Featured

ಮೂಳೂರು: ಕಾರು ಢಿಕ್ಕಿ; ಉದ್ಯಮಿ ಬಾಲಕೃಷ್ಣ ಜಿ. ಪೂಜಾರಿ ಸಾವು – Vishwanews24

ಮೂಳೂರು: ಕಾರು ಢಿಕ್ಕಿ; ಉದ್ಯಮಿ ಬಾಲಕೃಷ್ಣ ಜಿ. ಪೂಜಾರಿ ಸಾವು ..

ಮೂಳೂರು ಬಿಲ್ಲವ ಸಂಘ ಸಂತಾಪ

ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು ಬಿಲ್ಲವರ ಸಂಘದ ಮುಂಭಾಗದಲ್ಲಿ ರವಿವಾರ (ಜ.15) ಸಂಜೆ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ (ಜ.16) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.‌

ಅಪಘಾತದ ಗಾಯಾಳು ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷ, ಮುಂಬಯಿಯ ಉದ್ಯಮಿ ಬಾಲಕೃಷ್ಣ ಜಿ. ಪೂಜಾರಿ (60) ಮೃತ ವ್ಯಕ್ತಿ.

ಮುಂಬಯಿಯ ಹಿರಿಯ ಉದ್ಯಮಿ ಮತ್ತು ಧಾರ್ಮಿಕ / ಸಾಮಾಜಿಕ ಮುಖಂಡರಾಗಿದ್ದ ದಿ‌. ಗಿರಿಯ ಪೂಜಾರಿ ಅವರ ಪುತ್ರರಾಗಿದ್ದ ಅವರು ಎರಡು ದಿನಗಳ ಹಿಂದೆ ಊರಿಗೆ‌ ಬಂದಿದ್ದು, ಸ್ವಗೃಹ ಮೂಳೂರು ಶಶಿಭವನದಲ್ಲಿ ವಾಸವಿದ್ದರು‌.

ರವಿವಾರ ಸಂಜೆ‌ ಅಂಗಡಿಗೆ ತೆರಳಿ, ಅಲ್ಲಿಂದ ಮನೆಗೆ ವಾಪಸ್ಸಾಗುತ್ತಿದ್ದಾಗ ಮನೆ ಸಮೀಪದಲ್ಲೇ ಕಾರು‌ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ತಲೆಗೆ ಗಂಭೀರ ಗಾಯಗೊಂಡಿದ್ದ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತರು ಪತ್ನಿ, ಪುತ್ರಿ ಮತ್ತು ಸಹೋದರ – ಸಹೋದರಿಯರನ್ನು ಅಗಲಿದ್ದಾರೆ.

ಮೂಳೂರು ಬಿಲ್ಲವ ಸಂಘದ ಕಟ್ಟಡ ನಿರ್ಮಾಣಕ್ಕೆ ಇವರ ಕುಟುಂಬ ಕೊಡುಗೆ ನೀಡಿದ್ದರು.ಇವರ ಅಕಾಲಿಕ ಮರಣ ಬಿಲ್ಲವ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು ಕುಟುಂಬಕ್ಕೆ ಈ ಘಟನೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ. ದುಃಖತಪ್ತ ಕುಟುಂಬಕ್ಕೆ ಮೂಳೂರು ಬಿಲ್ಲವ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಸಂತಾಪ ಸೂಚಿಸಿದ್ದಾರೆ.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

Vishwa News 24

Recent Posts

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? – vishwanews24

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? ಕ್ಯಾಲಿಫೋರ್ನಿಯಾ :…

28 minutes ago

ಬೆಂಗಳೂರು- ಮಂಗಳೂರು ಚತುಷ್ಪಥ ರೈಲು ಮಾರ್ಗ ಯೋಜನೆ ಅಭಿವೃದ್ದಿ: ಸೋಮಣ್ಣ – vishwanews24

ಬೆಂಗಳೂರು- ಮಂಗಳೂರು ಚತುಷ್ಪಥ ರೈಲು ಮಾರ್ಗ ಯೋಜನೆ ಅಭಿವೃದ್ದಿ: ಸೋಮಣ್ಣ ಬೆಂಗಳೂರು: ಬೆಂಗಳೂರಿನಿಂದ 100 ಕಿ.ಮೀ. ಸುತ್ತಮುತ್ತ ಇರುವ ನಗರಗಳಿಗೆ…

45 minutes ago

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ – vishwanews24

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ  - ಫಲ್ಗುಣಿ ನದಿಯಲ್ಲಿ ಶೋಧ…

54 minutes ago

ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ – vishwanews24

ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ…

1 hour ago

ನಾಗುರಿ ದುರಂತ – ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ – vishwanews24

ನಾಗುರಿ ದುರಂತ - ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ಮಂಗಳೂರು: ನಾಗುರಿಯಲ್ಲಿ ಮನೆ…

2 hours ago

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ – vishwanews24

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ ಬೆಂಗಳೂರು: ಆಂಧ್ರಪ್ರದೇಶದ ಭಯೋತ್ಪಾದನಾ ನಿಗ್ರಹ…

2 hours ago