ಮೂಡಬಿದಿರೆ : ದನ ಕಳ್ಳರ ಹಾವಳಿ : ರಕ್ಷಣೆಗೆ ದೈವ, ದೇವರಿಗೆ ಮೊರೆ -Vishwanews24

ಮೂಡಬಿದಿರೆ : ದನ ಕಳ್ಳರ ಹಾವಳಿಯಿಂದ ರೋಸಿ ಹೋಗಿರುವ ಮಾಂಟ್ರಾಡಿ ಗ್ರಾಮದ ಪೆಂಚಾರಿನ ಗ್ರಾಮಸ್ಥರೊಬ್ಬರು ದೈವ, ದೇವರಿಗೆ ಮೊರೆ ಹೋಗಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪರಿಸರಗಳಲ್ಲಿ ದನ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ಮೇವಿಗೆಂದು‌ ಹೊರಟ ದನಗಳು ಮನೆ ಸೇರದೆ ಕಳ್ಳಕಾಕರ ಕೈಗೆ ಸಿಕ್ಕಿ ಕಸಾಯಿಖಾನೆ ಸೇರುತ್ತಿದೆ. ಹಲವು ಪೋಲೀಸ್‌ ದೂರುಗಳು ದಾಖಲಾದರೂ ದನ ಕಳೆದುಕೊಂಡವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸಾಲ ಮಾಡಿ ದನ ಖರೀದಿಸಿ ಜೀವನ ಸಾಗಿಸುತ್ತಿರುವ ಬಡ ಕುಟುಂಬದ ದನಗಳನ್ನು ಕಳ್ಳತನ ಮಾಡುತ್ತಿರುವುದು ಹೆಚ್ಚಾಗಲಾರಂಭಿಸಿದೆ.

ದನ‌ಕಳ್ಳರ ಕಾಟ ತಡೆಯಲಾರದೆ ಜಿಲ್ಲೆಯ ಜನ ದೈವ-ದೇವರುಗಳ ಮೊರೆ ಹೋಗಿದ್ದಾರೆ‌. ದನ ಕಳ್ಳರ ಮೇಲೆ ಧರ್ಮಸ್ಥಳ, ಪಣೊಲಿಬೈಲು,ಮಾರಣಬೆಟ್ಟು, ಕೊರಗಜ್ಜ ಮೊದಲಾದ ದೈವಗಳಿಗೆ‌ ಹರಕೆ ಹೊರಲಾಂಭಿಸಿದ್ದಾರೆ. ದನ ಕಳ್ಳತನ ಮಾಡಿದವರು ಹುಚ್ಚರಂತೆ ತಿರುಗಾಡಬೇಕು ಎಂದು ದೇವರ ಮೊರೆ ಹೋಗಿರುತ್ತೇವೆ-ನೊಂದ ದನಗಳ ಯಾಜಮಾನರು’ ಎಂದು ಫ್ಲೆಕ್ಸ್‌ನಲ್ಲಿ ಮುದ್ರಿಸಲಾಗಿದೆ. ಕಳವಾದ ದನದ ಚಿತ್ರವನ್ನು ಕೂಡ ಪ್ರಕಟಿಸಲಾಗಿದೆ.

Vishwa News 24

Recent Posts

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

17 hours ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

17 hours ago

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು – vishwanews24

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…

17 hours ago

ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ – vishwanews24

ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…

17 hours ago

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ – vishwanews24

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…

17 hours ago

ಕೋಳಿಮರಿ ವಿತರಣೆ : ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ – vishwanews24

 ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ  ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…

17 hours ago