Featured

ಮುಸ್ಲಿಂ ವಿಸ್ತಾರವಾದ ಮತ್ತು ಪ್ರತ್ಯೇಕವಾದ ದೇಶಕ್ಕೆ ಮಾರಕ ಮತ್ತು ಗಂಡಾಂತರ : ಪ್ರಮೋದ್ ಮುತಾಲಿಕ್ – Vishwanews24

ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರಕ್ಕೆ ಶ್ರೀರಾಮ ಸೇನೆಯಿಂದ ರಾಜ್ಯಾದ್ಯಂತ ಆಂದೋಲನ

ಮುಸ್ಲಿಂ ಮಾನಸಿಕತೆ ಬದಲಾಗುವವರೆಗೆ ಈ ರೀತಿಯ ಸಂಘರ್ಷ- ದ್ವೇಷ ನಿರಂತರವಾಗಿ ಇರುತ್ತದೆ

ಮುಸ್ಲಿಂ ವಿಸ್ತಾರವಾದ ಮತ್ತು ಪ್ರತ್ಯೇಕವಾದ ದೇಶಕ್ಕೆ ಮಾರಕ ಮತ್ತು ಗಂಡಾಂತರ..

ಬೆಳಗಾವಿ: ಮುಸ್ಲಿಮರ ಮೇಲೆ ‘ಆರ್ಥಿಕ ಬಹಿಷ್ಕಾರ’ಕ್ಕೆ ಶ್ರೀರಾಮ ಸೇನೆಯಿಂದ ದೊಡ್ಡ ಮಟ್ಟದ ಆಂದೋಲನವನ್ನು ರಾಜ್ಯದಾದ್ಯಂತ ನಡೆಸಲಾಗುವುದು’ ಎಂದು ಅಧ್ಯಕ್ಷ ಪ್ರಮೋದ್ ಮುತಾಲಿಕ್‌ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಜಾತ್ರೆಯಲ್ಲಿ ಮತ್ತು ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಂ ವರ್ತಕರಿಗೆ ನಿರ್ಬಂಧ ಹೇರಿರುವುದಕ್ಕೆ ಸಂಘಟನೆಯ ಬೆಂಬಲವಿದೆ’ ಎಂದರು.

‘ಮುಸ್ಲಿಮರ ಜೊತೆ ವ್ಯಾಪಾರ-ವ್ಯವಹಾರಕ್ಕೆ ಆರ್ಥಿಕ ಬಹಿಷ್ಕಾರ ರಾಜ್ಯದಾದ್ಯಂತ ಹಬ್ಬಿದೆ. ಮುಸ್ಲಿಂ ಮಾನಸಿಕತೆ ಬದಲಾಗುವವರೆಗೆ ಈ ರೀತಿಯ ಸಂಘರ್ಷ- ದ್ವೇಷ ನಿರಂತರವಾಗಿ ಇರುವುದೇ. ಮುಸ್ಲಿಂ ವಿಸ್ತಾರವಾದ ಮತ್ತು ಪ್ರತ್ಯೇಕವಾದ ದೇಶಕ್ಕೆ ಮಾರಕ ಮತ್ತು ಗಂಡಾಂತರವಾಗಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಮರೊಂದಿಗ ವ್ಯಾಪಾರಕ್ಕೆ ಬಹಿಷ್ಕಾರ ಹಾಕಲಾಗುತ್ತಿದೆ’ ಎಂದರು.

