ಪುಣೆ : ಮುಸ್ಲಿಂ ನಾಯಕರಿಗೆ ಮೂಲಭೂತವಾದದ ವಿರುದ್ಧ ದೃಢವಾದ ನಿಲುವು ಕೈಗೊಳ್ಳುವಂತೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ಪುಣೆಯಲ್ಲಿ ಗ್ಲೋಬಲ್ ಸ್ಟ್ರಾಟೆಜಿಕ್ ಪಾಲಿಸಿ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮುಸ್ಲಿಂ ಸಮುದಾಯದ ಪ್ರಜ್ಞಾವಂತ ನಾಯಕರು ಉಗ್ರವಾದವನ್ನು ವಿರೋಧಿಸಬೇಕು. ಮತಾಂಧರ ವಿರುದ್ದ ಅವರು ದೃಢವಾಗಿ ಮಾತನಾಡಬೇಕು. ಈ ಕಾರ್ಯಕ್ಕೆ ದೀರ್ಘ ಪ್ರಯತ್ನ ಹಾಗೂ ತಾಳ್ಮೆಯ ಅಗತ್ಯ ಇದೆ. ನಮಗೆಲ್ಲರಿಗೂ ಇದು ದೀರ್ಘ ಹಾಗೂ ಕಠಿಣವಾದ ಪರೀಕ್ಷೆಯಾಗಿದೆ. ಈ ಪ್ರಯತ್ನವನ್ನು ನಾವು ಎಷ್ಟು ಬೇಗ ಆರಂಭಿಸುತ್ತೇವೆಯೋ ಅದು ನಮ್ಮ ಸಮಾಜಕ್ಕೆ ಕಡಿಮೆ ಹಾನಿ ಮಾಡುತ್ತದೆ” ಎಂದಿದ್ದಾರೆ
“ಭಾರತದಲ್ಲಿ ವಾಸಿಸುವ ಹಿಂದೂಗಳು ಹಾಗೂ ಮುಸ್ಲಿಂಮರು ಒಂದೇ ಆಗಿದ್ದಾರೆ. ಪ್ರತಿಯೋರ್ವ ಭಾರತೀಯನು ಹಿಂದೂ. ದೇಶದ ಸಂವೇದನಾಶೀಲ ಮುಸ್ಲಿಂ ನಾಯಕರು ಮೂಲಭೂತವಾದಿಗಳ ವಿರುದ್ದ ದೃಢವಾಗಿ ಎದ್ದುನಿಲ್ಲಬೇಕು” ಎಂದು ಹೇಳಿದ್ದಾರೆ.
“ಭಾರತದಲ್ಲಿ ಅಲ್ಪಸಂಖ್ಯಾತರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಏಕೆಂದರೆ, ಹಿಂದೂಗಳು ಯಾರೊಂದಿಗೂ ಕೂಡಾ ದ್ವೇಷ ಕಟ್ಟಿಕೊಳ್ಳುವುದಿಲ್ಲ. ಮುಸ್ಲಿಂ ಪ್ರಾಬಲ್ಯದ ಬಗ್ಗೆ ಯೋಚಿಸಬೇಕಿಲ್ಲ. ಆದರೆ, ಭಾರತದ ಪ್ರಾಬಲ್ಯದ ಕುರಿತು ಖಂಡಿತವಾಗಿ ನಾವು ಯೋಚಿಸಬೇಕಿದೆ. ಭಾರತದ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲರೂ ಜೊತೆಯಾಗಿ ಶ್ರಮಿಸಬೇಕಿದೆ” ಎಂದು ತಿಳಿಸಿದ್ದಾರೆ.
“ಇಸ್ಲಾಂ ಎನ್ನುವುದು ಭಾರತಕ್ಕೆ ಆಕ್ರಮಣಕಾರರೊಂದಿಗೆ ಬಂದಿದ್ದು, ಇದು ಇತಿಹಾಸ ಕೂಡಾ ಹೌದು. ಬುದ್ದಿವಂತ ಮುಸ್ಲಿಂ ನಾಯಕರು ಅನಗತ್ಯವಾದ ಸಮಸ್ಯೆಗಳನ್ನು ವಿರೋಧಿಸಬೇಕು” ಎಂದಿದ್ದಾರೆ.
ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…
ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…
ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…
ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…
ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…
ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…