ಯಾದಗಿರಿ: ತಾಕತ್ತಿದ್ದರೆ ಎಲ್ಲರಿಗೂ ಹಿಜಬ್ ತೊಡಿಸಿ ಎಂದು ಆರ್‍ಎಸ್‍ಎಸ್ ಮುಖಂಡ ಡಾ.ಹಣಮಂತ ಮಳಲಿ ಮುಸ್ಲಿಮರಿಗೆ ಸವಾಲೆಸೆದಿದ್ದಾರೆ.
ಯಾದಗಿರಿಯ ಸೈದಾಪುರದಲ್ಲಿ ಹಿಜಬ್ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಸಿನಿಮಾ ನಟಿಯರಿಗೆ, ಶಾರೂಖ್ ಖಾನ್ ಮಗಳಿಗೆ ಹಿಜಬ್ ತೋಡಿಸೋಕೆ ಗಂಡಸ್ತನ ಇಲ್ವಾ..? ಬಡವರ ಮಕ್ಕಳಿಗೆ ಹಿಜಬ್ ಹಾಕಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡ್ತಿದ್ದೀರಿ. ಕಾನೂನು ಪಾಲನೆ ಮಾಡಿ ಅಂತ ಕೋರ್ಟ್ ಹೇಳಿದೆ. ಶಾಲೆಯಲ್ಲಿ ಸಮವಸ್ತ್ರ ಅಂತ ಕೋರ್ಟ್ ಆದೇಶ ನೀಡಿದೆ. ಹಿಜಬ್ ನಿಂದಾಗಿ ಹಿಂದೂಗಳು ಎಚ್ಚರ ಆಗಿದ್ದಾರೆ. ಹಿಜಬನ್ನು ಮನೆ ಅಥವಾ ಅವರ ಅಪ್ಪನ ಮುಂದೇನಾದರೂ ಹಾಕೊಳ್ಳಲಿ. ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಬ್ ಹಾಕಿಸಿ ಎಂದು ವಾಗ್ದಾಳಿ ನಡೆಸಿದರು.
ವ್ಯಾಪಾರಕ್ಕೆ ಮುಸಲ್ಮಾನರಿಗೆ ನಿರ್ಬಂಧಕ್ಕೆ ಹಣಮಂತ ಮಳಲಿ ಸಮರ್ಥನೆ ನೀಡಿದ್ದಾರೆ. ಮಾರ್ಕೆಟ್ ಬಂದ್ ಮಾಡಿ ಹಿಂದೂಗಳಿಗೆ ತೊಂದ್ರೆ ಕೊಡೋದು ಇನ್ಮುಂದೆ ನಡೆಯಲ್ಲ. ಇದರಿಂದಾಗಿ ನಿಮ್ಮ ವ್ಯಾಪಾರ ನಿರಂತರ ಬಂದ್ ಆಗುತ್ತೆ. ನೀವೇ(ಮುಸಲ್ಮಾನರೇ) ಹೇಳಿಕೊಟ್ಟಿದ್ದು ಹಿಂದೂಗಳ ಹತ್ರ ಖರೀದಿ ಮಾಡಬೇಡಿ ಅಂತ. ಮೊದಲು ಹೇಳಿಕೊಟ್ಟಿದ್ದು ನೀವೇ, ಈಗ ಹಿಂದೂಗಳು ಮಾಡ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…