ಮುಸ್ಲಿಂ ಬ್ರದರ್‌ಹುಡ್ ಜತೆ ಆರೆಸ್ಸೆಸ್ ; ಬಿಜೆಪಿ ಮತ್ತು ಆರೆಸ್ಸೆಸ್ ದೇಶವನ್ನು ವಿಭಜಿಸುತ್ತಿವೆ, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ರಾಹುಲ್ ಗಾಂಧಿ
ಹೊಸದಿಲ್ಲಿ: ಅರಬ್ ದೇಶಗಳಲ್ಲಿನ ಮುಸ್ಲಿಮ್ ಬ್ರದರ್‌ಹುಡ್‌ನ ಸಿದ್ಧಾಂತವನ್ನೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವೂ ಹೊಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬರ್ಲಿನ್‌ನಲ್ಲಿ ಹೇಳಿರುವುದು ಇದೀಗ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಈಜಿಪ್ಟ್ನಲ್ಲಿ ಹುಟ್ಟಿಕೊಂಡ ಮುಸ್ಲಿಂ ಬ್ರದರ್‌ಹುಡ್ ಎಂಬ ಸುನ್ನಿ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಪರಿಗಣಿಸಲಾಗಿದ್ದು, ಈಗಾಗಲೇ ರಷ್ಯಾ ಸೇರಿದಂತೆ ಆರಕ್ಕೂ ಹೆಚ್ಚು ದೇಶಗಳಲ್ಲಿ ನಿಷೇಧಗೊಂಡಿದೆ. ಜರ್ಮನಿಯಲ್ಲಿ ಗುರುವಾರ ಮಾತನಾಡಿದ್ದ ರಾಹುಲ್, ಅಭಿವೃದ್ಧಿಯಿಂದ ಹಿಂದುಳಿದ ಜನರನ್ನು ಹೊರಗಿಟ್ಟಿದ್ದರಿಂದ ಅವರು ಐಸಿಸ್‌ನಂತಹ ಬಂಡುಕೋರರ ಸಂಘಟನೆ ಸೇರುತ್ತಾರೆ ಎಂದಿದ್ದರು.
ಬರ್ಲಿನ್‌ನಲ್ಲಿ ನಡೆದ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ರಾಹುಲ್, ದೇಶವನ್ನು ಕಾಂಗ್ರೆಸ್ ಒಗ್ಗೂಡಿಸಿದರೆ, ಬಿಜೆಪಿ ಮತ್ತು ಆರೆಸ್ಸೆಸ್ ದೇಶವನ್ನು ವಿಭಜಿಸುತ್ತಿವೆ ಎಂದಿದ್ದಾರೆ. ಸುದೀರ್ಘ ಭಾಷಣಗಳಲ್ಲಿ ದ್ವೇಷಯುತ ಹೇಳಿಕೆಗಳನ್ನು ನೀಡಲಾಗುತ್ತಿದ್ದರೆ, ರೈತರು ಇನ್ನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಯುವಕರಿಗೆ ದೇಶದಲ್ಲಿ ಯಾವುದೇ ಭವಿಷ್ಯವೇ ಕಾಣಿಸುತ್ತಿಲ್ಲ ಎಂದೂ ರಾಹುಲ್ ಟೀಕಿಸಿದ್ದಾರೆ. ಚೀನಾ 24 ಗಂಟೆಗಳಲ್ಲಿ 50 ಸಾವಿರ ಜನರಿಗೆ ಉದ್ಯೋಗ ನೀಡಿದರೆ, ಈ ಅವಧಿಯಲ್ಲಿ ಭಾರತ ಕೇವಲ 450 ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗಿದೆ ಎಂದಿದ್ದಾರೆ.
ಇನ್ನೊಂದೆಡೆ 2019ರಲ್ಲಿ ಅಧಿಕಾರಕ್ಕೆ ಬಂದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುತ್ತೇವೆ ಎಂದು ರಾಹುಲ್ ಹೇಳಿದ್ದಾರೆ. ಪ್ರಧಾನಿ ಮೋದಿ ಬಿಜೆಪಿ ಆಡಳಿತದ ರಾಜ್ಯಗಳಿಗೆ ಬೆಂಬಲ ನೀಡಿ, ಬಿಜೆಪಿಯೇತರ ರಾಜ್ಯಗಳ ಅಭಿವೃದ್ಧಿಯನ್ನು ಕುಂಠಿತಗೊಳಿಸಲು ಬಯಸುತ್ತಿದ್ದಾರೆ. ಪಾಕಿಸ್ತಾನ ಕುರಿತಂತೆ ಮೋದಿ ಯಾವುದೇ ಸ್ಪಷ್ಟ ನೀತಿಯನ್ನು ಹೊಂದಿಲ್ಲ ಎಂದೂ ಆರೋಪಿಸಿರುವ ರಾಹುಲ್, ಡೋಕ್ಲಾಂನಲ್ಲಿ ಚೀನೀ ಸೇನೆ ಇನ್ನೂ ಇದ್ದು, ಪ್ರಧಾನಿ ಮೋದಿ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದೂ ದೂರಿದ್ದಾರೆ.
ಪಾಕಿಸ್ತಾನ ಉಗ್ರರ ದಾಳಿ ನಿಲ್ಲಿಸುವವರೆಗೂ ಮಾತುಕತೆ ಅಸಾಧ್ಯ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ. ಅದರ ಅರಿವಿಲ್ಲದೆ, ರಾಹುಲ್ ಶಾಂತಿ ಮಾತುಕತೆ ನಡೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…