Featured

ಮುಸ್ಲಿಂ ಯುವಕನಿಂದ ಪೆಟ್ರೋಲ್ ಇಲ್ಲದೇ 150 ಕಿ.ಮೀ ಚಲಿಸುವ ವಿಶೇಷ ‘ಮೋದಿ ಬೈಕ್’..

ಮೀರತ್: ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರಿರುವ ಈ ಹೊತ್ತಿನಲ್ಲಿ ಪೆಟ್ರೋಲೇ ಇಲ್ಲದೇ ಬರೊಬ್ಬರಿ 150 ಕಿ.ಮೀ ಸಾಗುವ ನೂತನ ಬೈಕ್ ವೊಂದನ್ನು ಮೀರತ್ ನ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕಂಡು ಹಿಡಿದಿದ್ದಾನೆ.
ಈ ಮುಸ್ಲಿಂ ಯುವಕನಿಗೆ ಪ್ರಧಾನಿ ನರೇಂದ್ರ ಮೋದಿ ಎಂದರೆ ಅಚ್ಚು ಮೆಚ್ಚು. ದೇಶಕ್ಕಾಗಿ ಏನನ್ನಾದರೂ ಸಾಧಿಸಬೇಕು ಎಂದು ಹಂಬಲಿಸುತ್ತಿದ್ದ ಯುವಕ ವಿದ್ಯುತ್ ಚಾಲಿತ ಬೈಕ್ ಕಂಡುಹಿಡಿದಿದ್ದಾರೆ.
ಈ ವಿಶೇಷ ಬ್ಯಾಟರಿ ಚಾಲಿತ ಇ-ಬೈಕ್ ಅನ್ನು ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿ ವಕಾರ್ ಅಹಮದ್ ಸಂಶೋಧಿಸಿದ್ದು, ಈ ವಿಶೇಷ ಬೈಕ್ ಗೆ ‘ಮೋದಿ ಬೈಕ್’ ಎಂದು ನಾಮಕರಣ ಮಾಡಿದ್ದಾನೆ. ಸ್ವತಃ ಮೆಕಾನಿಕಲ್ ಎಂಜಿನಿಯಪ್ ಆಗಿರುವ ವಕಾರ್ ಅಹ್ಮದ್  ತನ್ನ ವಿದ್ಯಾಭ್ಯಾಸವನ್ನೇ ಬಂಡವಾಳವಾಗಿಸಿಕೊಂಡು ವಿಶೇಷ ಇ-ಬೈಕ್ ಆವಿಷ್ಕರಣೆಗೆ ಮುಂದಾಗಿದ್ದಾನೆ.
ತನ್ನ ನಿರಂತರ ಪರಿಶೋಧನೆ ಮತ್ತು ಪರಿಶ್ರಮದ ಫಲವಾಗಿ ವಕಾರ್ ಇದೀಗ ವಿಶೇಷ ಬೈಕ್ ತಯಾರಿಸಿದ್ದು, ಈ ಬ್ಯಾಟರಿ ಚಾಲಿತ ಬೈಕ್ ಅನ್ನು 3 ಗಂಟೆ ಚಾರ್ಜ್ ಮಾಡಿದರೆ ಸಾಕು ಬರೊಬ್ಬರಿ 150 ಕಿ.ಮೀ ಚಲಿಸಲಿದೆ. ಪ್ರಸ್ತುತ ಆಟೋ ಮೊಬೈಲ್ ಇಂಜಿನಿಯರಿಂಗ್ ಮಾಡುತ್ತಿದ್ದ ಯುವಕ ಕಂಡುಹಿಡಿದ ಬೈಕ್ ಈಗ ರಸ್ತೆಯಲ್ಲಿ ಸುತ್ತಾಡುತ್ತಿದ್ದು, ಪೆಟ್ರೋಲ್ ಇಲ್ಲದೇ ಚಲಿಸುತ್ತಿರುವ ಬೈಕ್ ನೋಡಿ ಜನ ಅಚ್ಚರಿ ಪಡುತ್ತಿದ್ದಾರೆ.  ಪ್ರಧಾನಿ ಸಹ ಶಹಬ್ಬಾಸ್ ನೀಡಿದ್ದಾರೆ. ಈ ಬೈಕ್‌ ಗೆ ಇಂಜಿನ್ ಇಲ್ಲ. ಲ್ಯಾಟ್ ಟಾಪ್ ಅಥವ ಮೊಬೈಲ್ ರೀತಿ ಜಾರ್ಜ್ ಹಾಕಬೇಕು.
ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಬೈಕ್ ಸಂಶೋಧಕ ವಕಾರ್ ಅಹ್ಮದ್, ‘ಈ ಬೈಕ್‌ ಗೆ  ಇಂಜಿನ್ ಇಲ್ಲ. ಲ್ಯಾಟ್ ಟಾಪ್ ಅಥವಾ ಮೊಬೈಲ್ ರೀತಿ ಜಾರ್ಜ್ ಹಾಕಬೇಕು. ಮೂರು ಗಂಟೆ ಜಾರ್ಜ್  ಮಾಡಿದರೆ 150 ಕಿಮೀ ಸಂಚಾರ ಸಾಧ್ಯ. ಇದಕ್ಕೆ ಕೇವಲ  20 ರೂ. ಖರ್ಚು ತಗಲುತ್ತದೆ. ಅಂದರೆ ಕೇವಲ 20 ರೂ. ವೆಚ್ಚದಲ್ಲಿ 150 ಕಿ ಮೀ ಪ್ರಯಾಣ ಮಾಡಬಹುದು. ನನಗೆ ಪ್ರಧಾನಿ ಮೋದಿ ಎಂದರೆ ಅಚ್ಚು ಮೆಚ್ಚು ಹೀಗಾಗಿ ಈ ವಿಶೇಷ ಬೈಕ್ ಗೆ ಮೋದಿ ಬೈಕ್ ಎಂದು ನಾಮಕರಣ ಮಾಡಿದ್ದೇನೆ. ಈ ಬೈಕ್ ದರ  70 ರಿಂದ 75 ಸಾವಿರ ರೂ. ಆಗಲಿದ್ದು ಮಾರುಕಟ್ಟೆಗೆ ತರುವ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೇ ಈ ಸಂಬಂಧ ಹಲವು ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಶೀಘ್ರ ಒಪ್ಪಂದ ಮಾಡಿಕೊಂಡು ಈ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತೇನೆ ಎಂದು ಹೇಳಿದ್ದಾರೆ.
Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago