Featured

ಮೂಳೂರು ಗ್ರಾಮದಲ್ಲಿ ನಿರ್ಮಾಣವಾಗುವ STP ವಿರುದ್ದ ಹೋರಾಟದ ಬಗ್ಗೆ ಗ್ರಾಮಸ್ಥರ ತುರ್ತು ಸಭೆ – vishwanews24

ಗ್ರಾಮಸ್ಥರ ಕೊನೆಯುಸಿರು ಇರುವವರೆಗೂ ಮೂಳೂರಿನಲ್ಲಿ ಒಂದಿಂಚು ಜಾಗದಲ್ಲಿ STP ಮಾಡಲು ಬಿಡುವುದಿಲ್ಲ ..

ಗುರುವಾರ ಬೆಳಗ್ಗೆ ಮೂಳೂರಿನ ಸಮಸ್ತ ಗ್ರಾಮಸ್ಥರಿಂದ ಕಾಪು ತಾಲೂಕು ಕಚೇರಿ ಹಾಗೂ ಪುರಸಭೆಗೆ ಗ್ರಾಮಸ್ಥರಿಂದ ಮನವಿ ಸಲ್ಲಿಕೆ

ಕಾಪು : ಇಲ್ಲಿನ ಪುರಸಭಾ ವ್ಯಾಪ್ತಿಯ ಮೂಳೂರು ಗ್ರಾಮದಲ್ಲಿ ನಿರ್ಮಾಣವಾಗುವ STPನಿರ್ಮಾಣದ ಬಗ್ಗೆ ಹೋರಾಟದ ಗ್ರಾಮಸ್ಥರ ತುರ್ತು ಸಭೆಯು ಸೋಮವಾರ ಸಂಜೆ ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದ ಹಿಂಭಾಗದ ವಠಾರದಲ್ಲಿ ನಡೆಯಿತು.

ಸಭೆಯ ಪೂರ್ವ ಭಾವಿಯಾಗಿ ಗ್ರಾಮದೈವ ಸರ್ವೇಶ್ವರ ಬಬ್ಬರ್ಯ‌ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಈ ಯೋಜನೆ ನಮ ಊರಿಗೆ ಬಾರದಂತೆ ತಡೆಯಲು ಗ್ರಾಮಸ್ಥರು ಪ್ರಾರ್ಥಿಸಿದರು.

ಇತ್ತೀಚೆಗೆ ವದಿನ ಪತ್ರಿಕೆಯಲ್ಲಿ ಪ್ರಕಟವಾದ ವಿಷಯದ ಪ್ರಕಾರ ಮೂಳೂರು ಗ್ರಾಮದಲ್ಲಿ ಕಾಪು ಪೇಟೆಯ ಕೊಳಚೆ ನೀರು ನಿರ್ವಹಣ ಘಟಕ ನಿರ್ಮಿಸಲು ಸುಮಾರು 1.78 ಎಕರೆ ಕೃಷಿ ಜಮೀನು ಕಾಪು ಪುರಸಭೆಗೆ ಮಂಜೂರು ಮಾಡಿರುತ್ತಾರೆ‌.

ಸದ್ರಿ ಜಮೀನ್ ನಂಜ ಜಮೀನು ಆಗಿತ್ತು ಇದರ ಸುತ್ತ ಮುತ್ತ ಮನೆ,ಕೃಷಿ ಭೂಮಿ ತೋಟ,ನಾಗಬನ,ದೈಬರಾಧನೆ ಸ್ಥಳಗಳಿದದ್ದು ಒಂದು ವೇಳೆ ಈ ಘಟಕ ನಿರ್ಮಾಣವಾದರೆ ಇಡೀ ಗ್ರಾಮದ ಕುಡಿಯುವ ನೀರಿನ ಭಾವಿ ಕಲುಷಿತಗೊಳ್ಖುವ ಸಾಧ್ಯತೆ ಇದ್ದು ಹಾಗೂ ಇದರಿಂದ ಹೊರ ಸೂಸುವ ದುರ್ನಾತ ಹಾಗೂ ಕೆಮಿಕಲ್ ಮಿಶ್ರಿತ ತ್ಯಾಜ್ಯ ಇಡೀ ಪರಿಸರವನ್ನು ಕಲುಷಿತ ಆಗುವುದರ ಜತೆಗೆ ಮಾರಕ ರೋಗ ಕ್ಯಾನ್ಸರ್ ಮಲೇರಿಯಾ ದಂತಹ ಮಾರಾಕ ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುತ್ತದೆ.

ಹೀಗಾಗಿ ಇಂದು ನಡೆದ ತುರ್ತು ಸಭೆಯಲ್ಲಿ ಮೂಳೂರಿನ ದಿನಾಂಕ ,24 ರಂದು ಗುರುವಾರ ಬೆಳಿಗ್ಗೆ ೮.೩೦ ಕ್ಕೆ ಮೂಳೂರು ಬಬ್ಬರಯ ಕಟ್ಟೆ ಬಳಿ ಸೇರಿ ಕಾಪು ಪುರಸಭೆ ಪ್ರತಿಭಟನೆಯೊಂದಿಗೆ ತೆರಳಿ ಮನವಿ ಪತ್ರ ನೀಡಲು ಉದ್ದೇಶಿಸಿದ್ದು ಈ ಪ್ರತಿಭಟನಾ ಜಾಥಕ್ಕೆ ಮೂಳೂರು ಗ್ರಾಮದ ಸಮಸ್ತ ಗ್ರಾಮಸ್ಥರು ಒಟಾಗಿ ಬಂದು ಪಾಲ್ಗೊಂಡು ವಾಹನದ ಮುಖಾಂತರ ತೆರಳಿ ತಹಾಶಿಲ್ದಾರು,ಪುರಸಭೆ ಮುಖ್ಯಾಧಿಕಾರಿ,ಪ್ರಾಧಿಕಾರ, ಶಾಸಕ,ಮಾಜಿ ಸಚಿವರಿಗೆ ಮನವಿ ನೀಡುವುದೆಂದು ನಿರ್ಧರಿಸಲಾಯಿತು.

ಗ್ರಾಮಸ್ಥರ ಕೊನೆಯ ಉಸಿರು ಇರುವವರೆಗೆ ಜನ ವಸತಿ ಪ್ರದೇಶದಲ್ಲಿ ಒಂದಿಂಚು ಜಾಗವನ್ನು ಕೂಡ ಇಂತಹ ಮಾರಕ ಯೋಜನೆ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಶಪತ ಮಾಡಲಾಯಿತು.

 

ಈ ಸಂಧರ್ಭದಲ್ಲಿ ಪ್ರಮುಖರಾದ ಮನೋಹರ್ ಅಢ್ಯಂತಾಯ,ನವೀನ್ ಶೆಟ್ಟಿ ಬಿಕ್ರಿಗುತ್ತು,ನ್ಯಾಯವಾದಿ ನವೀನ್ ಮೂಳೂರು,ಪತ್ರಕರ್ತ ಪುರುಷೋತ್ತಮ ಸಾಲಿಯಾನ್,ಪ್ರಭಾತ್ ಶೆಟ್ಟಿ,ಪ್ರಕಾಶ್ ಅಂಚನ್,ಅಶೋಕ್ ಪುತ್ರನ್ ,ಸುಧಾಕರ್,ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

3 days ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

3 days ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

3 days ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

3 days ago

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ – vishwanews24

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ  ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…

4 days ago

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ – ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು – vishwanews24

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…

4 days ago