ಬೆಂಗಳೂರು : ಆರನೇ ವೇತನ ಆಯೋಗ ಶಿಫಾರಸಿಗೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರ, ಅಧಿಕಾರಿಗಳು ಎಷ್ಟು ಮನವಿ ಮಾಡಿದರೂ ಮುಷ್ಕರದ ನಿರ್ಧಾರದಿಂದ ಹಿಂಜರಿಯದ ಸಾರಿಗೆ ನೌಕರರಿಗೆ ಸರ್ಕಾರ ಶಾಕ್ ನೀಡಲು ನಿರ್ಧರಿಸಿದೆ.
ಇಂದು ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು ಯಾವುದೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಈ ಹಿನ್ನೆಲೆ ಸರ್ಕಾರದ ಮನವಿಗೆ ಕಿವಿಗೊಡದ ನೌಕರರಿಗೆ ಶಾಕ್ ನೀಡಲು ಮುಂದಾಗಿರುವ ಸರ್ಕಾರ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವ ನೌಕರರ ಮಾರ್ಚ್ ತಿಂಗಳ ವೇತನ ತಡೆಯಲು ನಿರ್ಧರಿಸಿದೆ.
ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದ ಮುಕೇಶ್ ಅಂಬಾನಿ -Vishwanews24
ಈ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಅವರು ಮಾಹಿತಿ ನೀಡಿದ್ದಾರೆ. ”ಸಾರಿಗೆ ನೌಕರರು ಕೆಲಸಕ್ಕ ಹಾಜರಾಗದಿದ್ದರೆ ಮಾರ್ಚ್ ತಿಂಗಳ ಸಂಬಳ ಕಡಿತ ಮಾಡುತ್ತೇವೆ. ನೊ ವರ್ಕ್, ನೊ ಪೇ” ಎಂದು ಹೇಳಿದ್ದಾರೆ.
ಸಾರಿಗೆ ನಿಗಮವು ಪ್ರತಿ ತಿಂಗಳು 10ನೇ ತಾರೀಖಿನೊಳಗೆ ನೌಕರರಿಗೆ ವೇತನ ನೀಡುತ್ತಿದ್ದವು. ಈ ಬಾರಿ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಸರ್ಕಾರ ವೇತನ ತಡೆಹಿಡಿಯಲು ನಿರ್ಧರಿಸಿದೆ. ಎಲ್ಲಿಯವರೆಗೂ ಸಾರಿಗೆ ನೌಕರರು ಮುಷ್ಕರ ಕೈಬಿಡುವುದಿಲ್ಲವೋ ಅಲ್ಲಿಯವರೆಗೂ ಸಂಬಳ ನೀಡಬಾರದು ಸಾರಿಗೆ ನಿಗಮಗಳಿಗೆ ಸರ್ಕಾರ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಉಡುಪಿ: ಮುಷ್ಕರ ಹಿನ್ನೆಲೆ ರಸ್ತೆಗಿಳಿಯದ KSRTC ಬಸ್‌ಗಳು ; ಖಾಸಗಿ ಬಸ್‌ಗಳ ಮೊರೆ ಹೋದ ಪ್ರಯಾಣಿಕರು -Vishwanews24
ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ ಉಡುಪಿ :…
"ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್…
ಕೊಕ್ಕಡ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಕೊಕ್ಕಡ,: ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ…
NEET (UG) Re-Exam 2026: ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ ನವದೆಹಲಿ: ನೀಟ್ (NEET-UG 2026) ಮರು ಪರೀಕ್ಷೆಯನ್ನು ಸಂಪೂರ್ಣ…
NEET (UG) Re-Exam 2026: ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ ನವದೆಹಲಿ: ನೀಟ್ (NEET-UG 2026) ಮರು ಪರೀಕ್ಷೆಯನ್ನು ಸಂಪೂರ್ಣ…
ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜೂ. 19 ರಂದು ರಾಹುಲ್ ಗಾಂಧಿ ಜನ್ಮದಿನಾಚರಣೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾಂಗ್ರೆಸ್…