ಚಿಕ್ಕಮಗಳೂರು: ಮುಸ್ಲಿಮರು ಎಲ್ಲೂ ಈಶ್ವರ ಅಲ್ಹಾ ತೇರೇ ನಾಮ್ ಅಂತ ಹೇಳಿಲ್ಲ, ನಾನಂತೂ ಹೇಳಿದ್ದನ್ನು ಕೇಳಿಲ್ಲ. ಮಸೀದಿಗಳಲ್ಲೂ ಹೇಳಿಕೊಟ್ಟಿಲ್ಲ. ಮದ್ರಾಸಗಳಲ್ಲಿ ಹೇಳಿಕೊಟ್ಟಿದ್ರೆ ಭಯೋತ್ಪಾದಕರುಗಳೇ ಇರುತ್ತಿರಲಿಲ್ಲ ಎಂದು ಎಂಎಲ್‌ಸಿ ಸಿ.ಟಿ ರವಿ ಹೇಳಿದರು.
ದತ್ತಪೀಠದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಹಿಂದೂಗಳು ರಾಮ್ ರಹೀಮ್ ಒಂದೇ ಎಂದು ಹೇಳ್ತಿದ್ದೀವಿ, ಮುಸ್ಲಿಮರು ಹೇಳ್ತಿಲ್ಲ. ರಾಮ್ ರಹೀಮ್ ಒಂದೇ ಎಂದು ಅವರು ಹೇಳಿಕೊಟ್ಟಿದ್ರೆ ಜಗಳಗಳು ಆಗ್ತಿರಲಿಲ್ಲ. ನಾವು ಅಲ್ಹಾ ದೇವ್ರು ಅನ್ನೋಕೆ ತೊಂದರೆ ಇಲ್ಲ. ನಮ್ಮ ಪರಂಪರೆ ಅದಕ್ಕೆ ಅವಕಾಶ ಕೊಡುತ್ತೆ. ಸಂಕುಚಿತ ಮನೋಭಾವದವರು ಬದಲಾಗಬೇಕು ಎಂದರು.
ಇಸ್ಲಾಂ ಹೆಸರಲ್ಲಿ ಅನ್ಯ ಧಾರ್ಮಿಕ ಕ್ಷೇತ್ರ ಕಬಳಿಸೋದು ಅನಾಗರೀಕತೆ, ಅಧರ್ಮ. ನಾಶ ಮಾಡೋದು ಧರ್ಮ ಆಗಲು ಸಾಧ್ಯವಿಲ್ಲ. ಸನಾತನ ಧರ್ಮ ಭಾರತೀಯ ಸ್ತ್ರೀಯರನ್ನ ಗೌರವಿಸುವ ಸಂಸ್ಕೃತಿ ಇದೆ. ಆದರೆ ಪರಸ್ತ್ರೀ ಮೇಲೆ ಅತ್ಯಾಚಾರ ಮಾಡು, ಅನ್ನೋದು ಧರ್ಮ ಆಗಲು ಸಾಧ್ಯವಿಲ್ಲ. ಇಸ್ಲಾಂ ಹೆಸರಲ್ಲಿ ಬಲತ್ಕಾರ, ಲೂಟಿ, ಮತಾಂತರ ಮಾಡಿದ್ದಾರೆ. ಇದನ್ನ ಭಾರತೀಯ ನಿದರ್ಶನಗಳು ಧರ್ಮ ಅನ್ನಲ್ಲ, ಪೈಶಾಚಿಕ ಮತ ಎನ್ನಬಹುದು ಎಂದು ವಾಗ್ದಾಳಿ ನಡೆಸಿದರು.
ಪೈಶಾಚಿಕ ಪರಂಪರೆಯನ್ನು ಧರ್ಮ ಅಂತ ಹೇಳಲು ಆಗಲ್ಲ. ಪಿಚಾಚಿಗಳ ಧರ್ಮ, ರಾಕ್ಷಸರ ಧರ್ಮ ಅಂತ ಹೇಳಬಹುದು. ಇನ್ನೊಬ್ಬರನ್ನ ನಾಶ ಮಾಡಲು ಹೋಗಿ ನೀವು ನಾಶವಾಗ್ತೀರಿ, ನಾಶ ಮಾಡೋದೆ ಉದ್ದೇಶವಾದ್ರೆ ನಾವ್ಯಾರು ತಡೆಯಲು ಆಗಲ್ಲ. ಮೋಸ ಹೆಚ್ಚು ಕಾಲ ನಡೆಯಲ್ಲ, ಕಳ್ಳನ ಹೆಂಡ್ತಿ ಯಾವತ್ತಿದ್ರು.. ಅದು ಆಗೇ ಆಗ್ತೀರಾ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…