ಕೊಪ್ಪಳ: ಎಲ್ಲ ಪಕ್ಷಗಳು ಒಂದಾಗಿ ಸರಕಾರ ರಚಿಸಲಿ. ಕರ್ನಾಟಕದಲ್ಲಿ ಮತ್ತೆ ಚುನಾವಣೆ ಆಗಬಾರದು ಎಂದು ಎಂದು ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವೇಶ್ವರ ತೀರ್ಥ ಶ್ರೀಗಳು ಹೇಳಿದ್ದಾರೆ..
ಎಲ್ಲರೂ ಅಧಿಕಾರಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಮೂರೂ ಪಕ್ಷಗಳು ಜಗಳವಾಡಿಕೊಂಡಿವೆ. ಬಿಜೆಪಿ ಹಿಂದೂಪರ ಇದೆ ಎಂದು ವಿರೋಧಿಸಿ ಎರಡು ಪಕ್ಷಗಳು ಮೈತ್ರಿ ಸರ್ಕಾರ ಮಾಡಿಕೊಂಡಿವೆ. ಈಗ ಈ ಸರ್ಕಾರದಲ್ಲೂ ಜಗಳವಾಗಿದೆ. ಬಿಜೆಪಿ ಸರ್ಕಾರ ಬಂದರೂ ಈ ಸಮಸ್ಯೆ ನಿಂತು ಹೋಗುವುದಿಲ್ಲ. ಈ ಸ್ಥಿತಿಯಲ್ಲಿ ಸರ್ವಪಕ್ಷಗಳ ಆಡಳಿತವೇ ಸರಿಯಾದ ಕ್ರಮ ಎಂದು ಶ್ರೀಗಳು ಪ್ರತಿಪಾದಿಸಿದ್ದಾರೆ.
ಬಹುಮತ ಇಲ್ಲದಿದ್ದಾಗ ಯಾವಾಗಲೂ ಪಕ್ಷಾಂತರದ ಭಯ ಇದ್ದೇ ಇರುತ್ತದೆ. ರಾಜೀನಾಮೆ ಕೊಡುವುದು ಮತ್ತು ಅದೇ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯುವುದು ಇರುತ್ತದೆ. ಆಗ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಬಿಜೆಪಿಯವರು ಸರ್ಕಾರ ರಚಿಸಿದರೂ ಭದ್ರ ಎಂದು ಹೇಳಲು ಆಗುವುದಿಲ್ಲ. ಅಲ್ಲಿಯೂ ಈ ಸಮಸ್ಯೆ ಪ್ರಾರಂಭವಾಗುತ್ತದೆ. ರೆಸಾರ್ಟ್ ರಾಜಕೀಯ ಮತ್ತೆ ನಡೆಯುತ್ತದೆ. ಎಲ್ಲರನ್ನೂ ಮಂತ್ರಿ ಮಾಡೋಕೆ ಸಾಧ್ಯವಿಲ್ಲ ಎಂದು ವಿಶ್ವೇಶ್ವರ ತೀರ್ಥ ಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯೂ ಸಹ ಜಾತ್ಯತೀತ ಪಕ್ಷವಾಗಿದೆ. ಮೂರು ಪಕ್ಷಗಳು ಒಂದಾಗಿ ಸರ್ಕಾರ ಮಾಡಬಹುದು. ಇಂಥ ಸಂದರ್ಭದಲ್ಲಿ ವಿಪಕ್ಷವಿಲ್ಲದೆ ಸರ್ಕಾರ ಮಾಡಿದರೆ ರಾಜ್ಯದ ಅಭಿವೃದ್ಧಿ ಆಗುತ್ತದೆ. ಒಂದು ಪೂರ್ಣ ಬಹುಮತದ ಸರ್ಕಾರ ಇರಬೇಕು. ಇಲ್ಲವೇ ಎಲ್ಲಾ ಪಕ್ಷಗಳ ಸರ್ಕಾರ ಇರಬೇಕು ಎಂದು ಪೇಜವಾರಶ್ರೀಗಳು ಹೇಳಿದ್ಧಾರೆ.
ಈ ಹಿಂದೆ ಚುನಾವಣೆಗೆ ಮುನ್ನ ಎಲ್ಲ ಪಕ್ಷಗಳು ಬೈದಾಡಿಕೊಂಡಿದೆ. ವಾಕ್ಸಮರ ನಡೆಸಿದೆ. ನಂತರ ಒಂದಾಗಿ ಸರಕಾರ ರಚಿಸಿದೆ. ಈಗಲೂ ಜಗಳ ಮುಂದುವರಿದಿದೆ. ಹೀಗಾಗಿ ಎಲ್ಲ ಪಕ್ಷಗಳು ಒಂದಾಗಿ ಸರಕಾರ ರಚಿಸಲಿ ಎಂದು ಶ್ರೀಗಳು ಸಲಹೆ ನೀಡಿದ್ದಾರೆ.
ಸುರತ್ಕಲ್ ಬಾಲಕಿ ಆತ್ಮಹತ್ಯೆ ಪ್ರಕರಣ : ಪೋಷಕರ ನಡೆ ಕುರಿತು ವಿಷಾದ ವ್ಯಕ್ತಪಡಿಸಿದ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಂಗಳೂರು …
ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್‌ಮಾಲ್ ಆಗಿಲ್ಲ: ಮಹಿಳಾ & ಮಕ್ಕಳಾಭಿವೃದ್ಧಿ ಇಲಾಖೆ ಸ್ಪಷ್ಟನೆ ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಾಲೋಪವಾಗಿದೆ ಅಂತ ಸಿಎಜಿ…
ನನ್ನ , ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ , ಆತ್ಮೀಯತೆಯೂ ಇಲ್ಲ : ವಿಜಯೇಂದ್ರ ಮಂಗಳೂರು :…
ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪ: ಎಂಟು ಆರೋಪಿಗಳ ಬಂಧನ ಅಯೋಧ್ಯೆ: ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತಾದಿಗಳು ನೀಡಿದ್ದ…
ಆರ್ ಎಸ್ ಎಸ್ ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ನಡೆಸಿಕೊಂಡು ಬಂದಿದೆ : ಸತ್ಯಜಿತ್ ಸುರತ್ಕಲ್ ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ…
ಪಾಸ್‌ಪೋರ್ಟ್ ಶುಲ್ಕ ಹೆಚ್ಚಿಸಿದ ಕೇಂದ್ರ ಸರ್ಕಾರ; ಜು.1 ರಿಂದ ಹೊಸ ದರ ಜಾರಿಗೆ ನವದೆಹಲಿ: 14 ವರ್ಷಗಳಲ್ಲಿ ಇದೇ ಮೊದಲ…