ಬಳ್ಳಾರಿ: ‘ನಮ್ಮ ದೇಶದಲ್ಲಿ ಇರಬೇಕೆಂದರೆ ನಾವು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಬೇರೆಯೇ ಆಗುತ್ತೆ. ಹಿಂದೂಗಳನ್ನು ಕೆಣಕಬೇಡಿ’ ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ಎಚ್ಚರಿಕೆ ನೀಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಶುಕ್ರವಾರ ನಗರದಲ್ಲಿ ನಡೆದ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ ಭದ್ರತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ತರಲಾಗಿದ್ದು, ಅದನ್ನು ಎಲ್ಲರೂ ಬೆಂಬಲಿಸಬೇಕು. ಕಾಯ್ದೆ ವಿರೋಧಿಸಿ ಮತ್ತೊಂದು ಸಲ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರೆ ನಾವು ಸುಮ್ಮನೆ ಕೂರಲ್ಲ. ದೇಶದಿಂದ ಹೊರಗೆ ಹಾಕುತ್ತಾರೆ ಎಂಬ ಭಯವಿದ್ದವರು ದೇಶಬಿಟ್ಟು ಹೋಗಬೇಕು. ಇಂದಿನ ರ್‍ಯಾಲಿಯಲ್ಲಿ ಶೇ 5ರಷ್ಟು ಜನ ಬಂದಿದ್ದಾರಷ್ಟೆ. ಜಾಸ್ತಿ ನಕ್ರಾ ಮಾಡಿದರೆ ಇನ್ನುಳಿದ ಶೇ 95ರಷ್ಟು ಜನ ಬರುತ್ತಾರೆ. ಆಗ ಕಾಯ್ದೆ ವಿರೋಧಿಸುವವರು ಯಾರೂ ಉಳಿಯುವುದಿಲ್ಲ’ ಎಂದು ಅವರು ಹೇಳಿದರು.
‘ಯಾರೂ ನಮ್ಮ ತಾಳ್ಮೆ, ಶಾಂತಿ ಪರೀಕ್ಷಿಸಬೇಡಿ. ನಮ್ಮ ದೇಶ, ಪೊಲೀಸರ ಮೇಲೆ ದಾಳಿ ನಡೆಸಿದರೆ ಸರಿಯಿರುವುದಿಲ್ಲ. ಕಾಂಗ್ರೆಸ್ ಪುಢಾರಿಗಳು ಸುಳ್ಳು ಹೇಳಿ ದಂಗೆ ಎಬ್ಬಿಸುತ್ತಿದ್ದಾರೆ. ಪಾಕಿಸ್ತಾನಕ್ಕೆ ಹೋಗುವ ಆಸೆ ಇದ್ದವರು ಹೋಗಬಹುದು. ಎಲ್ಲರೂ ಅಣ್ಣ ತಮ್ಮಂದಿರಂತೆ ಇದ್ದೇವೆ. ಹಾಗೆಯೇ ಇರೋಣ. ಶತ್ರುಗಳ ರೀತಿ ವರ್ತಿಸಿದರೆ ನಮ್ಮ ಉಗ್ರ ರೂಪ ತೋರಿಸಬೇಕಾಗುತ್ತದೆ’ ಎಂದು ಅವರು ಗುಡುಗಿದರು.
‘ಈ ಸೋಮಶೇಖರ ರೆಡ್ಡಿ ಭಯಂಕರ ದೇಶಭಕ್ತ. ನಾನು ಸತ್ತ ಮೇಲೆ ನನ್ನ ಶವ ಕೂಡ ‘ಭಾರತ್ ಮಾತಾಕೀ ಜೈ’ ಎಂದು ಹೇಳುತ್ತೆ. ನಿಮ್ಮಂತೆ ನಾವು ಕಳ್ಳ ಭಕ್ತರಲ್ಲ. ನಿಜವಾದ ಭಕ್ತರು. ನಮಗಾದರೆ ಫ್ಯಾಮಿಲಿ ಪ್ಲ್ಯಾನಿಂಗ್. ನಿಮಗೆ ಇಲ್ಲವೇ. ನಾವು ಒಬ್ಬೊಬ್ಬರು 50 ಜನರನ್ನು ಹುಟ್ಟಿಸಿ ಜನಸಂಖ್ಯೆ ಹೆಚ್ಚಿಸುತ್ತೇವೆ’ ಎಂದು ಅವರು ಹೇಳಿದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…