ಯಾರು ದೇಶಪ್ರೇಮಿ, ದೇಶದ್ರೋಹಿ ಹಿಂದುಗಳ ಮಕ್ಕಳ ಆಧಾರದಲ್ಲಿ ನಿರ್ಧರಿಸುವುದು ಖಂಡನೀಯ – ಸಂತೋಷ್ ಗುರೂಜಿ ಹೇಳಿಕೆಗೆ ಅನ್ಸಾರ್ ಉಡುಪಿ ತಿರುಗೇಟು
ಉಡುಪಿ : ಮೂರು ಮಕ್ಕಳನ್ನು ಹೊಂದದ ಹಿಂದೂಗಳೆಲ್ಲ ದೇಶದ್ರೋಹಿಗಳು ಎಂದು ಭಾರತೀಯರ ದೇಶಪ್ರೇಮವನ್ನು ಅವರು ಹೆತ್ತಮಕ್ಕಳ ಸಂಖ್ಯೆಯ ಆಧಾರದ ಮೇಲೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ವಿವಾದಾತ್ಮಕ ಅಸಂವಿಧಾನಾತ್ಮಕ ಹೇಳಿಕೆ ನೀಡಿದ ಸಂತೋಷ್ ಗುರೂಜಿಯವರ ಹೇಳಿಕೆ ಖಂಡನೀಯ ಎಂದು ಅನ್ಸಾರ್ ಅಹ್ಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದ ರಕ್ಷಣೆಗೆ, ಭಾರತದ ಅಭಿವೃದ್ದಿಗೆ ಅದೆಷ್ಟೋ ಹಿಂದೂ ಸಮಾಜದ ಸಾದು ಸಂತರು, ಸ್ವಾಮೀಜಿಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರೆಲ್ಲ ಸನ್ಯಾಸತ್ವ ಸ್ವೀಕರಿಸಿ ದೇಶದ ಅಭಿವೃದ್ದಿಗೆ, ಹಿಂದೂ ಸಮಾಜದ ಅಭಿವೃದ್ದಿಗೆ ಶ್ರಮಿಸಿದವರು. ಅವರೆಲ್ಲರಿಗೆ ಸಂಸಾರ ಮಕ್ಕಳು ಎಂಬುದು ಇಲ್ಲ.
ಹಾಗಾದರೆ ಅವರೆಲ್ಲರೆಲ್ಲರನ್ನೂ ದೇಶ ದ್ರೋಹಿಗಳು ಅಂತ ಭಾವಿಸಬೇಕೇ,? ಅಲ್ಲದೇ ಸಂತೋಷ್ ಗುರೂಜಿಯವರಿಗೆ ಎಷ್ಟು ಮಕ್ಕಳಿದ್ದಾರೆ. ಒಂದು ವೇಳೆ ಮಕ್ಕಳು ಇಲ್ಲವೆಂದಾದರೆ ನಾವು ಅವರನ್ನು ದೇಶ ಪ್ರೇಮಿ ಅಂತ ಪರಿಗಣಿಸಬೇಕೋ, ದೇಶ ದ್ರೋಹಿಅಂತ ಪರಿಗಣಿಸಬೇಕೋ ಎಂದು ಅನ್ಸಾರ್ ಪ್ರಶ್ನಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…