ನ್ಯಾಯಾಲಯಕ್ಕೂ ಗೌರವ ನೀಡಿಲ್ಲ: ‘ಲವ್‌ಜಿಹಾದ್, ಹಿಂದೂ ನಾಯಕರ ಕೊಲೆ ಮೊದಲಾದ ಮುಸ್ಲಿಮರ ಕ್ರೌರ್ಯ ಮತ್ತು ಮಾನಸಿಕತೆ ಹಿಂದಿನಿಂದಲೂ ಇದೆ. ಅದನ್ನು ನಿಲ್ಲಿಸುವವರೆಗೆ ಬಹಿಷ್ಕಾರದಂತಹ ಪ್ರಕ್ರಿಯೆ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಇತರ ವ್ಯಾಪಾರ-ವ್ಯವಹಾರ ಹಾಗೂ ಆಟೊರಿಕ್ಷಾ ಏರದಿರುವುದು ಮೊದಲಾದವುಗಳಿಗೂ ಸಂಪೂರ್ಣ ಬಹಿಷ್ಕಾರ ಹಾಕುತ್ತೇವೆ. ಮುಸ್ಲಿಮರು ಗೋಮಾಂಸ ತಿನ್ನುವುದು ಮತ್ತು ಗೋಹತ್ಯೆ ನಿಲ್ಲಿಸುವವರೆಗೆ ಮುಂದುವರಿಯುತ್ತದೆ’ ಎಂದು ಹೇಳಿದರು.

‘ಸಂವಿಧಾನದ ಆಧಾರದ ಮೇಲೆ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಅವು ನೀಡುವ ತೀರ್ಪನ್ನೂ ಆ ಸಮಾಜ ಒಪ್ಪುತ್ತಿಲ್ಲ; ಕಾನೂನಿಗೆ ಗೌರವ ಕೊಡುತ್ತಿಲ್ಲ. ಹಿಜಾಬ್‌ ವಿಷಯದಲ್ಲಿ ನ್ಯಾಯಾಲಯಕ್ಕೆ ಹೋದವರು ಮುಸ್ಲಿಂ ವಿದ್ಯಾರ್ಥಿನಿಯರೆ. ಹೈಕೋರ್ಟ್‌ ನೀಡಿದ ಮಧ್ಯಂತರ ಹಾಗೂ ಅಂತಿಮ ತೀರ್ಪುಗಳೆರಡನ್ನೂ ಧಿಕ್ಕರಿಸಿದ್ದಾರೆ. ಎಸ್‌ಡಿಪಿಐ, ಸಿಎಫ್‌ಐ, ಪಿಎಫ್‌ಐ ಎನ್ನುವ ದೇಶದ್ರೋಹಿ ಸಂಘಟನೆಗಳು, ಮುಲ್ಲಾ-ಮೌಲ್ವಿಗಳು ಕೂಡ ಧಿಕ್ಕರಿಸಿದ್ದಾರೆ. ನ್ಯಾಯಾಲಯದ ಆದೇಶ ಒಪ್ಪದೆ ಸೊಕ್ಕಿನ ಮಾತುಗಳನ್ನು ಆಡುತ್ತಿದ್ದಾರೆ. ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಹಿಂದೂಗಳ ಅಂಗಡಿಯಲ್ಲಿ ಮುಸ್ಲಿಮರು ಮಾಂಸ ಖರೀದಿಸುವುದಿಲ್ಲ. ಪತಂಜಲಿ, ರಿಲಯನ್ಸ್‌ ಮೊದಲಾದ ಕಂಪನಿಗಳ ಉತ್ಪನ್ನಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಮುಸ್ಲಿಂ ಮುಖಂಡರು ಹೇಳಿದ್ದರು. ಅದಕ್ಕೆ ಉತ್ತರವನ್ನು ಈಗ ಕೊಡುತ್ತಿದ್ದೇವೆ. ಕ್ರಿಯೆಗೆ ಪ್ರತಿಕ್ರಿಯೆ ಇದಾಗಿದೆ. ದೇಶದಲ್ಲಿ ಇರಬೇಕಾದರೆ ಸಂವಿಧಾನ-ಕಾನೂನು ಗೌರವಿಸಬೇಕು. ಬಹುಸಂಖ್ಯಾತ ಹಿಂದೂ ಸಮಾಜದ ಸಂಸ್ಕೃತಿ-ಸಂಪ್ರದಾಯವನ್ನು ಗೌರವದಿಂದ ಕಾಣಬೇಕು. ಇಲ್ಲವಾದರೆ ಎದುರಿಸಲಿ’ ಎಂದು ಸವಾಲು ಹಾಕಿದರು.

 

 

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

4 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

4 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

4 days ago