ಕಾಪು : ರಾಷ್ಟ್ರೀಯ ಹೆದ್ದಾರಿ 66 ಮೂಳೂರು ಭಾರತ್ ಪೆಟ್ರೋಲಿಯಂ ಪಂಪ್‌ನಲ್ಲಿ ಫ್ಯೂಯೆಲ್ ಹಾಕಿಸಿಕೊಳ್ಳಲು ಬಂದ ಕಾರು ಚಾಲಕನೋರ್ವ ಕ್ಷುಲ್ಲಕ ಕಾರಣಕ್ಕೆ ಧಾಂದಲೆ ನಡೆಸಿ ಸಿಬಂದಿಯ ಮೇಲೆ ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ನಡೆದಿದೆ.
ಕಾರು ಚಾಲಕ ತನ್ನ ಕಾರಿಗೆ ಡಿಸೇಲ್ ಹಾಕಿಸಲೆಂದು ಬಂದು ಎರಡು ಸಾವಿರ ರೂಪಾಯಿ ಮೊತ್ತದ ಡೀಸೆಲ್ ಹಾಕುವಂತೆ ಹೇಳಿದ್ದನು. ಆ ವೇಳೆ ಪಂಪ್ ಸಿಬಂದಿ ಅಂಕಿತ್ ಎಂಬಾತ ತಪ್ಪಿ ಪೆಟ್ರೋಲ್ ಗನ್‌ಎತ್ತಿದ್ದು ಇದರಿಂದ ಆಕ್ರೋಶಿತನಾದ ಚಾಲಕ ಪೆಟ್ರೋಲ್ ಮತ್ತು ಡೀಸೆಲ್ ಯುನಿಟ್‌ಗಳಿಗೆ ಕಾಲಿನಿಂದ ತುಳಿದು ಸೆ„ಪಿಂಗ್ ಮೆಷೀನ್ ಅನ್ನು ಕಿತ್ತುಕೊಂಡು ಒಡೆದು ಹಾಕಿ, ಧಾಂದಲೆ ನಡೆಸಿದ್ದನು.
ಘಟನೆಯನ್ನು ವಿಚಾರಿಸಲು ಬಂದ ಪಂಪ್‌ನ ಸೂಪರ್‌ವೈಸರ್ ಪುಷ್ಪರಾಜ್ ಎಂಬವರು ನಿಮ್ಮ ಹಣ ಹಿಂದೆ ಹಾಕಿದ್ದೇವೆ ಎಂದರೂ ಕೇಳದೆ ಅವರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಹಲ್ಲೆಗೊಳಗಾದ ಸೂಪರ್‌ವೈಸರ್ ಪುಷ್ಪರಾಜ್ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಅಪರಿಚಿತ ಚಾಲಕನ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್‌ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…