ಪಾಟ್ನಾ, : ದೇಶದಲ್ಲಿ ಧರ್ಮಾಂಧತೆ ಹಾಗೂ ಕೋಮು ಗಲಭೆಯ ಘಟನೆಗಳು ಹೆಚ್ಚುತ್ತಿರುವ ನಡುವೆ ಬಿಹಾರದ ನಲಂದಾ ಜಿಲ್ಲೆಯ ಗ್ರಾಮವೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ನಲಂದಾ ಜಿಲ್ಲೆಯ ಮಾಧಿ ಗ್ರಾಮದಲ್ಲಿ ಮುಸ್ಲಿಮರಿಲ್ಲ. ಆದರೆ, ಇಲ್ಲಿನ 200 ವರ್ಷಗಳ ಹಳೆಯ ಮಸೀದಿಯೊಂದರಲ್ಲಿ ಹಿಂದೂಗಳು ಪ್ರತಿದಿನ ಐದು ಬಾರಿ ನಮಾಝ್ ಮಾಡುತ್ತಿದ್ದಾರೆ. ಅಲ್ಲದೆ, ಹಿಂದೂಗಳೇ ಮಸೀದಿಯನ್ನು ನಿರ್ವಹಿಸುತ್ತಿದ್ದಾರೆ.
”ನಮಗೆ (ಹಿಂದೂಗಳು) ಆಝಾನ್ ತಿಳಿದಿಲ್ಲ. ಆದರೆ, ಪೆನ್‌ಡ್ರೈವ್‌ನಲ್ಲಿ ರೆಕಾರ್ಡಿಂಗ್ ಮಾಡಿದ ಆಝಾನ್ ಅನ್ನು ಧ್ವನಿವರ್ಧಕದಲ್ಲಿ ನುಡಿಸಲಾಗುತ್ತದೆ” ಎಂದು ಗ್ರಾಮದ ನಿವಾಸಿ ಹನ್ಸ್ ಕುಮಾರ್ ಹೇಳಿದ್ದಾರೆ. ಮಾಧಿಯಲ್ಲಿ ಗಣನೀಯ ಸಂಖ್ಯೆಯ ಮುಸ್ಲಿಮರು ಇದ್ದರು. ಆದರೆ, ಅವರು ಕ್ರಮೇಣ ವಲಸೆ ಹೋದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
”ಮಸೀದಿ ನಿರ್ವಹಿಸಲು ಯಾರೊಬ್ಬರೂ ಇರಲಿಲ್ಲ. ಆದುದರಿಂದ ಹಿಂದೂಗಳು ಮುಂದೆ ಬಂದರು” ಎಂದು ಮಸೀದಿ ನಿರ್ವಹಿಸುತ್ತಿರುವ ಗೌತಮ್ ಹೇಳಿದ್ದಾರೆ. ಮಸೀದಿಯನ್ನು ಯಾವಾಗ ನಿರ್ಮಾಣ ಮಾಡಲಾಯಿತು ಹಾಗೂ ಯಾರು ನಿರ್ಮಾಣ ಮಾಡಿದರು ಎಂಬ ಬಗ್ಗೆ ಯಾರೊಬ್ಬರಿಗೂ ತಿಳಿದಿಲ್ಲ. ಆದರೆ, ಹಿಂದೂಗಳು ಯಾವುದೇ ಶುಭ ಸಮಾರಂಭದ ಮುನ್ನ ಮಸೀದಿಗೆ ಭೇಟಿ ನೀಡುತ್ತಾರೆ ಎಂದು ಅವರು ತಿಳಿಸಿದ್ದಾರೆ.
”ಮಸೀದಿಯನ್ನು ದಿನನಿತ್ಯ ಸ್ವಚ್ಚಗೊಳಿಸಲಾಗುತ್ತದೆ. ಅಲ್ಲದೆ, ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ತಮಗೆ ಸಮಸ್ಯೆ ಎದುರಾದಾಗ ಕೂಡ ಜನರು ಇಲ್ಲಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ” ಎಂದು ಗ್ರಾಮದ ಅರ್ಚಕ ಜಾಂಕಿ ಪಂಡಿತ್ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…
ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…
ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…
ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…