ಮೂಲ್ಕಿ: ಪಿಎಫ್‌ಐ ನಿಷೇಧದ ಹಿನ್ನೆಲೆಯಲ್ಲಿ ಎನ್‌ಐಎ ವತಿಯಿಂದ ಬಂಧಿತನಾಗಿರುವ ಹಳೆಯಂಗಡಿಯ ಮೊಯ್ದಿನ್ ಅವರು ನ್ಯಾಯಾಂಗ ಬಂಧನದಲ್ಲಿದ್ದರೆ ಅವರ ಪತ್ನಿ ಸೌದಾ ಅವರು ಅಸೌಖ್ಯದಿಂದ ನಿಧನ ಹೊಂದಿದ್ದು, ಇದೀಗ ಅವರ ನಾಲ್ಕು ಮಂದಿ ಪುಟ್ಟ ಮಕ್ಕಳು ಅನಾಥರಾಗಿ ಸಂಬಂಧಿಕರ ಮಡಿಲು ಸೇರುವಂತಾಗಿದೆ.
ಹಳೆಯಂಗಡಿ ಸಮೀಪದ ಇಂದಿರಾ ನಗರ ನಿವಾಸಿ ಮೊಯ್ದಿನ್ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಎಸ್ ಡಿಪಿಐ ಮುಖಂಡನಾಗಿದ್ದು, ಆತನನ್ನು ಎನ್ಐಎ ಅಧಿಕಾರಿಗಳು ಇತ್ತೀಚೆಗೆ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರ ಪತ್ನಿ ಸೌದಾ ಡಿಸೆಂಬರ್ 6 ರಂದು ನಿಧನ ಹೊಂದಿದ್ದು, ಅವರ ಅಂತ್ಯ ಕ್ರಿಯೆಗೆ ಡಿಸೆಂಬರ್ 7 ರಂದು ಮಧ್ಯಾಹ್ನ ಮೊಯ್ದಿನ್‌ನನ್ನು ಪೊಲೀಸ್ ರಕ್ಷಣೆಯಲ್ಲಿ ಪೆರೋಲ್ ಮೇಲೆ ಹಳೆಯಂಗಡಿಗೆ ಕರೆ ತಂದು ಪತ್ನಿಯ ಅಂತಿಮ ದರ್ಶನ ಮಾಡಿಸಿ ರಾತ್ರಿ ಸುಮಾರು ಏಳು ಗಂಟೆ ವೇಳೆಗೆ ಪೊಲೀಸರು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಮೊಯ್ದಿನ್‌ಗೆ ಒಂದು ವರ್ಷದ ಗಂಡು ಮಗು ಸೇರಿದಂತೆ ನಾಲ್ಕು ಪುಟ್ಟ ಮಕ್ಕಳಿದ್ದಾರೆ.
ನಿನ್ನೆ ತಮ್ಮ ತಂದೆ ಪೊಲೀಸ್ ಬೆಂಗಾವಲಿನಲ್ಲಿ ಮನೆಗೆ ಬಂದಾಗ ಮಕ್ಕಳ ಆನಂದಕ್ಕೆ ಪಾರವೇ ಇರಲಿಲ್ಲ. ತಂದೆ ಬಂದರೆಂದು ಅಪ್ಪನನ್ನು ಅಪ್ಪಿಕೊಂಡು ಸಂತಸದಲ್ಲಿ ತೇಲಾಡಿದ್ದರು. ಮೊಯ್ದಿನ್ ತನ್ನ ಮಕ್ಕಳ ಜತೆ ಮಾತನಾಡಿ ಆವರನ್ನು ಮುದ್ದಿಸಿ ಸಂತೈಸಿದ್ದನು.
ಮೊಯ್ದೀನ್ ಅವರ ಬಂಧನದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಪಿಎಫ್ಐ ನಿಷೇಧದ ವೇಳೆ ಬಂಧನವಾಗಿರುವ ಇವರು ಅಮಾಯಕರು ಅವರನ್ನು ಕಠಿಣ ಕಾಯ್ದೆಯಡಿ ಸರಕಾರ ಬಂಧಿಸಿ ಜೈಲಿಗೆ ಹಾಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಕೇಳಿ ಬಂದಿದೆ.
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…