಟಡ ಯಾವುದಂತೀರ ಕಾಪು ಪೇಟೆಯ ರಿಕ್ಷಾ ನಿಲ್ದಾಣದ ಬಳಿ ತಲೆ ಎತ್ತಿರುವ ಪ್ರತಿಷ್ಠಿತ ಪಿಡಬ್ಲ್ಯುಡಿ ಗುತ್ತಿದಾರನ ಒಡೆತನದ ಜನಾರ್ಧನ ಕಾಂಪ್ಲೆಕ್ಸ್. ಹೌದು ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಗಬ್ಬು ವಾಸನೆ ಮೂಗಿಗೆ ಬಡಿಯುವಂತೆ ಶೌಚಲಯದ ನೀರು ಮ್ಯಾನ್ ಹೋಲ್ ನಿಂದ ಹೊರಬಿದ್ದು ಅತ್ಯಂತ ಕೆಟ್ಟ ರೀತಿಯಲ್ಲಿ ವಾಸನೆ ಹೊಡೆಯುತ್ತಿದೆ ಮಾತ್ರವಲ್ಲದೆ ಈ ಕಟ್ಟಡದಲ್ಲಿರುವರುವ ಕೆಲವು ಕಚೇರಿಗಳಿಗೆ ತೆರಳಬೇಕಾದರೆ ಆ ನೀರನ್ನ ತುಳಿದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಆದರೇ ಸ್ವಚ್ಛ ಕಾಪು ಎಂದು ಬೊಬ್ಬೆಹೊಡೆದುಕೊಂಡು ಹೋಗುವ ಕಾಪು ಪುರಸಭೆ ಮುಖ್ಯಾಧಿಕಾರಿಗಳು, ಅಂಗಡಿ ಮುಂಗಟ್ಟುಗಳಿಗೆ, ಬೀದಿ ವ್ಯಾಪರಿಗಳಿಗೆ, ಹೋಟೆಲ್ ಮಾಲಕರಿಗೆ ಪ್ಲಾಸ್ಟೀಕ್ ಮತ್ತು ಸ್ವಚ್ಛತೆಯ ವಿಚಾರವಾಗಿ ಸದಾ ಕಿರಿಕ್ ಮಾಡುತ್ತಿರುವಾಗ ಈ ಗುತ್ತಿಗೆದಾರನ ಸಂಕೀರ್ಣದಲ್ಲಿ ಹೊರಸೂಸುವ ಈ ನೀರಿನ ಬಗ್ಗೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ಟೀಕೆಗೆ ಗುರಿಯಾಗಿದೆ.
ಗ್ರಾಹಕರಿಗೆ ತೊಂದರೆ
ಈ ಕಟ್ಟಡದ ಮೊದಲನೇ ಮಹಡಿಯಲ್ಲಿ ಕೆನರಾ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ, ಮಾತ್ರವಲ್ಲದೆ ಮೆಡಿಕಲ್, ಜನರಲ್ ಸ್ಟೋರ್ಸ್,ಟೈಲರಿಂಗ್ ಶಾಪ್, ಜ್ಯುವೆಲ್ಲರಿ ಅಂಗಡಿಗಳು, ಇತರ ಕಚೇರಿಗಳು ಇದೆ. ದಿನಂಪ್ರತಿ ನೂರಾರು ಗ್ರಾಹಕರು ಇಲ್ಲಿ ಬಂದು ಹೋಗುವವರು ಇದ್ದಾg, ಅವರಿಗೆಲ್ಲರಿಗೂ ಈ ಗಬ್ಬು ವಾಸನೆಯ ನೀರಿನಿಂದ ಪಾದ ತೊಳೆದು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.ಆದರೂ ಕೂಡ ಪುರಸಭೆ ಮಾತ್ರ ಕಣ್ಣಿದ್ದು ಕುರುಡುತನ ಪ್ರದರ್ಶಿಸುತ್ತಿರುವುದು ಮಾತ್ರ ವಿಪರ್ಯಾಸ.
ಕಳೆದ ಮೂರು ದಿನದಿಂದ ಈ ಭಾಗದಲ್ಲಿ ಮ್ಯಾನ್ ಹೋಲ್ ತೆರೆದುಕೊಂಡಿದ್ದ ನಿನ್ನೆಯ ದಿನ ಪಾದಚಾರಿಯೊಬ್ಬ ನಡೆದುಕೊಂಡು ಹೋಗುವಾಗ ಕುಸಿದು ಬಿದ್ದ ಘಟನೆಯೂ ನಡೆದಿದೆ.
ಒಟ್ಟಾರೆಯಾಗಿ ಸ್ವಚ್ಛ ಕಾಪುವಿನ ಅಭಿಯಾನದಡಿ ಪುರಸಭೆ ಉಳ್ಳವರಿಗೊಂದು ನ್ಯಾಯ,ಇಲ್ಲದವರಿಗೊಂದು ನ್ಯಾಯ ಮಾಡುತ್ತಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…
ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…
ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…
ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್ ಲಕ್ನೋ: ರಾಮಭಕ್ತರ…
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…